Friday, November 6, 2026

Dasara Wishes

Just Kannada DasraWishes_JK DasraWishes JK
Happy Dasara
Home Front Page ರಾಜ್ಯಕ್ಕೆ ಮತ್ತೆ ಶಾಕ್: ತಮಿಳುನಾಡಿಗೆ ನಿತ್ಯ 3 ಸಾವಿರ ಕ್ಯೂಸೆಕ್ ನೀರು ಹರಿಸಲು CWRC ಶಿಫಾರಸ್ಸು

ರಾಜ್ಯಕ್ಕೆ ಮತ್ತೆ ಶಾಕ್: ತಮಿಳುನಾಡಿಗೆ ನಿತ್ಯ 3 ಸಾವಿರ ಕ್ಯೂಸೆಕ್ ನೀರು ಹರಿಸಲು CWRC ಶಿಫಾರಸ್ಸು

ರಾಜ್ಯಕ್ಕೆ ಮತ್ತೆ ಶಾಕ್: ತಮಿಳುನಾಡಿಗೆ ನಿತ್ಯ 3 ಸಾವಿರ ಕ್ಯೂಸೆಕ್ ನೀರು ಹರಿಸಲು CWRC ಶಿಫಾರಸ್ಸು

ನವದೆಹಲಿ,ನವೆಂಬರ್,6,2026 (www.justkannada.in):  ಈ ಬಾರಿ ಮಳೆರಾಯ ಕೈಕೊಟ್ಟ ಹಿನ್ನೆಲೆಯಲ್ಲಿ ಜಲಾಶಯಗಳು ಭರ್ತಿಯಾಗದೇ ತೀವ್ರ ಬರಗಾಲ ಆವರಿಸಿದ್ದು ಈ ಮಧ್ಯೆಯೂ ತಮಿಳುನಾಡಿಗೆ ಪದೇ ಪದೇ ನೀರು ಹರಿಸುವಂತೆ ಆದೇಶ ನೀಡುವ ಮೂಲಕ ಕರ್ನಾಟಕ ನೀರು ನಿರ್ವಹಣಾ ಸಮಿತಿ ಕರ್ನಾಟಕಕ್ಕೆ ಶಾಕ್ ನೀಡುತ್ತಿದೆ.

ಇಂದು ನವದೆಹಲಿಯಲ್ಲಿ ನಡೆದ ಸಿಡಬ್ಲ್ಯುಆರ್ ಸಿ ಸಭೆಯಲ್ಲಿ ಮತ್ತೆ ತಮಿಳುನಾಡಿಗೆ ಪ್ರತಿನಿತ್ಯ 15 ದಿನಗಳವರೆಗೆ 3 ಸಾವಿರ ಕ್ಯೂಸೆಕ್ ನೀರು ಹರಿಸುವಂತೆ ಕರ್ನಾಟಕ ಸರ್ಕಾರಕ್ಕೆ ಶಿಫಾರಸ್ಸು ಮಾಡಿದೆ.CWRC krs

ರಾಜ್ಯದಲ್ಲಿ ಸರಿಯಾಗಿ ಮಳೆಯಾಗದೇ ಕೆಆರ್ ಎಸ್, ಕಬಿನಿ ಜಲಾಶಯಗಳು ಭರ್ತಿಯಾಗಿಲ್ಲ. ಪ್ರತಿದಿನ ತಮಿಳುನಾಡಿಗೆ ನೀರು ಹರಿಸುತ್ತಿರುವುದರಿಂದ ಭರ್ತಿಯಾಗಿದ್ದ ಕಬಿನ ಜಲಾಶಯ ನೀರಿನ ಮಟ್ಟ ಕುಸಿದಿದೆ. ಹಾಗೆಯೇ  ಕೆಆರ್ ಎಸ್ ಜಲಾಶಯದಲ್ಲೂ ನೀರಿನ ಮಟ್ಟ 100 ಅಡಿಗೆ ಕುಸಿದಿದ್ದು ಕುಡಿಯುವ ನೀರಿಗೂ ಸಂಕಷ್ಟ ತಲೆದೂರುವ ಪರಿಸ್ಥಿತಿ ಎದುರಾಗಿದೆ.CWRC jk02_new jk02 new

 

English Summary
Title

Cauvery Water Dispute: CWRC Orders Karnataka to Release 3,000 Cusecs to Tamil Nadu

Short Description
The Cauvery Water Regulation Committee (CWRC) has directed Karnataka to release Cauvery water at 3,000 cusecs per day to Tamil Nadu. Endorsed by the Cauvery Water Management Authority (CWMA), the order requires a total flow of 3.88 TMC at the Biligundlu gauge over a 15-day period. The directive highlights the ongoing Cauvery water dispute, balancing Tamil Nadu's demand for 14,236 cusecs to save its delta crops against Karnataka's resistance due to a severe 55% deficit in reservoir inflows and widespread drought.
Keywords
CWRC, recommends, Karnataka releasing, 3, 000 cusecs, water, Tamil Nadu