Friday, November 6, 2026

Dasara Wishes

ಮೈಸೂರಿನಲ್ಲಿ ಮಹಾರಾಜ ಟ್ರೋಫಿ ಕೆಎಸ್ ಸಿಎ ಟಿ-20 ಟೂರ್ನಿ ಉದ್ಘಾಟಿಸಿದ ನಟ ಕಿಚ್...
Happy Dasara
Home Front Page 200 ಕೋಟಿ ರೂ. ಹೂಡಿಕೆ: ಸಚಿವ ಎಂ.ಬಿ.ಪಾಟೀಲ್ ಸಮ್ಮುಖದಲ್ಲಿ ಬೇಯರ್ ಕಂಪನಿ ಜತೆ ಒಪ್ಪಂದಕ್ಕೆ ಸಹಿ

200 ಕೋಟಿ ರೂ. ಹೂಡಿಕೆ: ಸಚಿವ ಎಂ.ಬಿ.ಪಾಟೀಲ್ ಸಮ್ಮುಖದಲ್ಲಿ ಬೇಯರ್ ಕಂಪನಿ ಜತೆ ಒಪ್ಪಂದಕ್ಕೆ ಸಹಿ

200 ಕೋಟಿ ರೂ. ಹೂಡಿಕೆ: ಸಚಿವ ಎಂ.ಬಿ.ಪಾಟೀಲ್ ಸಮ್ಮುಖದಲ್ಲಿ ಬೇಯರ್ ಕಂಪನಿ ಜತೆ ಒಪ್ಪಂದಕ್ಕೆ ಸಹಿ

ಬೆಂಗಳೂರು,ನವೆಂಬರ್,6,2026 (www.justkannada.in):  ಆರೋಗ್ಯ ಸೇವೆ ಮತ್ತು ಕೃಷಿ ಕ್ಷೇತ್ರಗಳಲ್ಲಿ ಜಾಗತಿಕ ಮಟ್ಟದ ಕಂಪನಿಯಾಗಿರುವ ಜರ್ಮನಿ ಮೂಲದ ಬೇಯರ್ ಸೈನ್ಸ್ ಅಂಡ್ ಇನ್ನೋವೇಶನ್ ಬೆಂಗಳೂರಿನ ಸಮೀಪ ತನ್ನ ಅತ್ಯಾಧುನಿಕ ಉತ್ಪಾದನಾ ಸ್ಥಾವರ ಅಭಿವೃದ್ಧಿಗೆ ₹200 ಕೋಟಿ ಹೂಡಿಕೆ ಮಾಡಲಿದ್ದು, ಈ ಸಂಬಂಧ ಅದು ಶುಕ್ರವಾರ ಸರಕಾರದೊಂದಿಗೆ ಒಡಂಬಡಿಕೆಗೆ ಸಹಿ ಹಾಕಿದೆ.

ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ ಬಿ ಪಾಟೀಲ್ ಅವರ ಸಮ್ಮುಖದಲ್ಲಿ ಇದು ನೆರವೇರಿತು. ಕೈಗಾರಿಕಾ ಇಲಾಖೆಯ ಪ್ರಧಾನ ಕಾರ್ಯದರ್ಶಿ ಎಸ್.ಸೆಲ್ವಕುಮಾರ್ ಮತ್ತು ಬೇಯರ್ ಕಂಪನಿಯ ಸಿಎಫ್ಒ ವಿನೀತ್ ಜಿಂದಾಲ್ ಒಡಂಬಡಿಕೆಗೆ ಸಹಿ ಹಾಕಿದರು.Rs 200 crore mb patil mb patil 1

ಈ ಸಂದರ್ಭದಲ್ಲಿ ಮಾತನಾಡಿದ ಸಚಿವ ಎಂ.ಬಿ ಪಾಟೀಲ್, ಬೇಯರ್ ಕಂಪನಿಯು ಮುಂದಿನ 7 ವರ್ಷಗಳಲ್ಲಿ ಹಂತಹಂತವಾಗಿ ಈ ಹೂಡಿಕೆ ಮಾಡಲಿದೆ. ಇದರಿಂದ 220 ಉದ್ಯೋಗಗಳು ಸೃಷ್ಟಿಯಾಗಲಿವೆ. ತಾವು ಇತ್ತೀಚೆಗೆ ರಾಜ್ಯಕ್ಕೆ ಬಂಡವಾಳ ಆಕರ್ಷಿಸಲು ನೆದರ್ಲೆಂಡ್ಸ್ ಪ್ರವಾಸ ಕೈಗೊಂಡಿದ್ದಾಗ ಆಮ್ಸ್ಟರ್ ಡ್ಯಾಮ್ ನಲ್ಲಿ ಕಂಪನಿಯ ಉನ್ನತ ಮಟ್ಟದ ಪ್ರತಿನಿಧಿಗಳ ಜತೆ ಮಾತುಕತೆ ನಡೆಸಲಾಗಿತ್ತು ಎಂದಿದ್ದಾರೆ.

ರಸಗೊಬ್ಬರ, ಕೀಟನಾಶಕ ಮತ್ತು ಶಿಲೀಂದ್ರನಾಶಕ ಮುಂತಾದವನ್ನು ಉತ್ಪಾದಿಸುವ ಈ ಕಂಪನಿಯು ಹೂಡಿಕೆಯಿಂದ 220 ಉದ್ಯೋಗಗಳು ಸೃಷ್ಟಿಯಾಗಲಿವೆ ಎಂದು ಅವರು ಮಾಹಿತಿ ನೀಡಿದ್ದಾರೆ.200 ಕೋಟಿ ರೂ. ಹೂಡಿಕೆ: ಸಚಿವ ಎಂ.ಬಿ.ಪಾಟೀಲ್ ಸಮ್ಮುಖದಲ್ಲಿ ಬೇಯರ್ ಕಂಪನಿ ಜತೆ ಒಪ್ಪಂದಕ್ಕೆ ಸಹಿ

ಕಂಪನಿಯು ಮುಂದಿನ ವರ್ಷದ ಏಪ್ರಿಲ್ ತಿಂಗಳಲ್ಲಿ ನಡೆಯಲಿರುವ ಜಾಗತಿಕ ಹೂಡಿಕೆದಾರರ ಸಮಾವೇಶಕ್ಕೂ ಮೊದಲೇ ಯೋಜನೆಯ ಭೂಮಿಪೂಜೆ ನೆರವೇರಿಸಲು ಬಯಸಿದ್ದು, ತ್ವರಿತವಾಗಿ ತಯಾರಿಕೆ ಚಟುವಟಿಕೆಗಳನ್ನು ಆರಂಭಿಸಲು ಉತ್ಸುಕವಾಗಿದೆ. ಕಂಪನಿಯು ಈಗಾಗಲೇ ಬೆಂಗಳೂರಿನಲ್ಲಿ ತನ್ನ ಸೇವಾ ಮತ್ತು ನಾವೀನ್ಯತೆಯ ಹಬ್ ಹಾಗೂ ಚಾಮರಾಜ ನಗರದಲ್ಲಿ ಬೆಳೆ ಪರೀಕ್ಷಾ ಕೇಂದ್ರವನ್ನು ಹೊಂದಿದೆ. ಭಾರತದಲ್ಲಿ ಇದು 125 ವರ್ಷಗಳಿಂದಲೂ ಇದ್ದು 11 ಸಾವಿರ ಜನರಿಗೆ ಕೆಲಸ ಕೊಟ್ಟಿದೆ. ದೇಶದಲ್ಲಿ ಬೇಯರ್ ಕಂಪನಿಯು 7 ಉತ್ಪಾದನಾ ಸ್ಥಾವರಗಳು ಮತ್ತು 3 ಜಿಇಸಿ ಕೇಂದ್ರಗಳನ್ನು ಹೊಂದಿದೆ ಎಂದು ಅವರು ನುಡಿದಿದ್ದಾರೆ.investment jk02_new jk02 new

ಈ ಸಂದರ್ಭದಲ್ಲಿ ಕೈಗಾರಿಕಾ ಇಲಾಖೆಯ ಆಯುಕ್ತೆ ಖುಷ್ಬೂ ಗೋಯಲ್ ಚೌಧರಿ, ಕೆಐಎಡಿಬಿ ಗೋವಿಂದ ರೆಡ್ಡಿ ಉಪಸ್ಥಿತರಿದ್ದರು.

 

English Summary
Title

Bayer Invests ₹200 Crore for New Global Capability Centre in Bengaluru, Karnataka

Short Description
Bayer has committed a ₹200 crore investment to establish a new Global Capability Centre (GCC) in Bengaluru, Karnataka. Following a high-level meeting with Large and Medium Industries Minister M.B. Patil, the German life sciences giant announced the expansion, which is projected to generate 220 high-value jobs. The deal follows Minister Patil’s recent investment-attraction visit to Amsterdam. Bayer aims to hold its groundbreaking ceremony before the upcoming Global Investors Meet. This upcoming hub will significantly boost Karnataka's tech ecosystem, leveraging Bengaluru’s skilled talent pool.
Keywords
Rs 200 crore, investment, Agreement, signed, Bayer. Minister, M.B. Patil