Friday, November 6, 2026

Dasara Wishes

ಮೈಸೂರಿನಲ್ಲಿ ಮಹಾರಾಜ ಟ್ರೋಫಿ ಕೆಎಸ್ ಸಿಎ ಟಿ-20 ಟೂರ್ನಿ ಉದ್ಘಾಟಿಸಿದ ನಟ ಕಿಚ್...
Happy Dasara
Home Front Page ಯಾರಾದ್ರೂ ಕೇಂದ್ರ ಸಚಿವರ ಭೇಟಿಗೆ ಪ್ರಯತ್ನ ಮಾಡಿದ್ರಾ? ‘ಕೈ’ ಸರ್ಕಾರದ ವಿರುದ್ದ ಹೆಚ್ ಡಿಕೆ ಕಿಡಿ

ಯಾರಾದ್ರೂ ಕೇಂದ್ರ ಸಚಿವರ ಭೇಟಿಗೆ ಪ್ರಯತ್ನ ಮಾಡಿದ್ರಾ? ‘ಕೈ’ ಸರ್ಕಾರದ ವಿರುದ್ದ ಹೆಚ್ ಡಿಕೆ ಕಿಡಿ

ಯಾರಾದ್ರೂ ಕೇಂದ್ರ ಸಚಿವರ ಭೇಟಿಗೆ ಪ್ರಯತ್ನ ಮಾಡಿದ್ರಾ? ‘ಕೈ’ ಸರ್ಕಾರದ ವಿರುದ್ದ ಹೆಚ್ ಡಿಕೆ ಕಿಡಿ

ಬೆಂಗಳೂರು,ನವೆಂಬರ್,6,2026 (www.justkannada.in): ಬರ ವಿಚಾರದಲ್ಲಿ ಕೇಂದ್ರ ಸರ್ಕಾರ ಸ್ಪಂದಿಸುತ್ತಿಲ್ಲ ಎಂದು ಆರೋಪಿಸುತ್ತಿರುವ ಕಾಂಗ್ರೆಸ್ ವಿರುದ್ದ ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿ ಕಿಡಿಕಾರಿದ್ದಾರೆ.

ಈ ಕುರಿತು ಮಾತನಾಡಿದ ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿ, ಯಾರಾದರೂ ಕೇಂದ್ರ ಸಚಿವರ ಭೇಟಿಗೆ ಪ್ರಯತ್ನ ಮಾಡಿದ್ರಾ? ರಾಜ್ಯದ ಪರಿಸ್ಥಿತಿ ಬಗ್ಗೆ ನಿಖರವಾಗಿ ಮಾಹಿತಿ ಕೊಡಬೇಕು ಅಲ್ವಾ? ಶಾಸಕರ ಒತ್ತಡಕ್ಕೆ ಬರಪೀಡಿತ ತಾಲ್ಲೂಕುಗಳನ್ನ ಸೇರಿಸಿದರೇ ಹೇಗೆ? ನಿಖರವಾಗಿ ಮಾಹಿತಿ ಕೊಡಬೇಕು ತಾನೇ ಎಂದು ವಾಗ್ದಾಳಿ ನಡೆಸಿದರು.

2018ರಲ್ಲಿ ಕಾಂಗ್ರೆಸ್ ಜೊತೆಯಲ್ಲಿಯೇ ಸರ್ಕಾರ ಮಾಡಿದ್ದೇನೆ. ಕೊಡಗು ಜಿಲ್ಲೆಯಲ್ಲಿ ಸಮಸ್ಯೆ ಆದ ತಕ್ಷಣ ಕ್ರಮ ಕೈಗೊಂಡಿದ್ದೆ. ಆಗ ನಾವು ಕೇಂದ್ರದ ಬಳಿ ಹೋಗಿದ್ದವಾ?  ಸಾಲಮನ್ನಾ ಮಾಡಿದಾಗ ಕೇಂದ್ರದ ಬಳಿ ನಿಯೋಗ ಹೋಗಿದ್ನಾ? ನಾನು ತಾಜ್ ವೆಸ್ಟೆಂಡ್ ನಲ್ಲೇ ಕಾಲ ಕಳೆದೆ ಎಂದು ಹೇಳುತ್ತಾರೆ.   ಆ ರೀತಿ ಇದ್ದಿದ್ದರೇ ಸಾಲಮನ್ನಾ ಮಾಡಲು ಆಗುತ್ತಿತ್ತಾ?  ಕಾಂಗ್ರೆಸ್ ನವರಿಂದ ಸರ್ಟಿಫೀಕೇಟ್ ಪಡೆಯುವ ಅವಶ್ಯಕತೆ ಇಲ್ಲ ಎಂದು ಟಾಂಗ್ ಕೊಟ್ಟರು.ಸಿದ್ದರಾಮಯ್ಯ ವಿರುದ್ದದ ಸ್ಟಿಂಗ್‌ ಸಂಚಿನಲ್ಲಿ ಶಾಮೀಲಾದ ʼನೀಲಿಕಣ್ಣಿನ ಮಂತ್ರಿʼ- ಹೆಚ್.ಡಿಕೆ ವಾಗ್ದಾಳಿ

ಮಂಡ್ಯದಲ್ಲಿ ಟೆಸ್ಟಿಂಗ್ ಸೆಂಟರ್ ಮಾಡಲು ಜಾಗ ಕೇಳ್ತಾ ಇದ್ದೇನೆ.  ನೂರು ಎಕರೆ ಭೂಮಿ ಕೇಳಿದ್ದೆ ಅದನ್ನೂ ರಾಜಕೀಯಕ್ಕೆ ಬಳಸುತ್ತಿದ್ದಾರೆ. ಅಭಿವೃದ್ದಿ ವಿಚಾರ ಬಂದಾಗ ಜವಾಬ್ದಾರಿಯಿಂದ ಕೆಲಸ ಮಾಡಬೇಕು ಎಂದು ಹೆಚ್ ಡಿಕೆ ಹರಿಹಾಯ್ದರು.Congress jk02_new jk02 new

 

English Summary
Title

Did anyone try to meet the Union Minister? HDK lashes out at the Congress government.

Short Description
Union Minister H.D. Kumaraswamy has lashed out at the Congress party, which has alleged that the Central government is failing to respond to the drought situation. Addressing the issue, Union Minister H.D. Kumaraswamy questioned, "Did anyone even attempt to meet with the Union Ministers? Shouldn't precise information regarding the state's situation be provided? Is it right to include drought-affected taluks simply due to pressure from MLAs? Accurate information must be provided, shouldn't it?"
Keywords
Congress, alleged, Central government, not responding, drought situation, Central Minister, HD Kumaraswamy