Saturday, September 5, 2026

BDA Apartments

Home Front Page ನಾನು ರಾಹುಲ್ ಗಾಂಧಿಗೆ ಮಾತು ಕೊಟ್ಟಿದ್ದೆ, ಹೀಗಾಗಿ ರಾಜೀನಾಮೆ ಕೊಟ್ಟೆ-ಮಾಜಿ ಸಿಎಂ ಸಿದ್ದರಾಮಯ್ಯ

ನಾನು ರಾಹುಲ್ ಗಾಂಧಿಗೆ ಮಾತು ಕೊಟ್ಟಿದ್ದೆ, ಹೀಗಾಗಿ ರಾಜೀನಾಮೆ ಕೊಟ್ಟೆ-ಮಾಜಿ ಸಿಎಂ ಸಿದ್ದರಾಮಯ್ಯ

ಚಿಕ್ಕಮಗಳೂರು,ಸೆಪ್ಟಂಬರ್,5,2026 (www.justkannada.in);  ಮಾಜಿ ಸಿಎಂ ಸಿದ್ದರಾಮಯ್ಯ ತಾವು ರಾಜೀನಾಮೆ ನೀಡಿದ್ದಕ್ಕೆ ಕಾರಣವೇನು ಎಂಬುದರ ಬಗ್ಗೆ ಬಹಿರಂಗಪಡಿಸಿದ್ದಾರೆ.

ಕಡೂರಿನಲ್ಲಿ ಈ ಕುರಿತು ಮಾತನಾಡಿದ ಮಾಜಿ ಸಿಎಂ ಸಿದ್ದರಾಮಯ್ಯ ಬಿಜೆಪಿ ನಾಯಕ ಸಿಟಿ ರವಿ ಮೊನ್ನೆ ಹೇಳುತ್ತಿದ್ದನಂತೆ. ಗೃಹಲಕ್ಷ್ಮೀ ಹಣ ಕೊಡದಿದ್ದಕ್ಕೆ ಸಿಎಂ ಸ್ಥಾನ ಹೋಯ್ತಂತೆ. ನಾನು ರಾಹುಲ್ ಗಾಂಧಿ ಅವರಿಗೆ ಮಾತು ಕೊಟ್ಟಿದ್ದೆ.  ರಾಹುಲ್ ಗಾಂಧಿ ರಾಜೀನಾಮೆ ಕೊಡಿ ಅಂದರು. ಹೀಗಾಗಿ  ನಾನು ರಾಜೀನಾಮೆ ಕೊಟ್ಟೆ ಎಂದರು.

ಹಾಗೆಯೇ ಬಹಳ ಜನ ನನಗೆ ರಾಜೀನಾಮೆ ಕೊಡಬೇಡಿ ಸರ್ ಅಂದರು.  ಇಲ್ಲ ಮಾತು ಕೊಟ್ಟಿದ್ದೇನೆ ರಾಜೀನಾಮೆ ಕೊಡಬೇಕು ಅಂತಾ ಕೊಟ್ಟೆ  ಎಂದು ಸಿದ್ದರಾಮಯ್ಯ ತಿಳಿಸಿದರು.

Key words: Rahul Gandhi, resigned, Former CM, Siddaramaiah