Saturday, September 5, 2026

BDA Apartments

Home Front Page ಮುಸ್ಲೀಂ ಮಹಿಳಾ ಒಳಮೀಸಲಾತಿಗೆ ಲೋಕಸಭೆಯಲ್ಲಿ ಆಗ್ರಹ: ಕೇಂದ್ರ ಸಚಿವರಿಂದ ತಿರುಗೇಟು

ಮುಸ್ಲೀಂ ಮಹಿಳಾ ಒಳಮೀಸಲಾತಿಗೆ ಲೋಕಸಭೆಯಲ್ಲಿ ಆಗ್ರಹ: ಕೇಂದ್ರ ಸಚಿವರಿಂದ ತಿರುಗೇಟು

ನವದೆಹಲಿ,ಏಪ್ರಿಲ್,16,2026 (www.justkannada.in): ರಾಜಕೀಯದಲ್ಲಿ ಮಹಿಳೆಯರಿಗೆ ಶೇ 33 ರಷ್ಟು ಮೀಸಲಾತಿ ವಿಚಾರಕ್ಕೆ ಸಂಬಂಧಿಸಿದಂತೆ ಇಂದು ಲೋಕಸಭೆಯಲ್ಲಿ ಮಸೂದೆ ಮಂಡನೆಯಾಗಿದ್ದು ಈ ನಡುವೆ ಮುಸ್ಲೀಂ ಮಹಿಳಾ ಒಳಮೀಸಲಾಗಿಗೆ ಎಸ್ ಪಿ ಸಂಸದ ಧರ್ಮೇಂದ್ರ ಆಗ್ರಹಿಸಿದರು.

ಲೋಕಸಭೆಯಲ್ಲಿ ಕೇಂದ್ರ ಕಾನೂನು ಸಚಿವರು ಮಸೂದೆ ಮಂಡನೆ ನಂತರ ಮಾತನಾಡಿದ ಸಮಾಜವಾದಿ ಸಂಸದ ಧರ್ಮೇಂದ್ರ, ಮಹಿಳಾ ಮೀಸಲಾತಿಯಲ್ಲಿ ಮುಸ್ಲೀಮ್ ಮಹಿಳೆಯರನ್ನು ಪರಿಗಣಿಸಿ ಎಂದು ಒತ್ತಾಯಿಸಿದರು.

ಇದಕ್ಕೆ ತಿರುಗೇಟು ಕೊಟ್ಟ ಕೇಂದ್ರ ಸಚಿವ ಕಿರಣ್ ರಿಜುಜು, ಧರ್ಮದ ಆಧಾರದ ಮೇಲೆ ಮೀಸಲಾತಿ ಕೇಳಬೇಡಿ. ಧರ್ಮಧ ಆಧಾರದ ಮೇಲೆ ಮೀಸಲಾತಿ ನೀಡಲು ವಿರೋಧವಿದೆ. ಎಂದರು.

ಇದೇ ವೇಳೆ ಪ್ರತಿಕ್ರಿಯಿಸಿದ ಕೇಂದ್ರ ಗೃಹ ಸಚಿವ ಅಮಿತ್ ಶಾ,  ಸಂವಿಧಾನದಲ್ಲಿ ಧರ್ಮಾಧಾರಿತ ಮೀಸಲಾತಿಗೆ ಅವಕಾಶವೇ ಇಲ್ಲ ಎಂದು ತಿರುಗೇಟು ಕೊಟ್ಟರು.

Key words: Demand, reservation, Muslim women, Lok Sabha