ಮೈಸೂರಿನಲ್ಲೂ ಟೊಮ್ಯಾಟೊಗೆ  ಸಿಸಿ‌ ಕ್ಯಾಮೆರಾ ಕಣ್ಗಾವಲು.

ಮೈಸೂರು,ಜುಲೈ,21,2023(www.justkannada.in):  ಇತ್ತೀಚೆಗೆ ದೇಶದಲ್ಲಿ ಟೊಮ್ಯಾಟೊ ಬೆಲೆ ಭಾರಿ ಏರಿಕೆಯಾಗಿದ್ದು ಟೊಮ್ಯಾಟೊ ಬೆಳೆದ ರೈತರಿಗೆ ಹೆಚ್ಚು ಹೆಚ್ಚು ಆದಾಯ ಬರುತ್ತಿದ್ದರೆ ಅತ್ತ ಗ್ರಾಹಕರು ಸಂಕಷ್ಟಕ್ಕೀಡಾಗಿದ್ದಾರೆ. ಈ ಮಧ್ಯೆ  ಟೊಮ್ಯಾಟೋ ಬೆಳೆದ ರೈತರಿಗೆ ಕಳ್ಳಕಾಕರ ಕಾಟ ಜಾಸ್ತಿಯಾಗಿದ್ದು ಈ ಹಿನ್ನೆಲೆಯಲ್ಲಿ ಹಲವೆಡೆ ಸಿಸಿ ಕ್ಯಾಮೆರಾ ಗಳನ್ನ ಆಳವಡಿಸಿದ್ದನ್ನ ನೋಡಿದ್ದೇವೆ. ಇದೀಗ ಮೈಸೂರಿನಲ್ಲೂ ಟೊಮ್ಯಾಟೊಗೆ ಸಿಸಿ‌ ಕ್ಯಾಮೆರ ಕಣ್ಗಾವಲು ಹಾಕಲಾಗಿದೆ.

ಹೌದು  ಹುಣಸೂರು ತಾಲೂಕಿನ ಕುಪ್ಪೆ ಗ್ರಾಮದಲ್ಲಿ ರೈತ ಸಹೋದರರು ಜಮೀನಿನಲ್ಲಿ ಸಿಸಿ ಕ್ಯಾಮೆರಾ ಅಳವಡಿಸಿದ್ದಾರೆ. ಟೊಮೆಟೊ ಕಳ್ಳತನ ಹೆಚ್ಚಿದ ಹಿನ್ನೆಲೆ ಗ್ರಾಮದ ನಾಗೇಶ್ ಮತ್ತು ಕೃಷ್ಣ ಎಂಬ ಸಹೋದರು ಸಿಸಿ ಕ್ಯಾಮೆರಾ ಅಳವಡಿಕೆ ಮಾಡಿದ್ದಾರೆ.

ಸಹೋದರರಿಬ್ಬರು ಒಟ್ಟು 10 ಎಕರೆ ಜಮೀನು ಹೊಂದಿದ್ದು, ಮೂರೂವರೆ ಎಕರೆ ಪ್ರದೇಶದಲ್ಲಿ ಟೊಮ್ಯಾಟೊ ಬೆಳೆ ಬೆಳೆದಿದ್ದಾರೆ. ಟೊಮೆಟೊ ದರ ಹೆಚ್ಚಳವಾದ ಹಿನ್ನೆಲೆಯಲ್ಲಿ ಜಮೀನಿನಲ್ಲಿ ಕಳ್ಳತನ  ಮಾಡಲು ಬಂದ ಇಬ್ಬರನ್ನು ಹಿಡಿದು ಸಹೋದರರು ಪೊಲೀಸರಿಗೆ ಒಪ್ಪಿಸಿದ್ದಾರೆ. ಈ ಹಿನ್ನೆಲೆ ಜಮೀನಿನಲ್ಲಿ ಎರಡು ಸಿಸಿ ಕ್ಯಾಮೆರಾ ಅಳವಡಿಸಿದ್ದು, ಅದನ್ನ ಮೊಬೈಲ್ ಫೋನ್‌ ಗೆ ಕನೆಕ್ಟ್ ಮಾಡಿಕೊಂಡಿದ್ದಾರೆ.

Key words: CC camera- surveillance – tomatoes – Mysore