ಶಿಖರ್ ಧವನ್’ಗೆ ಗಾಯ: ವಿಂಡೀಸ್ ಸರಣಿಗೆ ಡೌಟ್ !

ಬೆಂಗಳೂರು, ನವೆಂಬರ್ 22, 2019 (www.justkannada.in): ಟೀಂ ಇಂಡಿಯಾ ಆರಂಭಿಕ ಆಟಗಾರ ಶಿಖರ್ ಧವನ್ ಗಾಯಗೊಂಡಿದ್ದಾರೆ.

ಹೌದು. ವೆಸ್ಟ್ ಇಂಡೀಸ್ ವಿರುದ್ಧದ ಸರಣಿಗೆ ಸಂಪೂರ್ಣವಾಗಿ ಧವನ್ ಫಿಟ್ ಅಗುವರೇ ಎಂಬ ಸಂಶಯ ಶುರುವಾಗಿದೆ. ಸೈಯದ್ ಮುಷ್ತಾಕ್ ಅಲಿ ಟ್ರೋಫಿ ಪಂದ್ಯದ ವೇಳೆ ಧವನ್ ಮಂಡಿಗೆ ಗಾಯಗವಾಗಿದ್ದು, ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದುಕೊಂಡಿದ್ದಾರೆ.

ಇದರಿಂದಾಗಿ ಡಿಸೆಂಬರ್ 6 ರಿಂದ ಆರಂಭವಾಗಲಿರುವ ವಿಂಡೀಸ್ ವಿರುದ್ಧದ ಸರಣಿಗೆ ಧವನ್ ಸಂಪೂರ್ಣ ಫಿಟ್ ಆಗುವರೇ ಎಂಬ ಸಂಶಯ ಶುರುವಾಗಿದೆ. ಈ ಬಗ್ಗೆ ಟ್ವೀಟರ್ ನಲ್ಲಿ ಫೋಟೋಗಳನ್ನು ಧವನ್ ಹಂಚಿಕೊಂಡಿದ್ದಾರೆ.