Saturday, September 19, 2026

BDA Apartments

KSOU ಕುಲಪತಿ ಹುದ್ದೆಗೆ ಅರ್ಜಿ ಆಹ್ವಾನ BDA JK_Adv BDA Adv
Home Front Page KSOU ಕುಲಪತಿ ಹುದ್ದೆಗೆ ಅರ್ಜಿ ಆಹ್ವಾನ.

KSOU ಕುಲಪತಿ ಹುದ್ದೆಗೆ ಅರ್ಜಿ ಆಹ್ವಾನ.

ಮೈಸೂರು,ಅಕ್ಟೋಬರ್,12,2022(www.justkannada.in):  ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ ಕುಲಪತಿ ಹುದ್ದೆಗೆ ಅರ್ಹತೆಯುಳ್ಳ ಪ್ರಾಧ್ಯಾಪಕರಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ.

ಅಭ್ಯರ್ಥಿಗಳು ವಿಶ್ವವಿದ್ಯಾಲಯ ಧನ ಸಹಾಯಗಳ ಆಯೋಗದ ಮಾರ್ಗಸೂಚಿಗಳು ಹಾಗೂ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯ ಅಧಿನಿಯಮ, 1992 ರನ್ವಯ ಕನಿಷ್ಠ 10 ವರ್ಷಗಳ ಕಾಲ ಪ್ರಾಧ್ಯಾಪಕರ ಅಥವಾ ತತ್ಸಮಾನ ಹುದ್ದೆಯ ಕಾರ್ಯಾನುಭವ ಹೊಂದಿರಬೇಕು.

ವಿದ್ಯಾರ್ಹತೆ, ಸಂಶೋಧನೆ, ಶೈಕ್ಷಣಿಕ ಮತ್ತು ಆಡಳಿತಾತ್ಮಕ ಅನುಭವ ಇತ್ಯಾದಿ ವಿವರಗಳೊಂದಿಗೆ ವೆಬ್‌ಸೈಟ್‌ www.ksoumysuru.ac.in ನಲ್ಲಿ ಲಭ್ಯವಿರುವ ನಿಗದಿತ ಅರ್ಜಿ ನಮೂನೆಯಲ್ಲಿ ಸ್ವಯಂಘೋಷಣೆಯೊಂದಿಗೆ “ರಾಜ್ಯಪಾಲರ ವಿಶೇಷ ಕಾರ್ಯದರ್ಶಿ, ಪಿ.ಬಿ. ನಂ. 5033, ರಾಜಭವನ, ಬೆಂಗಳೂರು-560 001” ಇವರಿಗೆ ದಿನಾಂಕ 27.10.2022ರ ಸಂಜೆ 5.30ರೊಳಗೆ ತಲುಪುವಂತೆ ನಾಲ್ಕು ಪ್ರತಿಗಳಲ್ಲಿ ಅರ್ಜಿಗಳನ್ನು ಸಲ್ಲಿಸತಕ್ಕದ್ದು ಹಾಗೂ ಅರ್ಜಿಯ soft copy ಅನ್ನು email ಮೂಲಕ us.university.rb@karnataka.gov.in. ಕಳುಹಿಸಬಹುದು.

Key words: Application- Invitation – post KSOU-VC