Thursday, October 22, 2026

Dasara Wishes

ಸಿಡಿ ವಿಚಾರದಲ್ಲಿ 5 ಕೋಟಿ ವ್ಯವಹಾರದ ಬಗ್ಗೆ ಮೊದಲೇ ಹೇಳಿದ್ದೆ- ಮಾಜಿ ಸಿಎಂ ಹೆಚ...
Happy Dasara
Home Front Page ಗಿನ್ನಿಸ್ ದಾಖಲೆಯ ಡ್ರೋನ್ ಪ್ರದರ್ಶನ, ದಸರಾ ದೀಪಾಲಂಕಾರಕ್ಕೆ ಸಚಿವ ಕೆ.ಜೆ. ಜಾರ್ಜ್ ಮೆಚ್ಚುಗೆ

ಗಿನ್ನಿಸ್ ದಾಖಲೆಯ ಡ್ರೋನ್ ಪ್ರದರ್ಶನ, ದಸರಾ ದೀಪಾಲಂಕಾರಕ್ಕೆ ಸಚಿವ ಕೆ.ಜೆ. ಜಾರ್ಜ್ ಮೆಚ್ಚುಗೆ

ಗಿನ್ನಿಸ್ ದಾಖಲೆಯ ಡ್ರೋನ್ ಪ್ರದರ್ಶನ, ದಸರಾ ದೀಪಾಲಂಕಾರಕ್ಕೆ ಸಚಿವ ಕೆ.ಜೆ. ಜಾರ್ಜ್ ಮೆಚ್ಚುಗೆ

ಮೈಸೂರು, ಅಕ್ಟೋಬರ್, 22, 2026 (www.justkannada.n):  ವಿಶ್ವವಿಖ್ಯಾತ ಮೈಸೂರು ದಸರಾ ಡ್ರೋನ್ ಪ್ರದರ್ಶನದಲ್ಲಿ ಮತ್ತೊಂದು ಗಿನ್ನಿಸ್ ದಾಖಲೆ ನಿರ್ಮಿಸಿರುವ ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ ನಿಯಮಿತ (ಸೆಸ್ಕ್) ಸಾಧನೆಯನ್ನು ಶ್ಲಾಘಿಸಿರುವ ಇಂಧನ ಮತ್ತು ಪ್ರವಾಸೋದ್ಯಮ ಸಚಿವ ಕೆ.ಜೆ.ಜಾರ್ಜ್, ದೀಪಾಲಂಕಾರ ವ್ಯವಸ್ಥೆ ಬಗ್ಗೆಯೂ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ದಸರಾ ಜಂಬೂಸವಾರಿ ಮೆರವಣಿಗೆಯ ವೈಭವ, ಆಕರ್ಷಕ ಡ್ರೋನ್‌ ಪ್ರರ್ಶನವನ್ನು ವೀಕ್ಷಿಸಿದ ಇಂಧನ ಸಚಿವ ಕೆಜೆ ಜಾರ್ಜ್, “ಈ ಬಾರಿ 3,473 ಡ್ರೋನ್ ಗಳ ಮೂಲಕ ಆಕರ್ಷಕ ನವಿಲಿನ ಕಲಾಕೃತಿ ರಚಿಸಿ ಗಿನ್ನಿಸ್ ದಾಖಲೆ ಮಾಡುವ ಮೂಲಕ ದಸರಾ ವೈಭವವನ್ನು ಜಾಗತಿಕ ಮಟ್ಟದಲ್ಲಿ ಇನ್ನಷ್ಟು ಪರಿಣಾಮಕಾರಿಯಾಗಿ ಪ್ರಚುರ ಪಡಿಸುವಲ್ಲಿ ಇಂಧನ ಇಲಾಖೆ ಮತ್ತು ಸೆಸ್ಕ್ ಪ್ರಮುಖ ಪಾತ್ರ ವಹಿಸಿವೆ,” ಎಂದರು.Mysuru Dasara DRONE

“ದಸರಾ ಮಹೋತ್ಸವಕ್ಕೆ ವಿದ್ಯುತ್ ದೀಪಾಲಂಕಾರವು ವಿಶಿಷ್ಟ ಮೆರುಗು ನೀಡಿದ್ದು, ನಗರದ 146 ಕಿ.ಮೀ ರಸ್ತೆಗಳು, 123 ವೃತ್ತಗಳು, ಪ್ರಮುಖ ಸ್ಥಳಗಳಲ್ಲಿ ಬಣ್ಣಬಣ್ಣದ ವಿದ್ಯುತ್ ದೀಪಗಳಿಂದ ನಿರ್ಮಿಸಿರುವ 80 ಕಲಾಕೃತಿಗಳು ಮೈಸೂರಿನ ಅಂದವನ್ನು ಹೆಚ್ಚಿಸಿದೆ. ದಸರಾ ವೇಳೆ ವಿದ್ಯುತ್ ದೀಪಾಲಂಕಾರವನ್ನು ಸಮರ್ಪಕವಾಗಿ ನಿರ್ವಹಿಸುವುದರ ಜೊತೆಗೆ, ತಂತ್ರಜ್ಞಾನದ ಆಕರ್ಷಕ ಡ್ರೋನ್ ಪ್ರದರ್ಶನವನ್ನು ಆಯೋಜಿಸಿರುವುದು ಇಂಧನ ಇಲಾಖೆಯ ಕಾರ್ಯಕ್ಷಮತೆ ಹಾಗೂ ಸೆಸ್ಕ್‌ ನ ತಾಂತ್ರಿಕ ಸಾಮರ್ಥ್ಯಕ್ಕೆ ಸಾಕ್ಷಿಯಾಗಿದೆ,” ಎಂದು ಸಚಿವ ಜಾರ್ಜ್‌ ಹೇಳಿದರು.

“ಬನ್ನಿಮಂಟಪದ ಪಂಜಿನ ಕವಾಯತು ಮೈದಾನದಲ್ಲಿ ನಾಲ್ಕು ದಿನಗಳ ಕಾಲ ಡ್ರೋನ್ ಪ್ರದರ್ಶನ ನಡೆದಿದ್ದು, ವಿವಿಧ ಬಣ್ಣಗಳು ಹಾಗೂ ವಿನ್ಯಾಸಗಳ ಮೂಲಕ ರೂಪುಗೊಂಡ 12 ಆಕರ್ಷಕ ದೃಶ್ಯಗಳು ಪ್ರೇಕ್ಷಕರನ್ನು ಮಂತ್ರಮುಗ್ಧಗೊಳಿಸಿದವು. ಇದರಲ್ಲಿ 3,473 ಡ್ರೋನ್‌ ಗಳು ಆಕಾಶದಲ್ಲಿ ಮೂಡಿಸಿದ ನವಿಲಿನ ಕಲಾಕೃತಿ ವಿಶೇಷ ಆಕರ್ಷಣೆಯಾಗಿತ್ತು ಮಾತ್ರವಲ್ಲದೆ, ಗಿನ್ನಿಸ್ ದಾಖಲೆಗೆ ಪಾತ್ರವಾಗಿರುವುದು ಮೈಸೂರು ದಸರಾ ಮಹೋತ್ಸವದ ಪ್ರಮುಖ ಸಾಧನೆಗಳಲ್ಲಿ ಒಂದಾಗಿದೆ,” ಎಂದು ಸಚಿವ ಕೆಜೆ ಜಾರ್ಜ್  ಶ್ಲಾಘಿಸಿದರು.ಮೈಸೂರು ದಸರಾ: ಸೆಸ್ಕ್ ಮುಕುಟಕ್ಕೆ ಮತ್ತೊಂದು ಗಿನ್ನಿಸ್ ದಾಖಲೆ

“ದಸರಾ ಸಂದರ್ಭದಲ್ಲಿ ನಗರದ ವಿದ್ಯುತ್ ದೀಪಾಲಂಕಾರ ವ್ಯವಸ್ಥೆಯನ್ನು ಅತ್ಯಂತ ಪರಿಣಾಮಕಾರಿಯಾಗಿ ನಿರ್ವಹಿಸುವುದು ದೊಡ್ಡ ಜವಾಬ್ದಾರಿಯಾಗಿತ್ತು. ಲಕ್ಷಾಂತರ ಪ್ರವಾಸಿಗರು, ಸಾರ್ವಜನಿಕರು ಪಾಲ್ಗೊಳ್ಳುವ ಉತ್ಸವದಲ್ಲಿ ವಿದ್ಯುತ್ ವ್ಯವಸ್ಥೆಯ ಸಮರ್ಪಕ ನಿರ್ವಹಣೆ, ತಾಂತ್ರಿಕ ಸಿದ್ಧತೆ ಮತ್ತು ವಿವಿಧ ಹಂತಗಳ ಸಮನ್ವಯಕ್ಕೆ ಆದ್ಯತೆ ನೀಡಲಾಗಿದೆ. ಇಂಧನ ಇಲಾಖೆಯ ವ್ಯಾಪ್ತಿಯಲ್ಲಿ ಸೆಸ್ಕ್ ಕೈಗೊಂಡಿರುವ ಈ ಕಾರ್ಯಗಳು ದಸರಾ ಮಹೋತ್ಸವದ ವೈಭವ ಹೆಚ್ಚಿಸುವಲ್ಲಿ ಪ್ರಮುಖ ಪಾತ್ರ ವಹಿಸಿವೆ,” ಎಂದು ಅಭಿಪ್ರಾಯಪಟ್ಟರು.ಗಿನ್ನಿಸ್ ದಾಖಲೆಯ ಡ್ರೋನ್ ಪ್ರದರ್ಶನ, ದಸರಾ ದೀಪಾಲಂಕಾರಕ್ಕೆ ಸಚಿವ ಕೆ.ಜೆ. ಜಾರ್ಜ್ ಮೆಚ್ಚುಗೆ

“ಸಮರ್ಪಕ ವಿದ್ಯುತ್ ಸರಬರಾಜಿನ ಜವಾಬ್ದಾರಿಯೊಂದಿಗೆ ದಸರಾ ದೀಪಾಲಂಕಾರ ಮತ್ತು ನವೀನ ತಂತ್ರಜ್ಞಾನ ಆಧಾರಿತ ಪ್ರದರ್ಶನದಲ್ಲಿಯೂ ಸೆಸ್ಕ್ ತನ್ನ ಸಾಮರ್ಥ್ಯವನ್ನು ಪ್ರದರ್ಶಿಸಿದೆ. ಅಧಿಕಾರಿಗಳು ಮತ್ತು ಸಿಬ್ಬಂದಿಯ ಸಂಘಟಿತ ಪ್ರಯತ್ನ, ತಾಂತ್ರಿಕ ಪರಿಣತಿ ಹಾಗೂ ನಿರಂತರ ಪರಿಶ್ರಮದಿಂದ ಈ ಸಾಧನೆ ಸಾಧ್ಯವಾಗಿದೆ. ಕಳೆದ ವರ್ಷ ಹುಲಿಯ ಆಕೃತಿಯನ್ನು ಡ್ರೋನ್‌ಗಳ ಮೂಲಕ ರೂಪಿಸಿ ದಾಖಲೆ ನಿರ್ಮಿಸಿದ್ದ ಸೆಸ್ಕ್, ಈ ಬಾರಿ ನವಿಲಿನ ಕಲಾಕೃತಿ ರಚಿಸಿ ಹೊಸ ದಾಖಲೆ ಬರೆಯುವ ಮೂಲಕ ತನ್ನ ಸಾಧನೆಯ ಹಾದಿಯನ್ನು ಮುಂದುವರಿಸಿದೆ. ಅಲ್ಲದೇ ದಸರಾವನ್ನು ಜಾಗತಿಕ ಪ್ರವಾಸೋದ್ಯಮದ ಪ್ರಮುಖ ಆಕರ್ಷಣೆಯನ್ನಾಗಿ ರೂಪಿಸುವ ನಿಟ್ಟಿನಲ್ಲಿ ವಿದ್ಯುತ್ ದೀಪಾಲಂಕಾರ ಮತ್ತು ಡ್ರೋನ್ ಪ್ರದರ್ಶನ ಮಹತ್ವದ ಕೊಡುಗೆ ನೀಡಿದೆ,” ಎಂದು ಹೇಳಿದರು.

ದಸರಾ ದೀಪಾಲಂಕಾರ ಹಾಗೂ ಡ್ರೋನ್ ಪ್ರದರ್ಶನ ಯಶಸ್ವಿಯಾಗಿ ಮೂಡಿಬರಲು ಕಾರಣರಾದ ಶಾಸಕರು ಹಾಗೂ ಸೆಸ್ಕ್ ಅಧ್ಯಕ್ಷ ರಮೇಶ್ ಬಂಡಿಸಿದ್ದೇಗೌಡ, ಇಂಧನ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ಗೌರವ್ ಗುಪ್ತ ಸೇರಿದಂತೆ ಈ ಸಾಧನೆಯ ಹಿಂದೆ ಶ್ರಮಿಸಿದ ಸೆಸ್ಕ್ ಅಧಿಕಾರಿಗಳು, ತಾಂತ್ರಿಕ ಸಿಬ್ಬಂದಿ ಹಾಗೂ ಇಂಧನ ಇಲಾಖೆಯ ಎಲ್ಲ ಸಂಬಂಧಪಟ್ಟ ಅಧಿಕಾರಿಗಳ ಕಾರ್ಯವನ್ನು ಸಚಿವ ಕೆ.ಜೆ. ಜಾರ್ಜ್ ಅವರು ಅಭಿನಂದಿಸಿದರು.World Record jk02_new jk02 new

ಚಾವಿಸನಿನಿ ವ್ಯವಸ್ಥಾಪಕ ನಿರ್ದೇಶಕರಾದ – ಎಂ.ಎಸ್. ಅರ್ಚನಾ ಅವರು ಮಾತನಾಡಿ, ಮುಖ್ಯಮಂತ್ರಿಗಳು ಹಾಗೂ  ಸಚಿವ ಕೆ.ಜೆ.ಜಾರ್ಜ್ ಅವರ ಮಾರ್ಗದರ್ಶನದಲ್ಲಿ ದಸರಾ ವಿದ್ಯುತ್ ದೀಪಾಲಂಕಾರ ಮತ್ತು ಡ್ರೋನ್ ಶೋ ಅತ್ಯಂತ ಯಶಸ್ವಿಯಾಗಿ ಜನಮೆಚ್ಚುಗೆ ಗಳಿಸಿತು. ದಸರಾ ವಿದ್ಯುತ್ ದೀಪಾಲಂಕಾರ ಮುಂದಿನ ಹತ್ತು(ಅ.31) ದಿನಗಳವರೆಗೆ ಇರಲಿದ್ದು. ಪ್ರವಾಸಿಗರು ಹಾಗೂ ಸಾರ್ವಜನಿಕರು ಅಗತ್ಯ ಸುರಕ್ಷತಾ ನಿಯಮಗಳನ್ನು ಪಾಲಿಸಿ, ಆಕರ್ಷಕ ದೀಪಾಲಂಕಾರದ ಸೌಂದರ್ಯ ಕಣ್ತುಂಬಿಕೊಳ್ಳಿ ಎಂದು ಮನವಿ ಮಾಡಿದರು.

 

English Summary
Title

Mysuru Dasara Drone Show Sets Guinness World Record: K.J. George Praises CESC

Short Description
The Mysuru Dasara drone show has officially secured a Guinness World Record, earning high praise from Karnataka Energy Minister K.J. George. During the spectacular aerial display at the Torchlight Parade Ground, 3,473 synchronised drones formed a massive, moving dancing peacock. This feat won the global title for the "Largest Aerial Display of a Bird Formed by Drones." Minister K.J. George lauded the Chamundeshwari Electricity Supply Corporation (CESC) and BotLab Dynamics for showcasing indigenous "Made in India" technology and blending heritage with innovation.
Keywords
Mysuru Dasara, Guinness, World Record, drone show, Minister K.J. George, praises