ಚಿತ್ರದುರ್ಗ,ನವೆಂಬರ್,6,2026 (www.justkannada.in): ರಾಜ್ಯದಲ್ಲಿ ನಮ್ಮ ಸರ್ಕಾರ ಬಂದ ಬಳಿಕ ಜನರು ಬಹಳ ನೆಮ್ಮದಿ ಸಂತಸದಿಂದ ಇದ್ದಾರೆ ಆರೋಗ್ಯ ಸಚಿವ ಯು.ಟಿ ಖಾದರ್ ತಿಳಿಸಿದ್ದಾರೆ.
ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಸಚಿವ ಯುಟಿ ಖಾದರ್, ನಮ್ಮ ಸರ್ಕಾರ ಬಂದ ಬಳಿಕ ಜನ ಸಮಾಧಾನದಿಂದ ಇದ್ದಾರೆ. ರಾಜ್ಯದಲ್ಲಿ ಜನರು ಬಹಳ ನೆಮ್ಮದಿ ಸಂತಸದಿಂದ ಇದ್ದಾರೆ. ಬಿಜೆಪಿ ಸರ್ಕಾರ ಿದ್ದಾಗ 6 ತಿಂಗಳಿಗೊಮ್ಮೆ ಸಮಸ್ಯೆ ಆಗುತ್ತಿತ್ತು. ವಿಪಕ್ಷದವರ ಮಾತು ಕೇಳಿ ನಾವು ರಾಜಕೀಯ ಮಾಡುವುದಿಲ್ಲ ಎಂದರು.
ಗ್ಯಾರಂಟಿ ಯೋಜನೆಗಳನ್ನ ಜಾರಿ ಮಾಡುವುದು ಅಸಾಧ್ಯ ಎಂದು ಬಿಜೆಪಿ ಹೇಳಿತ್ತು. ಆದರೆ ಅಸಾಧ್ಯ ಎಂದಿದ್ದನ್ನು ನಾವು ಸಾಧಿಸಿ ತೋರಿಸಿದ್ದೇವೆ ಎಂದು ಸಚಿವ ಯುಟಿ ಖಾದರ್ ತಿಳಿಸಿದರು.






