ನವದೆಹಲಿ,ಏಪ್ರಿಲ್,16,2026 (www.justkannada.in): ಲೋಕಸಭೆಯಲ್ಲಿ ಇಂದು ಮಂಡನೆಯಾಗಿರುವ ಕ್ಷೇತ್ರ ಮರುವಿಂಗಡಣೆ ಮಸೂದೆಗೆ ಕಾಂಗ್ರೆಸ್ ಸೇರಿದಂತೆ ವಿಪಕ್ಷಗಳು ವಿರೋಧ ವ್ಯಕ್ತಪಡಿಸಿದ್ದು ಇದಕ್ಕೆ ಕೇಂದ್ರ ಗೃಹ ಸಚಿವ ಅಮಿತ್ ಶಾ ತಿರುಗೇಟು ನೀಡಿದ್ದಾರೆ.
ಲೋಕಸಭೆಯಲ್ಲಿ ಕ್ಷೇತ್ರ ಮರುವಿಂಗಡಣೆ ಮಸೂದೆ, ಲೋಕಸಭೆ ಸಂವಿಧಾನ (131 ತಿದ್ದುಪಡಿ)2026 ವಿಧೇಯಕವನ್ನು ಕೇಂದ್ರ ಕಾನೂನು ಸಚಿವ ಅರ್ಜುನ್ ರಾಮ್ ಮೇಘ್ವಾಲ್ ಮಂಡಿಸಿದರು. ಆದರೆ ಇದಕ್ಕೆ ಕಾಂಗ್ರೆಸ್ ನ ಕೆ.ಸಿ ವೇಣುಗೋಪಾಲ್ ಸೇರಿ ವಿಪಕ್ಷಗಳು ವಿರೋಧ ವ್ಯಕ್ತಪಡಿಸಿದವು. ಆದರೆ ರಾಜಕೀಯದಲ್ಲಿ ಶೇ 33 ರಷ್ಟು ಮಹಿಳಾ ಮೀಸಲಾತಿಗೆ ಸಹಮತ ವ್ಯಕ್ತಪಡಿಸಿವೆ.
ಈ ವಿಚಾರಕ್ಕೆ ಸಂಬಂಧಿಸಿದಂತೆ ಲೋಕಸಭೆಯಲ್ಲಿ ಮಾತನಾಡಿದ ಕೇಂದ್ರ ಗೃಹ ಸಚಿವ ಅಮಿತ್ ಶಾ ಮಹಿಳಾ ಮೀಸಲಾತಿಗೆ ಈ ಎರಡು ಮಸೂದೆ ಅನಿವಾರ್ಯ. ಅದಕ್ಕಾಗಿ ಈ ಎರಡು ಮಸೂದೆ ತಂದಿದ್ದೇವೆ ಅವರು ವಿರೋಧ ಮಾಡಬೇಕು ಅಂತಾನೇ ಬಂದಿದ್ದಾರೆ. ಅದಕ್ಕಾಗಿ ಎಲ್ಲದಕ್ಕೂ ಅವರು ವಿರೋಧ ಮಾಡುತ್ತಾರೆ. ಸಂವಿಧಾನ ತಿದ್ದುಪಡಿ ಬಗ್ಗೆ ಪ್ರತ್ಯಕ ಚರ್ಚೆಯಾಗಬೇಕು. ಸಂವಿಧಾನ ತಿದ್ದುಪಡಿ ಬಳಿಕ ಉಳಿದ ಮಸೂದೆ ಜಾರಿಯಾಗಲಿದೆ ಎಂದು ಅಮಿತ್ ಶಾ ಹೇಳಿದರು.
Key words: Lokasabha, two bills, essential, women’s reservation, Amit Shah







