‘ಕಥಾ ಸಂಗಮ’ ಧ್ವನಿ ಸುರುಳಿ ಬಿಡುಗಡೆ ಮಾಡಿದ ಪವರ್ ಸ್ಟಾರ್

ಬೆಂಗಳೂರು, ನವೆಂಬರ್ 22, 2019 (www.justkannada.in): ರಿಷಬ್ ಶೆಟ್ಟಿ ನಿರ್ಮಾಣದ ಏಳು ನಿರ್ದೇಶಕರು ನಿರ್ದೇಶಿಸಿದ ಸಿನಿಮಾ ಕಥಾ ಸಂಗಮದ ಧ್ವನಿ ಸುರುಳಿಯನ್ನು ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಬಿಡುಗಡೆ ಮಾಡಿದ್ದಾರೆ.

ಹೌದು. ನಿನ್ನೆ ಕಥಾ ಸಂಗಮ ಸಿನಿಮಾ ಧ್ವನಿ ಸುರುಳಿ ಬಿಡುಗಡೆ ಸಮಾರಂಭ ನೆರವೇರಿತು. ಏಳು ಸಂಗೀತ ನಿರ್ದೇಶಕರು ಮಾಡಿರುವ ಏಳು ವಿಭಿನ್ನ ಹಾಡುಗಳು ನಿನ್ನೆ ಬಿಡುಗಡೆಯಾಗಿವೆ.

ರಿಷಬ್ ಮೊದಲೇ ಹೇಳಿರುವಂತೆ ಇದು ಹಿರಿಯ ನಿರ್ದೇಶಕ ಪುಟ್ಟಣ್ಣ ಕಣಗಾಲ್ ಅವರಿಂದ ಸ್ಪೂರ್ತಿ ಪಡೆದು ಮಾಡಿದ ಸಿನಿಮಾ. ಹೀಗಾಗಿ ಧ‍್ವನಿ ಸುರುಳಿ ಬಿಡುಗಡೆ ಮಾಡಿದ ಪುನೀತ್ ರಾಜ್ ಕುಮಾರ್ ಗೆ ಚಿತ್ರತಂಡ ಮರೆಯಲಾರದ ಗಿಫ್ಟ್ ಕೊಟ್ಟು ಸನ್ಮಾನಿಸಲಾಗಿದೆ.