Friday, November 6, 2026

Dasara Wishes

Just Kannada DasraWishes_JK DasraWishes JK
Happy Dasara
Home Front Page ಹೆಚ್ ಡಿಕೆಗೆ ಹಳ್ಳಿಗುಗ್ಗು ಹೇಳಿಕೆ: ಪ್ರಿಯಾಂಕ್ ಖರ್ಗೆಗೆ ಹೆಚ್ ಡಿ ರೇವಣ್ಣ ತಿರುಗೇಟು

ಹೆಚ್ ಡಿಕೆಗೆ ಹಳ್ಳಿಗುಗ್ಗು ಹೇಳಿಕೆ: ಪ್ರಿಯಾಂಕ್ ಖರ್ಗೆಗೆ ಹೆಚ್ ಡಿ ರೇವಣ್ಣ ತಿರುಗೇಟು

ಹೆಚ್ ಡಿಕೆಗೆ ಹಳ್ಳಿಗುಗ್ಗು ಹೇಳಿಕೆ: ಪ್ರಿಯಾಂಕ್ ಖರ್ಗೆಗೆ ಹೆಚ್ ಡಿ ರೇವಣ್ಣ ತಿರುಗೇಟು

ಬೆಂಗಳೂರು,ನವೆಂಬರ್,6,2026 (www.justkannada.in):  ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿಗೆ ಹಳ್ಳಿಗುಗ್ಗು ರೀತಿ ಆಡುತ್ತಾರೆ ಎಂದಿದ್ದ ಗೃಹ ಸಚಿವ ಪ್ರಿಯಾಂಕ್ ಖರ್ಗೆಗೆ ಮಾಜಿ ಸಚಿವ ಹೆಚ್ ಡಿ ರೇವಣ್ಣ ತಿರುಗೇಟು ನೀಡಿದ್ದಾರೆ.

ಈ ಕುರಿತು ಮಾತನಾಡಿದ ಹೆಚ್ ಡಿ ರೇವಣ್ಣ, ಹೆಚ್ ಡಿಕೆ ಅವರನ್ನ ಹಳ್ಳಿಗುಗ್ಗು ಎನ್ನುತ್ತಾರೆ. 38 ಸಾವಿರ ಕೋಟಿ ರೂ. ಸಾಲಮನ್ನಾ ಮಾಡಿದ್ದು ಯಾರು? 150 ಕಾಲೇಜು ನಿರ್ಮಾಣಕ್ಕೆ ಕಾರಣಕರ್ತರು ಯಾರು? ಐಟಿಐ ಕಾಲೇಜು ಸ್ಥಾಪನೆ ಮಾಡಿದ್ದು ಇದೇ ಹಳ್ಳಿಗುಗ್ಗು. ಡಿಪ್ಲೋಮಾ ಕಾಲೇಜು ಮಾಡಿದ್ದು ಸಹ  ಇದೇ ಹಳ್ಳೀಗುಗ್ಗುನೇ.  ಹೆಚ್ ಡಿಕೆ ತಾಜ್ ವೆಸ್ಟೆಂಡ್ ನಲ್ಲಿ ಉಳಿಯುತ್ತಾರೆಂದು ಹೇಳುತ್ತಾರೆ. ಕೇಂದ್ರದ ವಿರೋಧ ಪಕ್ಷದ ನಾಯಕರು ಎಲ್ಲಿ ಉಳಿಯುತ್ತಾರೆ.  ಇದೆಲ್ಲಾ ಸುಮ್ಮನೆ ಆಪಾದನೆ ಮಾಡೋದಷ್ಟೆ ಎಂದು ಹೇಳಿದರು.

ಹಾಲು ಮೊಸರಿನ ದರ ಏರಿಕೆ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಹೆಚ್ ಡಿ ರೇವಣ್ಣ,  ರಾಜ್ಯ ಸರ್ಕಾರಕ್ಕೆ ಯಾರು ಐಡಿಯಾ ಕೊಟ್ಟರೋ ಗೊತ್ತಿಲ್ಲ. ಹಿಂದೆ ರೈತರಿಗೆ ಸಿದ್ದರಾಮಯ್ಯ 4 ರೂ . ನಾವು 4 ರೂ ಕೊಟ್ಟಿದ್ದವು. ಒಂದೇ ಸಲ 8 ರೂಪಾಯಿ ಹಾಲಿನ ದರ ಏರಿಕೆ ಮಾಡಿದ್ದಾರೆ.  ರೈತರಿಗೆ ಎಷ್ಟು ದಿನ 7 ರೂಪಾಯಿ ಕೊಡಿತ್ತಾರೆ ನೋಡೋಣ ಎಂದರು.'Halliguggu hd revanna

ನಾನು 12 ವರ್ಷ ಹಾಲು ಒಕ್ಕೂಟದಲ್ಲಿ ಕೆಲಸ ಮಾಡಿದ್ದೇನೆ.  8 ರೂ ಹೆಚ್ಚಳ ಮಾಡಿದರೆ ತಿಂಗಳಿಗೆ 8 ಕೋಟಿ ರೂ. ನಷ್ಟ ಆಗುತ್ತೆ ಅಂತ ಪತ್ರ  ಬರೆದಿದ್ದೆ. ವರ್ಷಕ್ಕೆ 100 ಕೋಟಿ ರೂ. ನಷ್ಟ ಆಗುತ್ತೆ ಎಂದು ಎರಡು ಬಾರಿ ಪತ್ರ ಬರೆದಿದ್ದೆ ಖಾಸಗಿಯವರನ್ನು ಮಟ್ಟ ಹಾಕಬೇಕು ಎಂದು ಕೆಲಸ ಮಾಡಿದ್ದೇನೆ. ಹಾಸನ ಹಾಲು ಒಕ್ಕೂಟಕ್ಕೆ ತಿಂಗಳಿಗೆ 8 ಕೋಟಿ ರೂ. ನಷ್ಟ ಆಗುತ್ತದೆ ಎಂದರು.'Halliguggu jk02_new jk02 new

 

English Summary
Title

Priyank Kharge's 'Halli Guggu' Remark at HD Kumaraswamy Sparks Karnataka Row

Short Description
The "Halli Guggu" (village simpleton) remark by Karnataka Minister Priyank Kharge against Union Minister H.D. Kumaraswamy has ignited a fierce political clash in Karnataka. Kharge mocked Kumaraswamy’s allegations against the state police, challenging him to provide hard evidence rather than act like a village simpleton. Turning the insult into a badge of rural pride, Kumaraswamy proudly declared, "Yes, I am a Halli Guggu," citing his deep village roots and farmer-centric work. Backed by JD(S) leaders like H.D. Revanna, the party launched a massive statewide protest campaign, accusing the Congress government of urban elitism and insulting the working class.
Keywords
'Halliguggu, against, Central Minister, HDK, HD Revanna, Priyank Kharge