ಚಿತ್ರರಂಗದಿಂದ ಬ್ರೇಕ್, ಪ್ರವಾಸ ಹೊರಟ ಹರಿಪ್ರಿಯಾ !

ಬೆಂಗಳೂರು, ಜೂನ್ 18, 2019 (www.justkannada): ನಟಿ ಹರಿಪ್ರಿಯಾ ಇದೀಗ ಚಿತ್ರರಂಗದಿಂದ ತಾತ್ಕಾಲಿಕವಾಗಿ ಬ್ರೇಕ್ ತೆಗೆದುಕೊಂಡಿದ್ದಾರೆ.

ಈಗಾಗಲೇ ಅವರು ಐದಾರು ಸಿನಿಮಾಗಳ ಕೆಲಸಗಳನ್ನು ಮಾಡಿ ಮುಗಿಸಿದ್ದಾರೆ. ‘ಕುರುಕ್ಷೇತ್ರ’, ಬಿಚ್ಚುಗತ್ತಿ, ‘ಕಥಾಸಂಗಮ’, ‘ಎಲ್ಲಿದ್ದೆ ಇಲ್ಲಿ ತನಕ’, ‘ಕನ್ನಡ ಗೊತ್ತಿಲ್ಲ’ ಚಿತ್ರಗಳು ಬಿಡುಗಡೆಗೆ ಸಿದ್ದವಾಗುತ್ತಿವೆ. ಎಲ್ಲ ಕೆಲಸಗಳನ್ನು ಮುಗಿಸಿದ್ದಾರೆ.

ಇದೀಗ ತಾತ್ಕಾಲಿಕವಾಗಿ ನಾನು ಚಿಕ್ಕ ಬ್ರೇಕ್ ತೆಗೆದುಕೊಂಡು ಪ್ರವಾಸ ಹೋಗುತ್ತಿದ್ದೇನೆ. ಪ್ರವಾಸ ಮುಗಿಸಿ ಬಂದ ನಂತರ ಹೊಸ ಕಥೆ ಹಾಗೂ ತಂಡದ ಬಗ್ಗೆ ಮಾಹಿತಿ ನೀಡುತ್ತೇನೆ ಎಂದು ಅಭಿಮಾನಿಗಳೊಂದಿಗೆ ಮಾಹಿತಿ ಹಂಚಿಕೊಂಡಿದ್ದಾರೆ.