ಅಭಿಮಾನಿಯಿಂದ ಅಪ್ಪು ಸಮಾಧಿ ನೋಡಲು ಬಾಗಲಕೋಟೆಯಿಂದ ಬೆಂಗಳೂರಿಗೆ ಸೈಕಲ್ ಯಾತ್ರೆ

ಬೆಂಗಳೂರು, ನವೆಂಬರ್ 11, 2021 (www.justkannada.in): ಅಪ್ಪು ಅಭಿಮಾನಿಯೊಬ್ಬರು ಸಮಾಧಿ ಭೇಟಿಗೆ ಸೈಕಲ್ ಯಾತ್ರೆ ಮೂಲಕ ಬಾಗಲಕೋಟೆಯಿಂದ ಬೆಂಗಳೂರಿಗೆ ಬರುತ್ತಿದ್ದಾರೆ.

ಹೌದು. ರಾಘವೇಂದ್ರ ಗಾಣಿಗೇರ ಎಂಬ ಯುವಲ ಬಾಗಲಕೋಟೆ ಜಿಲ್ಲೆಯ ಬೀಳಗಿ ತಾಲೂಕಿನ ಬಾದರದಿನ್ನಿ ಗ್ರಾಮದಿಂದ ಅಭಿಮಾನಿ ಸೈಕಲ್ ಯಾತ್ರೆಯನ್ನು ಆರಂಭಿಸಿದ್ದಾರೆ.

ಹುನಗುಂದ ಪಟ್ಡಣದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು, ಅಪ್ಪು ಅಭಿಮಾನಿಗಳಿಂದ ಸೈಕಲ್ ಯಾತ್ರೆ ಹೊರಟ ಅಭಿಮಾನಿಗೆ ಸನ್ಮಾನ ಮಾಡಿದ್ದಾರೆ.

ರಾಘವೇಂದ್ರ ಕನ್ನಡ ಧ್ವಜ ಸೈಕಲ್ ಗೆ ಕಟ್ಟಿಕೊಂಡು, ಸೈಕಲ್ ಹಿಂದೆ ಮುಂದೆ ಅಪ್ಪು ಭಾವಚಿತ್ರ ಕಟ್ಟಿಕೊಂಡು ಅಭಿಮಾನಿ ಸೈಕಲ್ ಯಾತ್ರೆ ನಡೆಸುತ್ತಿದ್ದಾರೆ.