Saturday, August 8, 2026

BDA Apartments

Home Front Page ಮತದಾರರಿಗೆ ಆಮೀಷ ಒಡ್ಡುವ ರಾಜಕಾರಣಿಗಳ ದುಷ್ಕೃತ್ಯಗಳಿಗೆ ಕಡಿವಾಣ ಹಾಕಿ- ಕೆ.ಆರ್.ಎಸ್ ಪಕ್ಷದಿಂದ ಆಗ್ರಹ.

ಮತದಾರರಿಗೆ ಆಮೀಷ ಒಡ್ಡುವ ರಾಜಕಾರಣಿಗಳ ದುಷ್ಕೃತ್ಯಗಳಿಗೆ ಕಡಿವಾಣ ಹಾಕಿ- ಕೆ.ಆರ್.ಎಸ್ ಪಕ್ಷದಿಂದ ಆಗ್ರಹ.

ಮೈಸೂರು,ಜನವರಿ,31,2023(www.justkannada.in): ರಾಜ್ಯ ವಿಧಾನಸಭಾ ಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆ, ಮತದಾರರಿಗೆ ಆಮೀಷ ಒಡ್ಡುವ ರಾಜಕಾರಣಿಗಳ ದುಷ್ಕೃತ್ಯಗಳಿಗೆ ಕಡಿವಾಣ ಹಾಕುವಂತೆ ಸರ್ಕಾರಕ್ಕೆ ಕೆ.ಆರ್.ಎಸ್ ಪಕ್ಷ  ಆಗ್ರಹಿಸಿದೆ.

ಜಿಲ್ಲಾಧಿಕಾರಿಗಳ ಮೂಲಕ ಸರ್ಕಾರ ಮತ್ತು ರಾಜ್ಯ ಮುಖ್ಯ ಚುನಾವಣಾಧಿಕಾರಿಗಳಿಗೆ ಕೆಆರ್ ಎಸ್  ಪಕ್ಷದ ರಾಜ್ಯಾಧ್ಯಕ್ಷ ರವಿಕೃಷ್ಣರೆಡ್ಡಿ ನೇತೃತ್ವದಲ್ಲಿ ಮನವಿ ಸಲ್ಲಿಸಲಾಯಿತು. ರಾಜ್ಯದಲ್ಲಿ ಇನ್ನೇನು ಕೆಲವೇ ತಿಂಗಳಲ್ಲಿ ಚುನಾವಣೆ ಬರಲಿದೆ. ಈ ವೇಳೆ ಗಂಡಸರಿಗೆ ಲಿಕ್ಕರ್,ಹೆಂಗಸರಿಗೆ  ಕುಕ್ಕರ್, ಹಣದಂತಹ ಆಮೀಷಗಳು ಬರಲಿವೆ. ಇಂತಹ ಆಮೀಷಗಳನ್ನ ಒಡ್ಡುವ ಅಭ್ಯರ್ಥಿಗಳ ವಿರುದ್ಧ ಸೂಕ್ತ ಕ್ರಮ ಜರುಗಿಸಬೇಕು. ಮತದಾರರು ಯಾವುದೇ ಆಮೀಷಗಳಿಗೆ ಒಳಗಾಗಬಾರದು ಎಂದು ಮನವಿ ಮಾಡಿದರು.

ಕೆಲಕಾಲ ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಕುಳಿತು ಕೆಆರ್ ಎಸ್ ಪಕ್ಷದ ಕಾರ್ಯಕರ್ತರು ಜನ ಜಾಗೃತಿ ಮೂಡಿಸಿದರು. ಇದೇ ವೇಳೆ ಸಮಾಜದ ವ್ಯವಸ್ಥೆ ಬಗ್ಗೆ ರವಿ ಕೃಷ್ಣರೆಡ್ಡಿ ಅಸಮಾಧಾನ ವ್ಯಕ್ತಪಡಿಸಿದರು.

Key words: politicians – voters-election-KRS –party-mysore