ಇಂದಿನಿಂದ ಭಾರತ-ಬಾಂಗ್ಲಾ ಐತಿಹಾಸಿಕ ಪಿಂಕ್ ಬಾಲ್ ಹಗಲು-ರಾತ್ರಿ ಟೆಸ್ಟ್

ಕೋಲ್ಕತ್ತಾ, ನವೆಂಬರ್ 22, 2019 (www.justkannada.in): ಕೋಲ್ಕತ್ತಾದ ಈಡನ್ ಗಾರ್ಡನ್ಸ್ ಮೈದಾನದಲ್ಲಿ ಇಂದಿನಿಂದ ಐತಿಹಾಸಿಕ ಪಿಂಕ್ ಬಾಲ್ ಹಗಲು-ರಾತ್ರಿ ಟೆಸ್ಟ್ ಪಂದ್ಯ ಆರಂಭವಾಗಲಿದೆ.

ಹೌದು. ಐತಿಹಾಸಿಕ ಪಿಂಕ್ ಬಾಲ್ ಹಗಲು-ರಾತ್ರಿ ಟೆಸ್ಟ್ ಪಂದ್ಯ ಹಲವು ಕಾರಣಗಳಿಗೆ ಕುತೂಹಲ ಮೂಡಿಸಿದೆ. ಭಾರತದ ನೆಲದಲ್ಲಿ ನಡೆಯುತ್ತಿರುವ ಟೆಸ್ಟ್ ಪಂದ್ಯ ಒಂದರಲ್ಲಿ ಪಿಂಕ್ ಬಾಲ್ ಬಳಸಿಕೊಳ್ಳುತ್ತಿರುವುದು ಇದೇ ಮೊದಲ ಬಾರಿ.

ಇಂದು ಮುಖಾಮುಖಿಯಾಗಲಿರುವ ಭಾರತ ಹಾಗೂ ಬಾಂಗ್ಲಾದೇಶ ತಂಡಗಳಿಗೆ ಇದು ಮೊದಲ ಹಗಲು – ರಾತ್ರಿ ಟೆಸ್ಟ್ ಪಂದ್ಯವಾಗಿದೆ. ಇಂದು ಮಧ್ಯಾಹ್ನ 1 ಗಂಟೆಯಿಂದ ಟೆಸ್ಟ್ ಪಂದ್ಯ ಆರಂಭವಾಗಲಿದ್ದು, ಕ್ರಿಕೆಟ್ ಪ್ರೇಮಿಗಳ ಚಿತ್ತ ಕೋಲ್ಕತ್ತಾದ ಈಡನ್ ಗಾರ್ಡನ್ ಮೈದಾನದತ್ತ ನೆಟ್ಟಿದೆ.