ಮನೆ ಮಾಲೀಕನಿಂದ ದಂಪತಿಗೆ ಕಿರುಕುಳ, ಹಲ್ಲೆ: ವಿಡಿಯೋ ಮಾಡಿಟ್ಟು ಆತ್ಮಹತ್ಯೆಗೆ ಶರಣಾದ ಮಹಿಳೆ

ಬೆಂಗಳೂರು:ಜೂ-18:(www.justkannada.in) ಮನೆ ಮಾಲೀಕನ ಕಿರುಕುಳ ಹಾಗೂ ಜಗಳಕ್ಕೆ ಬೇಸತ್ತು ಮಹಿಳೆಯೊಬ್ಬಳು ವಿಡಿಯೋ ಮಾಡಿಟ್ಟು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

ಮಂಜುಳಾ (35) ನೇಣಿಗೆ ಶರಣಾದ ಮಹಿಳೆ. ದೇವನಹಳ್ಳಿ ಪಟ್ಟಣದ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆತ್ಮಹತ್ಯೆಗೂ ಮುನ್ನ ಮಂಜುಳಾ ಮೊಬೈಲ್‍ನಲ್ಲಿ ಸೆಲ್ಫಿ ವಿಡಿಯೋ ಮಾಡಿದ್ದಾರೆ.

ಮನೆ ಬಾಡಿಗೆ ವಿಚಾರಕ್ಕೆ ಸಂಬಂಧಿಸಿದಂತೆ ಜಗಳ‌ ನಡೆದ ಹಿನ್ನೆಲೆ ಮಾಲೀಕರು ಮತ್ತು ಮೃತಳ ಕುಟುಂಬಸ್ಥರು ಪೊಲೀಸ್ ಠಾಣೆ ಮೆಟ್ಟೆಲೇರಿದ್ದರು. ಈ ವೇಳೆ ಪೊಲೀಸರ ಎದುರೇ ಮಾಲೀಕರು ದಂಪತಿ ಮೇಲೆ ಹಲ್ಲೆ ನಡೆಸಿದ್ದಾರೆ. ಪತಿಗೆ ಗಂಭೀರ ಗಾಯಗಳಾಗಿದ್ದವು ಪತಿಯನ್ನ ಚಿಕಿತ್ಸೆಗೆಂದು ಆಸ್ಪತ್ರೆಗೆ ಕಳುಹಿಸಿದ ಮಹಿಳೆ ಮನೆಯಲ್ಲಿ ಸೆಲ್ಫಿ ವಿಡಿಯೋ ಮಾಡಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.

ನನ್ನ ಸಾವಿಗೆ ಮನೆ ಮಾಲೀಕ ಸೋಮಶೇಖರ್, ಗೀತಾ ಮತ್ತು ಬಿಂದು ಎಂಬುವರೇ ಕಾರಣ. ಮಾಲೀಕರು ನಮ್ಮ ಮೇಲೆ ಪೊಲೀಸರೆದುರೇ ಹಲ್ಲೆ ನಡೆಸಿದ್ದಾರೆ. ಆದರೂ ಪೊಲೀಸರು ಕ್ರಮ ಕೈಗೊಂಡಿಲ್ಲ ಎಂದು ವಿಡಿಯೋದಲ್ಲಿ ದೂರಿದ್ದಾಳೆ. ದೇವನಹಳ್ಳಿ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮನೆ ಮಾಲೀಕನಿಂದ ದಂಪತಿಗೆ ಕಿರುಕುಳ, ಹಲ್ಲೆ: ವಿಡಿಯೋ ಮಾಡಿಟ್ಟು ಆತ್ಮಹತ್ಯೆಗೆ ಶರಣಾದ ಮಹಿಳೆ
Bangalore,women,commit suicide,house owner harassment