ಬಿಎಸ್ ವೈ ಮತ್ತು ಸಿಎಂ ಬೊಮ್ಮಾಯಿ ನಡುವಿನ ಸಂಬಂಧ ಹಳಸಿದೆ- ಮಾಜಿ ಸಿಎಂ ಸಿದ್ಧರಾಮಯ್ಯ.

ಬೆಳಗಾವಿ,ನವೆಂಬರ್,7,2022(www.justkannada.in): ಡಿಕೆಶಿ ಮತ್ತು ಸಿದ್ಧರಾಮಯ್ಯ ನಡುವಿನ ಸಂಬಂಧ ಸರಿಯಾಗಿಲ್ಲ ಎಂದು ಆರೋಪಿಸಿದ್ದ ಬಿಜೆಪಿಗೆ ತಿರುಗೇಟು ನೀಡಿರುವ ವಿಪಕ್ಷ ನಾಯಕ ಸಿದ್ಧರಾಮಯ್ಯ, ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಮತ್ತು ಸಿಎಂ ಬಸವರಾಜ ಬೊಮ್ಮಾಯಿ ನಡುವಿನ ಸಂಬಂಧ ಹಳಸಿ ಹೋಗಿದೆ ಎಂದು ತಿಳಿಸಿದ್ದಾರೆ.

ಬೆಳಗಾವಿಯಲ್ಲಿ ಇಂದು ಮಾತನಾಡಿದ ಮಾಜಿ ಸಿಎಂ ಸಿದ್ಧರಾಮಯ್ಯ, ಡಿಕೆ  ಶಿವಕುಮಾರ್ ಮತ್ತು ನನ್ನ  ಜತೆಗಿನ ಸಂಬಂಧ ಚೆನ್ನಾಗಿದೆ. ಆದರೆ ಬಿಎಸ ವೈ  ಮತ್ತು ಬೊಮ್ಮಾಯಿ ಸಂಬಂಧ ಚೆನ್ನಾಗಿದೆಯಾ..? ಬಿಎಸ್ ವೈ ಮತ್ತು  ಬೊಮ್ಮಾಯಿ ಸಂಬಂಧ ಹಳಸಿ ಹೋಗಿದೆ ಎಂದರು.

ಇನ್ನು ಮುಂದಿನ ವಿಧಾನಸಭಾ ಚುನಾವಣೆಗೆ    ವರುಣಾ ಕ್ಷೇತ್ರದಿಂಧ ಸ್ಪರ್ಧಿಸುವಂತೆ ನಮ್ಮ ಹುಡುಗ ಕೇಳುತ್ತಿದ್ದಾನೆ. ಚಾಮರಾಜಪೇಟೆಗೆ ಬನ್ನಿ ಎಂದು ಜಮೀರ್ ಕರೆಯುತ್ತಿದ್ದಾರೆ. ಕೋಲಾರದಲ್ಲಿ ಸ್ಪರ್ಧಿಸುವಂತೆ ಆಹ್ವಾನಿಸಿದ್ದಾರೆ ಎಂದು ಸಿದ್ಧರಾಮಯ್ಯ ತಿಳಿಸಿದರು.

Key words: relationship-between -BSY -CM Bommai – strained-Former CM -Siddaramaiah