ಫಿಫಾ ರ‍್ಯಾಂಕಿಂಗ್‌: 104ನೇ ಸ್ಥಾನಕ್ಕೆ ಭಾರತ

ಜುರಿಚ್‌, ಸೆಪ್ಟೆಂಬರ್ 20, 2019 (www.justkannada.in): : ಭಾರತ ಫುಟ್‌ಬಾಲ್‌ ತಂಡ ನೂತನ ಫಿಫಾ ರ‍್ಯಾಂಕಿಂಗ್‌ನಲ್ಲಿ 104ನೇ ಸ್ಥಾನಕ್ಕೆ ಇಳಿದಿದೆ.

ಬೆಲ್ಜಿಯಂ ಮೊದಲ ಸ್ಥಾನ ಉಳಿಸಿಕೊಂಡಿದ್ದು, ಬ್ರೆಜಿಲ್‌ ತಂಡವನ್ನು ಮೂರನೇ ಸ್ಥಾನಕ್ಕೆ ತಳ್ಳಿರುವ ಫ್ರಾನ್ಸ್‌ ಎರಡನೇ ಸ್ಥಾನಕ್ಕೆ ಲಗ್ಗೆ ಹಾಕಿದೆ.

ಭಾರತ ಈ ತಿಂಗಳ ಆರಂಭದಲ್ಲಿ ಏಷ್ಯನ್‌ ಚಾಂಪಿಯನ್ಸ್‌ ಕತಾರ್‌ ವಿರುದ್ಧ ಗೋಲಿಲ್ಲದೇ ಡ್ರಾ ಮಾಡಿಕೊಂಡು, 2022ರ ವಿಶ್ವ ಕಪ್‌ ಅರ್ಹತಾ ಟೂರ್ನಿಯಲ್ಲಿ ಮೊದಲ ಪಾಯಿಂಟ್‌ ಗಳಿಸಿತ್ತು.

ಈ ಡ್ರಾ ಹೊರತಾಗಿಯೂ ಕತಾರ್‌, ರ‍್ಯಾಂಕಿಂಗ್‌ ಪಟ್ಟಿಯಲ್ಲಿ 62ನೇ ಸ್ಥಾನ ಉಳಿಸಿಕೊಂಡಿದೆ.