Friday, October 2, 2026

BDA Apartments

You should utilize any platform that you get to learn: Nagathihalli Chandrashekar BDA JK_Adv BDA Adv
Home Front Page ಕಾವೇರಿ ತಟದ ಮತ್ತತ್ತಿರಾಯ, ಗಗನಚುಕ್ಕಿ ದರ್ಶನಕ್ಕೆ ಕೆಎಸ್’ಆರ್’ಟಿಸಿ ಟೂರ್ ಪ್ಯಾಕೇಜ್

ಕಾವೇರಿ ತಟದ ಮತ್ತತ್ತಿರಾಯ, ಗಗನಚುಕ್ಕಿ ದರ್ಶನಕ್ಕೆ ಕೆಎಸ್’ಆರ್’ಟಿಸಿ ಟೂರ್ ಪ್ಯಾಕೇಜ್

ಬೆಂಗಳೂರು, ಆಗಸ್ಟ್ 1, 2021 (www.justkannada.in): ಕಾವೇರಿ ತಟದ ಮತ್ತತ್ತಿರಾಯನ ದರ್ಶನಕ್ಕೆ ಕೆಎಸ್ ಆರ್ ಟಿಸಿ ವಿಶೇಷ ಟೂರ್ ಪ್ಯಾಕೇಜ್‍ ಪ್ರಕಟಿಸಿದೆ. ಈ ಪ್ಯಾಕೇಜ್ ನಡಿ ಸಾರಿಗೆ ಬಸ್ ಕಾರ್ಯಾಚರಣೆ ಪ್ರಾರಂಭಿಸಿದೆ.

ಬೆಂಗಳೂರಿನ ಸ್ಯಾಟಲೈಟ್ ಬಸ್ ನಿಲ್ದಾಣದಿಂದ ಹೊರಟು ಹಾರೋಹಳ್ಳಿ-ಕನಕಪುರ ಮಾರ್ಗವಾಗಿ ಚುಂಚಿಪಾಲ್ಸ್, ಶಿವನಾಂಕರೇಶ್ವರ ದೇವಸ್ಥಾನ, ಮೇಕೆದಾಟು, ಸಂಗಮ ಮುತ್ತತ್ತಿ, ಗಗನಚುಕ್ಕಿಗೆ ಈ ವಿಶೇಷ ಬಸ್ ಸಂಚರಿಸಲಿದೆ. ವಯಸ್ಕರಿಗೆ  450 ಹಾಗೂ ಮಕ್ಕಳಿಗೆ 300 ದರ ನಿಗದಿಪಡಿಸಲಾಗಿದೆ.

ಪ್ರತಿ ಶನಿವಾರ, ಭಾನುವಾರ ಹಾಗೂ ರಜಾ ದಿನಗಳಂದು ಈ ವಿಶೇಷ ಬಸ್ ಬೆಂಗಳೂರಿನ ಸ್ಯಾಟಲೈಟ್ ಬಸ್ ನಿಲ್ದಾಣದಿಂದ ಬೆಳಗ್ಗೆ 7 ಗಂಟೆಗೆ ಹೊರಡಲಿದೆ. ಚುಂಚಿಪಾಲ್ಸ್ ಬೆಳಿಗ್ಗೆ 9.30 ರಿಂದ 10.30 ರವರೆಗೆ, ಶಿವಾನಂಕರೇಶ್ವರ ದೇವಸ್ಥಾನ ಬೆಳಿಗ್ಗೆ 11ರಿಂದ ರಿಂದ 11.45, ನಂತರ ಮಧ್ಯಾಹ್ನ 12 ಗಂಟೆಗೆ ಸಂಗಮ ತಲುಪಲಿದೆ.

12ರಿಂದ 2-15 ರವರಗೆ ಸಂಗಮ ಮತ್ತು ಮೇಕೆದಾಟು ವೀಕ್ಷಣೆಗೆ ಅವಕಾಶ ನೀಡಲಾಗಿದೆ. ಮಧ್ಯಾಹ್ನ 2.15ಕ್ಕೆ ಸಂಗಮದಿಂದ ಹೊರಟು 3.15ಕ್ಕೆ ಮುತ್ತತ್ತಿ ತಲುಪಲಿದೆ. ಮಧ್ಯಾಹ್ನ 3.15 ರಿಂದ 3.45 ರವರಗೆ ಮುತ್ತತ್ತಿಯ ಆಂಜನೇಯ ಸ್ವಾಮಿ ದೇವಸ್ಥಾನದ ದರ್ಶನಕ್ಕೆ ಅವಕಾಶ ಕಲ್ಪಿಸಲಾಗುವುದು. ನಂತರ ಗಗನಚುಕ್ಕಿ ಜಲಪಾತಕ್ಕೆ ಹೊರಟು ಸಂಜೆ 5 ರಿಂದ 7 ಗಂಟೆಯವರೆಗೆ ಜಲಪಾತ ವೀಕ್ಷಣೆಗೆ ಅವಕಾಶ ಕಲ್ಪಿಸಿಕೊಡಲಾಗಿದೆ. ರಾತ್ರಿ 7 ಗಂಟೆಗೆ ಗಗನಚುಕ್ಕಿಯಿಂದ ಹೊರಟು ಬೆಂಗಳೂರಿಗೆ ರಾತ್ರಿ 9.30ಕ್ಕೆ ವಾಪಸ್‌ ಆಗಲಿದೆ.