Saturday, September 19, 2026

BDA Apartments

ದಸರಾ ಗಜಪಡೆ ಕ್ಯಾಂಪ್ ನಿಂದ ವರಲಕ್ಷ್ಮೀ ಆನೆ ಕಾಡಿಗೆ ವಾಪಸ್… BDA JK_Adv BDA Adv
Home DASARA-2019 ದಸರಾ ಗಜಪಡೆ ಕ್ಯಾಂಪ್ ನಿಂದ ವರಲಕ್ಷ್ಮೀ ಆನೆ ಕಾಡಿಗೆ ವಾಪಸ್…

ದಸರಾ ಗಜಪಡೆ ಕ್ಯಾಂಪ್ ನಿಂದ ವರಲಕ್ಷ್ಮೀ ಆನೆ ಕಾಡಿಗೆ ವಾಪಸ್…

ಮೈಸೂರು,ಸೆ,20,2019(www.justkannada.in):  ವಿಶ್ವ ವಿಖ್ಯಾತ ಮೈಸೂರು ದಸರಾ ಮಹೋತ್ಸವದಲ್ಲಿ ಪಾಲ್ಗೊಳ್ಳಲು ಮೈಸೂರಿಗೆ ಆಗಮಿಸಿರುವ ದಸರಾ ಗಜಪಡೆ ಆನೆಗಳು ಮೈಸೂರು ಅರಮನೆಯಲ್ಲಿ ಬೀಡುಬಿಟ್ಟಿವೆ. ಈ ನಡುವೆ ಈಶ್ವರ ಆನೆಯ ಬಳಿಕ ಇದೀಗ ವರಲಕ್ಷ್ಮೀ ಆನೆ ದಸರಾ ಗಜಪಡೆ ಕ್ಯಾಂಪ್ ನಿಂದ ಕಾಡಿಗೆ ವಾಪಸ್ ಆಗಿದೆ.

ಹೌದು, ವರಲಕ್ಷ್ಮೀ ಆನೆ ತುಂಬು ಗರ್ಭಿಣಿಯಾಗಿದ್ದು ಈ ಹಿನ್ನೆಲೆ ವರಲಕ್ಷ್ಮೀಯನ್ನ  ಮತ್ತೆ ಶಿಬಿರಕ್ಕೆ ಅರಣ್ಯಾಧಿಕಾರಿಗಳು  ಕಳುಹಿಸಿಕೊಟ್ಟಿದ್ದಾರೆ. ಇದೀಗ ವರಲಕ್ಷ್ಮೀ ಆನೆಯನ್ನ ಲಾರಿಯಲ್ಲಿ ಅರಮನೆಯಿಂದ ಕಾಡಿಗೆ ವಾಪಸ್ ಕರೆದೊಯ್ಯಲಾಗಿದೆ. ಗರ್ಭಿಣಿಯಾಗಿರುವ ಹಿನ್ನೆಲೆ ವರಲಕ್ಷ್ಮೀ ಆನೆ ಎರಡನೇ ಹಂತದ ತಾಲೀಮಿನಲ್ಲಿ ಪಾಲ್ಗೊಂಡಿರಲಿಲ್ಲ.

ಇನ್ನು ನಗರದ ವಾತಾವರಣಕ್ಕೆ ಹೊಂದಿಕೊಳ್ಳದ ಹಿನ್ನೆಲೆ ಈಶ್ವರ ಆನೆಯನ್ನ ಗಜಪಡೆ ಕ್ಯಾಂಪ್ ನಿಂದ  ಕಾಡಿಗೆ ವಾಪಸ್ ಕಳುಹಿಸಲಾಗಿತ್ತು. ಈ ಮಧ್ಯೆ  ತಾಲೀಮು ನಡೆಸುತ್ತಿದ್ದ ವೇಳೆ ಈಶ್ವರ ಆನೆ ಗಾಬರಿಯಾಗಿತ್ತು. ಈ ಬಗ್ಗೆ ಸಚಿವ ವಿ.ಸೋಮಣ್ಣ ಆತಂಕ ವ್ಯಕ್ತಪಡಿಸಿದ್ದರು. ಹೀಗಾಗಿ ಈಶ್ವರ ಆನೆಯನ್ನ ವಾಪಸ್ ಕಳುಹಿಸಲಾಗಿತ್ತು.

Key words: mysore- Varalakshmi- Elephant- returns -Dasara Gajapade- camp-forest