ಐಸಿಸಿ ಟಿ20 ವಿಶ್ವಕಪ್: ಇಂದು ಸೆಮೀಸ್’ನಲ್ಲಿ ಪಾಕಿಸ್ತಾನ-ಆಸ್ಟ್ರೇಲಿಯಾ ಫೈಟ್

ಬೆಂಗಳೂರು, ನವೆಂಬರ್ 11, 2021 (www.justkannada.in): ಐಸಿಸಿ ಟಿ20 ವಿಶ್ವಕಪ್ ನಲ್ಲಿ ಇಂದು ಸೆಮಿ ಫೈನಲ್ ಗೆ ಎಂಟ್ರಿಯಾಗಿರುವ ಪಾಕಿಸ್ಥಾನ ತಂಡ ಆಸ್ಟ್ರೇಲಿಯಾವನ್ನು ಎದುರಿಸಲಿದೆ.

ಇಂದು ರಾತ್ರಿ ನಡೆಯಲಿರುವ ದ್ವಿತೀಯ ಸೆಮಿ ಫೈನಲ್ಲಿ ಬಾಬರ್ ಮತ್ತು ಫಿಂಚ್ ಪಡೆಗಳು ಮುಖಾಮುಖಿಯಾಗುತ್ತಿದೆ.

ಸೆಮಿ ಪಂದ್ಯಕ್ಕೂ ಮುನ್ನ ಪಾಕಿಸ್ಥಾನ ತಂಡಕ್ಕೆ ಆಘಾತ ಎದುರಾಗಿದೆ. ಮೊಹಮ್ಮದ್ ರಿಜ್ವಾನ್ ಮತ್ತು ಶೋಯೆಬ್ ಮಲಿಕ್ ಜ್ವರದಿಂದ ಬಳಲುತ್ತಿದ್ದಾರೆ.

ಗುರುವಾರ ದುಬೈನಲ್ಲಿ ನಡೆಯುತ್ತಿರುವ ಆಸ್ಟ್ರೇಲಿಯಾ ವಿರುದ್ಧದ ಸೆಮಿಫೈನಲ್ ಪಂದ್ಯದಿಂದ ಹೊರಗುಳಿಯುವ ಸಾಧ್ಯತೆಯಿದೆ ಎನ್ನಲಾಗಿದೆ.
ಪಾಕ್ ತಂಡ ಸೂಪರ್ 12 ಹಂತದ ಎಲ್ಲಾ ಐದು ಪಂದ್ಯಗಳನ್ನು ಗೆದ್ದು ಸೆಮಿ ಪ್ರವೇಶ ಪಡೆದಿದೆ. ಆದರೆ ಸೆಮಿ ಫೈನಲ್ ನಲ್ಲಿ ಬದಲಾವಣೆ ಪಾಕ್ ತಂಡಕ್ಕೆ ಅನಿವಾರ್ಯವಾಗಬಹುದು.