ಸಂತಾಪದಲ್ಲೂ ‘ಆ್ಯಪ್ ಪ್ರಚಾರ’: ತಲೈವಾ ವಿರುದ್ಧ ಅಪ್ಪು ಫ್ಯಾನ್ಸ್ ಕಿಡಿ !

ಬೆಂಗಳೂರು, ನವೆಂಬರ್ 11, 2021 (www.justkannada.in): ತಲೈವಾ , ಸೂಪರ್ ಸ್ಟಾರ್ ರಜನಿಕಾಂತ್ ನಿನ್ನೆ ಟ್ವೀಟ್ ಮೂಲಕ ಪುನೀತ್ ರಾಜ್‌ಕುಮಾರ್ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ.

ನೆಟ್ಟಿಗರು ರಜನಿ ಟ್ವೀಟ್‌ಗೆ ಬೇಸರ ವ್ಯಕ್ತಪಡಿಸಿದ್ದಾರೆ. ಈ ಸಂಬಂಧ ಸಾಕಷ್ಟು ಬೇಸರ, ಆಕ್ರೋಶವೂ ಸೋಷಿಯಲ್ ಮೀಡಿಯಾದಲ್ಲಿ ವ್ಯಕ್ತವಾಗುತ್ತಿದೆ.

ಸೂಪರ್ ಸ್ಟಾರ್ ರಜನಿಕಾಂತ್ ಒಂದು ಸಾಲಿನ ಟ್ವೀಟ್ ಮಾಡಿ, ಅದಕ್ಕೆ ಹೂಟ್ ಆಪ್ ಲಿಂಕ್ ಅನ್ನು ಸೇರಿಸಿದ್ದರು. ಇದು ವಾಯ್ಸ್ ಬೇಸ್ಡ್ ಸೋಶಿಯಲ್ ಮೀಡಿಯಾ ಆಪ್ ಆಗಿದ್ದು, ಪುತ್ರಿಯ ಆಪ್ ಮೂಲಕ ಪುನೀತ್ ರಾಜ್‌ಕುಮಾರ್ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ.

ಇಂತಹ ದು:ಖದ ಸಮಯದಲ್ಲೂ ಹೂಟ್ ಆಪ್ ಪ್ರಚಾರ ಮಾಡುವುದು ಬೇಕಿತ್ತಾ? ಸಂತಾಪ ಸೂಚಿಸಲು ಹೂಟ್ ಆಪ್ ಏಕೆ ಬೇಕು” ಅಂತ ಸೋಶಿಯಲ್ ಮೀಡಿಯಾದಲ್ಲಿ ಜನರು ಬೇಸರ ವ್ಯಕ್ತಪಡಿಸಿದ್ದಾರೆ.