Saturday, September 5, 2026

BDA Apartments

Home Front Page ಕಾಂಗ್ರೆಸ್ ಪಾಪದ ಕೊಡ ತುಂಬಿದೆ ಎಂಬ ಹೇಳಿಕೆಗೆ ಸಚಿವ ರಘುಮೂರ್ತಿ ತಿರುಗೇಟು

ಕಾಂಗ್ರೆಸ್ ಪಾಪದ ಕೊಡ ತುಂಬಿದೆ ಎಂಬ ಹೇಳಿಕೆಗೆ ಸಚಿವ ರಘುಮೂರ್ತಿ ತಿರುಗೇಟು

ಚಿತ್ರದುರ್ಗ,ಸೆಪ್ಟಂಬರ್, 5,2026 (www.justkannada.in): ಕಾಂಗ್ರೆಸ್ ಪಾಪದ ಕೊಡ ತುಂಬಿದೆ ಎಂಬ ಹೇಳಿಕೆ ನೀಡಿದ್ದ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರಗೆ ಸಚಿವ ರಘುಮೂರ್ತಿ ತಿರುಗೇಟು ನೀಡಿದ್ದಾರೆ.

ಈ ಕುರಿತು ಮಾತನಾಡಿದ ಸಚಿವ ರಘುಮೂರ್ತಿ, ನಾವು ಯಾವುದೇ ಪಾಪದ ಕೆಲಸ ಮಾಡಿಲ್ಲ. ಕಾಂಗ್ರೆಸ್ ಪುಣ್ಯದ ಕೆಲಸ ಮಾಡಿದ ಇತಿಹಾಸವೇ ಇದೆ.  ಅವರು ವಿಪಕ್ಷ ನಾಯಕರಾಗಿ ಗೆಲ್ಲುತ್ತೇವೆಂದು ಹೇಳುತ್ತಾರಷ್ಟೆ. ಆದರೆ ಗೆಲ್ಲಲ್ಲ.  ನಾವು ಜನರ ವಿಶ್ವಾಸ ಗಳಿಸಿ ಮತ್ತೆ ಅಧಿಕಾರಕ್ಕೆ ಬರುತ್ತೇವೆ  ಎಂದು ತಿಳಿಸಿದರು.

Key words: Minister, Raghumurthy, Congress, BJP, statement