Sunday, September 20, 2026

BDA Apartments

ತಮಿಳುನಾಡು ಸಿಎಂ ಆಗಿ ಎಂ.ಕೆ ಸ್ಟಾಲಿನ್ ಪ್ರಮಾಣ ವಚನ ಸ್ವೀಕಾರ… BDA JK_Adv BDA Adv
Home Front Page ತಮಿಳುನಾಡು ಸಿಎಂ ಆಗಿ ಎಂ.ಕೆ ಸ್ಟಾಲಿನ್ ಪ್ರಮಾಣ ವಚನ ಸ್ವೀಕಾರ…

ತಮಿಳುನಾಡು ಸಿಎಂ ಆಗಿ ಎಂ.ಕೆ ಸ್ಟಾಲಿನ್ ಪ್ರಮಾಣ ವಚನ ಸ್ವೀಕಾರ…

ಚೆನ್ನೈ,ಮೇ,7,2021(www.justkannada.in): ತಮಿಳುನಾಡು ರಾಜ್ಯದ  ನೂತನ ಮುಖ್ಯಮಂತ್ರಿಯಾಗಿ ಎಂ.ಕೆ ಸ್ಟಾಲಿನ್  ಶುಕ್ರವಾರ ಅಧಿಕಾರ ಸ್ವೀಕಾರ ಮಾಡಿದರು.jk

ಇಂದು ಬೆಳಗ್ಗೆ ಚೆನ್ನೈಯ ರಾಜಭವನದಲ್ಲಿ ನಡೆದ ಸರಳ ಸಮಾರಂಭದಲ್ಲಿ ಎಂ ಕೆ ಸ್ಟಾಲಿನ್  ಅವರು ಅಧಿಕಾರ ಸ್ವೀಕರಿಸಿದರು. ಎಂ.ಕೆ.ಸ್ಟಾಲಿನ್ ಅವರಿಗೆ ರಾಜ್ಯಪಾಲ ಬನ್ವಾರಿಲಾಲ್ ಪುರೋಹಿತ್ ಪ್ರಮಾಣ ವಚನ ಬೋಧಿಸಿದರು. ಎಂ.ಕೆ ಸ್ಟಾಲಿನ್ ಜತೆ 34 ಶಾಸಕರು ಸಹ ನೂತನ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದರು.MK Stalin - sworn – as- Tamil Nadu -CM

ತಮಿಳು ನಾಡಿನ ಖ್ಯಾತ ರಾಜಕಾರಣಿ ಡಿಎಂಕೆ ಪಕ್ಷದ ಸ್ಥಾಪಕ ಎಂ ಕರುಣಾನಿಧಿಯವರ ಪುತ್ರ ಎಂ.ಕೆ.ಸ್ಟಾಲಿನ್ 2018, ಆಗಸ್ಟ್ 28ರಿಂದ ಪಕ್ಷವನ್ನು ಮುನ್ನಡೆಸಿಕೊಂಡು ಬಂದಿದ್ದಾರೆ. ಎಂ. ಕೆ.ಸ್ಟಾಲಿನ್ ಅವರು ಈ ಹಿಂದೆ 2009ರಲ್ಲಿ ತಮಿಳು ನಾಡಿನ ಉಪ ಮುಖ್ಯಮಂತ್ರಿ ಹುದ್ದೆ ನಿಭಾಯಿಸಿದ್ದರು.

Key words: MK Stalin – sworn – as- Tamil Nadu -CM