Thursday, October 15, 2026

Dasara Wishes

Strengthening DasraWishes_JK DasraWishes JK
Happy Dasara
Home Front Page ರೈತರ ಬಗ್ಗೆ ಹೇಳಿಕೆ: ಸಚಿವ ಶಿವಾನಂದ್ ಪಾಟೀಲ್ ವಜಾಗೆ ಸಿ.ಟಿ ರವಿ ಆಗ್ರಹ.

ರೈತರ ಬಗ್ಗೆ ಹೇಳಿಕೆ: ಸಚಿವ ಶಿವಾನಂದ್ ಪಾಟೀಲ್ ವಜಾಗೆ ಸಿ.ಟಿ ರವಿ ಆಗ್ರಹ.

ಚಿಕ್ಕಮಗಳೂರು,ಡಿಸೆಂಬರ್,25,2023(www.justkannada.in): ಸಾಲಮನ್ನಾದ ಆಸೆಗೆ ರೈತರು ಬರಗಾಲ ಬರಲಿ ಎನ್ನುತ್ತಾರೆ ಎಂದು ಹೇಳಿಕೆ ನೀಡಿದ್ದ ಸಕ್ಕರೆ ಸಚಿವ ಶಿವಾನಂದ್ ಪಾಟೀಲ್ ವಿರುದ್ದ ಮಾಜಿ ಸಚಿವ ಸಿ.ಟಿ ರವಿ ಗುಡುಗಿದ್ದಾರೆ.

ಈ ಕುರಿತು ಮಾತನಾಡಿರುವ ಸಿ.ಟಿ ರವಿ, ಶಿವಾನಂದ ಪಾಟೀಲ್ ಹಿರಿಯರು ಅನುಭವಿ ಮಂತ್ರಿ . ಶಿವಾನಂದ್ ಪಾಟೀಲ್ ಮಾತು ಸರಿಯಲ್ಲ.  ಅವರು ಹೇಳಿರುವ ಮಾತು ರೈತರಿಗೆ ಮಾಡಿದ ಅಪಮಾನ. ಇದು ಕಾಂಗ್ರೆಸ್ ಸರ್ಕಾರದ ಅಹಂಕಾರದ ಭಾವನೆ.  ಪಿತ್ತ ನೇತ್ತಿಗೇರಿ ಪ್ರಜ್ಞೆ ಮರೆತು ಮಾತನಾಡಿದ್ದಾರೆ ಎಂದು ಕಿಡಿಕಾರಿದರು. ರೈತರ ಬಗ್ಗೆ ಹೇಳಿಕೆ: ಸಚಿವ ಶಿವಾನಂದ್ ಪಾಟೀಲ್ ವಜಾಗೆ ಸಿ.ಟಿ ರವಿ ಆಗ್ರಹ ct ravi

ಸಿದ್ದರಾಮಯ್ಯನವರೇ ಸಚಿವರ ಮದ ಇಳಿಸಬೇಕು.  ಇಲ್ಲದಿದ್ದರೇ ಜನರೇ ನಿಮ್ಮನ್ನ ಕೆಳಗಿಳಿಸುತ್ತಾರೆ. ಶಿವಾನಂದ್ ಪಾಟೀಲ್ ಸಚಿವರಾಗಿರಲು ಯೋಗ್ಯರಲ್ಲ.  ತಕ್ಷಣ ಶಿವಾನಂದ್ ಪಾಟೀಲ್ ರನ್ನು ಸಚಿವ ಸಂಪುಟದಿಂದ ವಜಾಗೊಳಿಸಬೇಕು.  ರೈತ ಮಳೆಗಾಗಿ ಕಾಯುತ್ತಾನೆ. ಇವರ ಭಿಕ್ಷೆಗಾಗಿ ಅಲ್ಲ. ಕೂಡಲೇ ಶಿವಾನಂದ ಪಾಟೀಲ್ ಉಚ್ಚಾಟನೆ ಮಾಡಬೇಕು ಎಂದು ಸಿ.ಟಿ ರವಿ ಆಗ್ರಹಿಸಿದರು.

Key words: statement -about –farmers- Minister-Sivanand Patil-dismissal – CT Ravi