ಹೆಚ್ಚುವರಿ ಎಸ್.ಪಿ ಶಿವಕುಮಾರ್ ಆರ್.ದಂಡಿನ ಅವರಿಗೆ ಮೈಸೂರು ವಿವಿಯಿಂದ ಪಿಎಚ್.ಡಿ ಪದವಿ.

ಮೈಸೂರು,ಜನವರಿ,31,2023(www.justkannada.in): ಪೊಲೀಸ್ ಇಲಾಖೆಯಲ್ಲಿ ಸೇವೆ ಸಲ್ಲಿಸುವ ಜತೆಗೆ ಸಾಹಿತ್ಯ ಕ್ಷೇತ್ರದಲ್ಲಿ ಹಲವಾರು ಕೃತಿಗಳನ್ನು ರಚನೆ ಮಾಡಿರುವ ಕವಿ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಶಿವಕುಮಾರ್ ಆರ್.ದಂಡಿನ ಅವರಿಗೆ ಮೈಸೂರು ವಿಶ್ವವಿದ್ಯಾನಿಲಯದಿಂದ ಪಿಎಚ್.ಡಿ ಪದವಿ ದೊರೆತಿದೆ.

ಮೈಸೂರು ವಿವಿ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯ ಪ್ರಾಧ್ಯಾಪಕರಾದ ಡಾ.ಎನ್.ಕೆ.ಲೋಲಾಕ್ಷಿ ಅವರ ಮಾರ್ಗದರ್ಶನದಲ್ಲಿ ಶಿವಕುಮಾರ್ ಅವರು ಮಂಡಿಸಿದ ಆಧುನಿಕ ಕನ್ನಡ ನಾಟಕಗಳು: ಶೋಷಣೆ ಮತ್ತು ವಿಮೋಚನಾ ನೆಲೆಗಳು ಎಂಬ ಮಹಾಪ್ರಬಂಧವನ್ನು ಕನ್ನಡ ವಿಷಯದಲ್ಲಿ ಪಿಎಚ್.ಡಿ ಪದವಿಗಾಗಿ ಅಂಗೀಕರಿಸಲಾಗಿದೆ ಎಂದು ಪರೀಕ್ಷಾಂಗ ಕುಲಸಚಿವರು ಹೇಳಿದ್ದಾರೆ.

ಶಿವಕುಮಾರ್ ಆರ್.ದಂಡಿನ ಅವರು ಚಾಮರಾಜನಗರ, ಮಂಡ್ಯ, ಮೈಸೂರು ಜಿಲ್ಲೆಯಲ್ಲಿ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿಯಾಗಿ ಕಾರ್ಯ ನಿರ್ವಹಿಸಿ ಇದೀಗ ರಾಯಚೂರು ಜಿಲ್ಲೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಬೆಳಗಾವಿ ರಾಣಿ ಚೆನ್ನಮ್ಮ ವಿಶ್ವವಿದ್ಯಾನಿಲಯದ ಬಿ.ಕಾಂ ಮೂರನೇ ಸೆಮಿಸ್ಟರ್‌ ನಲ್ಲಿ ಬಣ್ಣದ ಬದುಕು ಪಠ್ಯಕ್ರಮಕ್ಕೆ ಕವಿತೆ ಮತ್ತು ನಾನು ಎಂಬ ಕವಿತೆಯನ್ನು ಆಯ್ಕೆ ಮಾಡಿಕೊಳ್ಳಲಾಗಿದೆ. ಶಿವಕುಮಾರ್ ಅವರ ಮೋಹದ ಪಥವೂ ಇಹಲೋಕದ ರಿವಣವೂ ಕವನ ಸಂಕಲನವು ಜನಪ್ರಿಯಗೊಂಡು ಸಾಹಿತ್ಯ ಕ್ಷೇತ್ರದಲ್ಲಿ ಪ್ರಶಂಸೆಗೆ ಒಳಗಾಗಿರುವುದು ವಿಶೇಷವಾಗಿದೆ.

Key words: Additional –SP-Shivakumar R. Dandina – Ph.D – Mysore University.