ಕೆ.ಎಲ್.ರಾಹುಲ್ ಟೀಂ ಇಂಡಿಯಾ ‘ಭವಿಷ್ಯದ’ ಕ್ಯಾಪ್ಟನ್ ! ಸ್ಪಷ್ಟ ಸಂದೇಶ ರವಾನಿಸಿದ ಬಿಸಿಸಿಐ

ಬೆಂಗಳೂರು, ನವೆಂಬರ್ 11, 2021 (www.justkannada.in): ಕನ್ನಡಿಗ ಕೆ.ಎಲ್.ರಾಹುಲ್ ಮುಂದಿನ ಟೀಂ ಇಂಡಿಯಾ ನಾಯಕ ಎಂಬ ಪರೋಕ್ಷ ಸಂದೇಶವನ್ನು ಬಿಸಿಸಿಐ ನೀಡಿದೆ.

ಟಿ20 ತಂಡಕ್ಕೆ ರೋಹಿತ್ ಶರ್ಮಾರನ್ನು ನಾಯಕನಾಗಿ ನಿಯುಕ್ತಿಗೊಳಿಸಿರುವ ಬಿಸಿಸಿಐ ಆಯ್ಕೆಗಾರರು ಕೆಎಲ್ ರಾಹುಲ್ ವಿಚಾರದಲ್ಲಿ ಸ್ಪಷ್ಟ ಸಂದೇಶ ನೀಡಿದ್ದಾರೆ.

ರಾಹುಲ್ ರನ್ನು ಉಪ ನಾಯಕನಾಗಿ ಮಾಡಲಾಗಿದೆ. ಈ ಮೂಲಕ ಮುಂದಿನ ನಾಯಕ ಕನ್ನಡಿಗ ರಾಹುಲ್ ಎಂಬ ಸಂದೇಶ ರವಾನೆಯಾಗಿದೆ.

ರೋಹಿತ್ ಗೆ 34 ವರ್ಷವಾಗಿದೆ. ಹೀಗಾಗಿ ಟೀಂ ಇಂಡಿಯಾ ಮುಂದಿನ ನಾಯಕನನ್ನು ತಯಾರು ಮಾಡಬೇಕಿದೆ. ಇದಕ್ಕಾಗಿ ರಾಹುಲ್ ಗೆ ಒಂದಷ್ಟು ಅನುಭವ ನೀಡಲು ಸದ್ಯಕ್ಕೆ ಉಪನಾಯಕನನ್ನಾಗಿ ನೇಮಿಸಲಾಗಿದೆ ಎನ್ನಲಾಗಿದೆ,