Tuesday, September 22, 2026

BDA Apartments

ಹಾಲಿನ ದರ ಹೆಚ್ಚಳ ವಿಚಾರ: ಇಂದು ಕೆಎಂಎಫ್ ಜೊತೆ ಸಿಎಂ ಸಿದ್ಧರಾಮಯ್ಯ ಸಭೆ BDA JK_Adv BD...
Home Front Page ಹಾಲಿನ ದರ ಹೆಚ್ಚಳ ವಿಚಾರ: ಇಂದು ಕೆಎಂಎಫ್ ಜೊತೆ ಸಿಎಂ ಸಿದ್ಧರಾಮಯ್ಯ ಸಭೆ..

ಹಾಲಿನ ದರ ಹೆಚ್ಚಳ ವಿಚಾರ: ಇಂದು ಕೆಎಂಎಫ್ ಜೊತೆ ಸಿಎಂ ಸಿದ್ಧರಾಮಯ್ಯ ಸಭೆ..

ಮೈಸೂರು,ಜುಲೈ,21,2023(www.justkannada.in): ಹಾಲಿನ ದರ ಹೆಚ್ಚಳ ವಿಚಾರಕ್ಕೆ ಸಂಬಂಧಿಸಿದಂತೆ ಇಂದು ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ಸಭೆ ನಡೆಯಲಿದ್ದು ಹಾಲಿನ ದರ ಮತ್ತಷ್ಟು ದುಬಾರಿಯಾಗುತ್ತಾ ಕಾದು ನೋಡಬೇಕಿದೆ.

ಸಿಎಂ ನಿವಾಸ ಕೃಷ್ಣಾದಲ್ಲಿ ಸಂಜೆ 6ಗಂಟೆಗೆ ರಾಜ್ಯದ ಹಾಲು ಒಕ್ಕೂಟಗಳು ಹಾಗೂ ಕೆಎಂಎಫ್ ಅಧ್ಯಕ್ಷರುಗಳ ಜತೆ ಸಿಎಂ ಸಿದ್ದರಾಮಯ್ಯ ಸಭೆ ನಡೆಸಲಿದ್ದಾರೆ. ಈಗಾಗಲೇ ಹಾಲಿನ ದರ ಲೀಟರ್ ಗೆ 5ರೂ ಹೆಚ್ಚಳ ಮಾಡಲು ಕೆಎಂಎಫ್ ನಿರ್ಧರಿಸಿದೆ. ಹಾಲಿನ ದರ ಹೆಚ್ಚಳ ವಿಚಾರ meeting-siddaramaiah meeting siddaramaiah

ರಾಜ್ಯ ಸರ್ಕಾರದ ಅನುಮತಿ ಪಡೆದು ದರ ಹೆಚ್ಚಳ ಮಾಡುವುದಾಗಿ ಕೆಎಂಎಫ್ ನಿರ್ಧಾರ ಮಾಡಿದ್ದು, ಹೀಗಾಗಿ ಹಾಲಿನ ದರ ಹೆಚ್ಚಳಕ್ಕೆ ರಾಜ್ಯ ಸರ್ಕಾರ ಒಪ್ಪಿಗೆ ನೀಡುತ್ತಾ..? ಹಾಲಿನ ದರ ಮತ್ತಷ್ಟು ದುಬಾರಿಯಾಗಿ ಜನಸಾಮಾನ್ಯರ ಮೇಲೆ ಹೊರೆ ಬೀಳಲಿದೆಯಾ ಎಂಬ ಬಗ್ಗೆ ಇಂದು ತೀರ್ಮಾನವಾಗಲಿದೆ.

Key words: Milk- price- hike –issue-CM Siddaramaiah-meeting – KMF -today.