ಕೆಪಿಎಲ್ ಮ್ಯಾಚ್ ಫಿಕ್ಸಿಂಗ್ ಪ್ರಕರಣ: ಸಿಸಿಬಿಯಿಂದ ಅಂಪೈರ್ ವಿಚಾರಣೆ

ಬೆಂಗಳೂರು, ನವೆಂಬರ್ 22, 2019 (www.justkannada.in): ಕೆಪಿಎಲ್ ಮ್ಯಾಚ್ ಫಿಕ್ಸಿಂಗ್ ಪ್ರಕರಣ ಸಂಬಂಧ ಸಿಸಿಬಿಯಿಂದ ತನಿಖೆ ಚುರುಕುಗೊಂಡಿದೆ.

ಮೊದಲ ಬಾರಿಗೆ ಸಿಸಿಬಿ ಪೊಲೀಸರು ಅಂಪೈರ್ ವಿಚಾರಣೆ ನಡೆಸಿದ್ದಾರೆ.ಕೆಪಿಎಲ್​ನಲ್ಲಿ ಹಲವು ಪಂದ್ಯಗಳ ಅಂಪೈರಿಂಗ್​ ಮಾಡಿದ್ದ ಬಿ.ಕೆ.ರವಿ ಅವರನ್ನು ವಿಚಾರಣೆಗೆ ಒಳಪಡಿಸಲಾಗಿದೆ.

ಬಿ.ಕೆ.ರವಿ ಪುತ್ರ ಶರತ್, ಕೆಪಿಎಲ್ ತಂಡವೊಂದರಲ್ಲಿ ಆಡುತ್ತಿದ್ದ. ಪುತ್ರ ಆಡಿದ್ದ ಪಂದ್ಯವೊಂದಕ್ಕೆ ರವಿ ಮೂರನೇ ಅಂಪೈರ್ ಆಗಿ ಕರ್ತವ್ಯ ನಿರ್ವಹಿಸಿದ್ದರು. ಆ ಪಂದ್ಯದಲ್ಲಿ ಕೂಡ ಮ್ಯಾಚ್ ಫಿಕ್ಸಿಂಗ್ ನಡೆದಿರೋದು ಬೆಳಕಿಗೆ ಬಂದಿದೆ.

ಹೀಗಾಗಿ ಬಿ.ಕೆ.ರವಿ ಅವರನ್ನ ಸಿಸಿಬಿ ಕಚೇರಿಗೆ ಕರೆಸಿ ವಿಚಾರಣೆ ನಡೆಸಲಾಗಿದೆ. ಮುಂದಿನ ದಿನಗಳಲ್ಲಿ ಬಿ.ಕೆ.ರವಿ ಪುತ್ರ ಶರತ್​​ನನ್ನು ಕೂಡ ವಿಚಾರಣೆಗೆ ಕರೆಸೋ ಸಾಧ್ಯತೆ ಇದೆ.