Sunday, September 6, 2026

BDA Apartments

Home Crime 11.86 ಕೋಟಿ ರೂ. ಮೌಲ್ಯದ  ಮಾದಕವಸ್ತು ಜಪ್ತಿ: 10 ಮಂದಿಯ ಬಂಧನ

11.86 ಕೋಟಿ ರೂ. ಮೌಲ್ಯದ  ಮಾದಕವಸ್ತು ಜಪ್ತಿ: 10 ಮಂದಿಯ ಬಂಧನ

ಬೆಂಗಳೂರು,ಏಪ್ರಿಲ್,16,2026 (www.justkannada.in):  ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಪೊಲೀಸರು 11.86 ಕೋಟಿ ರೂ. ಮೌಲ್ಯದ  ಮಾದಕವಸ್ತು ಜಪ್ತಿ ಮಾಡಿ ಇಬ್ಬರು ವಿದೇಶಿ ಮಹಿಳೆಯರು ಮತ್ತು ಐವರು ಹೊರರಾಜ್ಯದವರನ್ನು ಸೇರಿ 10 ಮಂದಿಯನ್ನು ಬಂಧಿಸಿದ್ದಾರೆ.

ಬಂಧಿತ ಆರೋಪಿಗಳಿಂದ  5.9 ಕೆಜಿ ಎಂಡಿಎಂಎ, 1.15 ಕೆಜಿ ಕೊಕೇನ್,  21 ಕೆಜಿ ಗಾಂಜಾ, 19 ಗ್ರಾಮ ಎಕ್ಸ್ ಟೆಸಿ ಮಾತ್ರೆ, 1 ದ್ವಿಚಕ್ರ ವಾಹನವನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಒಟ್ಟು 11.86 ಕೋಟಿ ರೂ ಮೌಲ್ಯದ ಮಾದಕವಸ್ತು  ಜಪ್ತಿ ಮಾಡಲಾಗಿದೆ ಎನ್ನಲಾಗಿದೆ.

ಬೆಂಗಳೂರಿನ ಯಲಹಂಕ, ಡಿಜೆ ಹಳ್ಳಿ,  ಬಾಣಸವಾಡಿ, ಕೋರಮಂಗಲ ಠಾಣೆ , ಬೊಮ್ಮನಹಳ್ಳಿ ಪುಲಕೇಶೀನಗರ ಪೊಲೀಸ್  ಠಾಣೆಯಲ್ಲಿ ಪ್ರಕರಣಗಳು ದಾಖಲಾಗಿದೆ.

Key words: Bangalore, Drugs, worth Rs 11.86 crore, seized