ಏಷ್ಯಾಕಪ್ ಮಹಿಳಾ ಟಿ20 ಕ್ರಿಕೆಟ್: ಫೈನಲ್ಸ್;ನಲ್ಲಿ ಭಾರತ-ಶ್ರೀಲಂಕಾ ಫೈಟ್

ಬೆಂಗಳೂರು, ಅಕ್ಟೋಬರ್ 14, 2022 (www.justkannada.in): ಏಷ್ಯಾಕಪ್ ಟಿ20 ಕ್ರಿಕೆಟ್ ಟೂರ್ನಿಯ ಫೈನಲ್‌ನಲ್ಲಿ ಭಾರತ ಮತ್ತು ಶ್ರೀಲಂಕಾ ತಂಡಗಳು ಮುಖಾಮುಖಿಯಾಗಲಿವೆ.

ನೆನ್ನೆ ನಡೆದ ಸೆಮಿಫೈನಲ್ಸ್’ನಲ್ಲಿ ನಿರೀಕ್ಷಿಸಿದಂತೆ ಭಾರತ ತಂಡವು ಥಾಯ್ಲೆಂಡ್ ವಿರುದ್ಧ ಸುಲಭ ಜಯ ದಾಖಲಿಸಿತು. ಪಾಕಿಸ್ತಾನದ ಎದುರು ಶ್ರೀಲಂಕಾ ಕೇವಲ 1 ರನ್‌ ಅಂತರದ ರೋಚಕ ಗೆಲುವು ಸಾಧಿಸಿದೆ.

ಅಂತಿಮವಾಗಿ ಏಷ್ಯಾಕಪ್ ಟಿ20 ಕ್ರಿಕೆಟ್ ಟೂರ್ನಿಯ ಫೈನಲ್‌ನಲ್ಲಿ ಭಾರತ ಮತ್ತು ಶ್ರೀಲಂಕಾ ತಂಡಗಳು ಚಾಂಪಿಯನ್ ಪಟ್ಟಕ್ಕಾಗಿ ಸೆಣೆಸಾಡಲಿವೆ.

ನಿನ್ನೆ ನಡೆದ ರೋಚಕವಾದ ಎರಡನೇ ಸೆಮಿಫೈನಲ್‌ನಲ್ಲಿ ಶ್ರೀಲಂಕಾ ತಂಡವು ಪಾಕ್ ವಿರುದ್ಧ ಗೆದ್ದಿತು. ಶ್ರೀಲಂಕಾ ಕೇವಲ 1 ರನ್‌ ಅಂತರದ ರೋಚಕ ಗೆಲುವು ಸಾಧಿಸಿ ಫೈನಲ್ಸ್ ಗೆ ಲಗ್ಗೆ ಇಟ್ಟಿತು.