ಜೆಡಿಎಸ್ ಸ್ಟಾರ್ ಪ್ರಚಾರಕರ ಪಟ್ಟಿ ಬಗ್ಗೆ ವ್ಯಂಗ್ಯ: ಸಿದ್ಧರಾಮಯ್ಯ ಏಕಾಂಗಿ ಎಂದ ಕೇಂದ್ರ ಸಚಿವ ಡಿ.ವಿ ಸದಾನಂದಗೌಡ…

ಬೆಂಗಳೂರು,ನ,22,2019(www.justkannada.in);  ರಾಜ್ಯದ 15 ಕ್ಷೇತ್ರಗಳಿಗೆ ಡಿಸೆಂಬರ್ 5 ರಂದು ಉಪಚುನಾವಣೆ ಹಿನ್ನೆಲೆ  ಜೆಡಿಎಸ್ ತನ್ನ ಸ್ಟಾರ್ ಪ್ರಚಾರಕರ ಪಟ್ಟಿ ಬಿಡುಗಡೆ ಮಾಡಿದ್ದು ಈ ಬಗ್ಗೆ ವ್ಯಂಗ್ಯವಾಡಿರುವ ಕೇಂದ್ರ ಸಚಿವ ಡಿ.ವಿ ಸದಾನಂದಗೌಡ, ಜೆಡಿಎಸ್ ನ  12 ಜನ ಸ್ಟಾರ್ ಪ್ರಚಾರಕರಲ್ಲಿ 8 ಮಂದಿ ದೇವೇಗೌಡರ ಕುಟುಂಬದವರೇ ಆಗಿದ್ದಾರೆ ಲೇವಡಿ ಮಾಡಿದ್ದಾರೆ.

ಬೆಂಗಳೂರಿನಲ್ಲಿ ಇಂದು ಮಾತನಾಡಿದ ಕೇಂದ್ರ ಸಚಿವ ಡಿ.ವಿ ಸದಾನಂದಗೌಡ, ಅಥಣಿ ಮತ್ತು ಹಿರೇಕೆರೂರಿನಲ್ಲಿ ಜೆಡಿಎಸ್ ಅಭ್ಯರ್ಥಿಗಳು ಬಲವಂತವಾಗಿ ಹಿಂದೆ ಸರಿದಿಲ್ಲ, ನಾಮಪತ್ರ ವಾಪಸ್ ಪಡೆಯುವಂತೆ ನಾವು ಒತ್ತಡ ಹೇರಿಲ್ಲ. ಸ್ವಂತ ನಿರ್ಧಾರದಿಂದ ಅವರೇ ನಾಮಪತ್ರ ವಾಪಸ್ ಪಡೆದಿದ್ದಾರೆ.  ಈ ಹಿಂದೆ ರಾಮನಗರದಲ್ಲಿ ಚಂದ್ರಶೇಖರ್ ನನ್ನ ಕಣದಿಂದ ಹಿಂದೆ ಸರಿಸಿದವ ರ್ಯಾರು? ರಾಮನಗರ ಉಪಚುನಾವಣೆಯಲ್ಲಿ ಏನು ಆಗಿತ್ತು ಎಂಬುದು ಎಲ್ಲರಿಗೂ ಗೊತ್ತಿದೆ ಎಂದು ಜೆಡಿಎಸ್ ನಾಯಕರ ಆರೋಪಕ್ಕೆ ತಿರುಗೇಟು ನೀಡಿದರು.

ಇದೇ ವೇಳೆ ಮಾಜಿ ಸಿಎಂ ಸಿದ್ಧರಾಮಯ್ಯ ಕಾಲೆಳೆದ ಕೇಂದ್ರ ಸಚಿವ ಡಿ.ವಿ ಸದಾನಂದಗೌಡ, ಸಿದ್ಧರಾಮಯ್ಯ ಮಾನಸಿಕ  ಸ್ಥೀಮಿತ ಕಳೆದುಕೊಂಡಿದ್ದಾರೆ. ಸಿದ್ದರಾಮಯ್ಯ ಕಾಂಗ್ರೆಸ್ ನಲ್ಲಿ ಏಕಾಂಗಿಯಾಗಿದ್ದಾರೆ. ಅವರ ಹಿಂದೆ ಯಾವ ನಾಯಕರು ಇಲ್ಲ. ಹೀಗಾಗಿ ಹತಾಶರಾಗಿ ಸಿದ್ದರಾಮಯ್ಯ ಹೇಳಿಕೆ ನೀಡುತ್ತಿದ್ದಾರೆ ಎಂದು ಟಾಂಗ್ ಕೊಟ್ಟರು.

ಮಹಾಲಕ್ಷ್ಮೀಲೇಔಟ್ ನಲ್ಲಿ ಗೋಪಾಲಯ್ಯ ವೈಯಕ್ತಿಕವಾದ ವರ್ಚಸ್ಸು ಹೊಂದಿದ್ದಾರೆ. ಮಹಾಲಕ್ಷ್ಮಿ ಲೇಔಟ್‌ನಲ್ಲಿ ಸಿಂಗಲ್ ಸೈಡೆಡ್ ರಿಸಲ್ಟ್ ಬರುತ್ತೆ.  ಇಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಇಲ್ಲಿ ಲೆಕ್ಕಕ್ಕಿಲ್ಲ ಎಂದು ಸದಾನಂದಗೌಡ ಹೇಳಿದರು.

Key words: by-election- JDS -star publicists-Union Minister- DV Sadananda Gowda – Siddaramaiah