Tuesday, July 28, 2026

BDA Apartments

Home Front Page ನನ್ನ ಜೊತೆಯಲ್ಲೇ ಇದ್ದು ನನಗೆ ಮದ್ದು ಹಾಕುವ ಕೆಲಸ ಮಾಡಿದ್ದಾರೆ- ಹೆಚ್.ವಿಶ್ವನಾಥ್ ಗೆ ಪರೋಕ್ಷ ಟಾಂಗ್...

ನನ್ನ ಜೊತೆಯಲ್ಲೇ ಇದ್ದು ನನಗೆ ಮದ್ದು ಹಾಕುವ ಕೆಲಸ ಮಾಡಿದ್ದಾರೆ- ಹೆಚ್.ವಿಶ್ವನಾಥ್ ಗೆ ಪರೋಕ್ಷ ಟಾಂಗ್ ಕೊಟ್ಟ ಸಚಿವ ಎಸ್.ಟಿ ಸೋಮಶೇಖರ್.

ಮೈಸೂರು,ಅಕ್ಟೋಬರ್,12,2022(www.justkannada.in):  ಈ ಭಾರಿ ಅದ್ಧೂರಿಯಾಗಿ ನಡೆದ ಮೈಸೂರು ದಸರಾ ಮಹೋತ್ಸವ ಅದ್ವಾನವಾಗಿತ್ತು ಎಂದು ಹೇಳಿಕೆ ನೀಡಿದ್ಧ ವಿಧಾನಪರಿಷತ್ ಸದಸ್ಯ ಹೆಚ್.ವಿಶ್ವನಾಥ್ ಗೆ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ ಸೋಮಶೇಖರ್ ಪರೋಕ್ಷ ಟಾಂಗ್ ನೀಡಿದ್ದಾರೆ.

ಮೈಸೂರಿನಲ್ಲಿ ಇಂದು ಮಾತನಾಡಿದ ಸಚಿವ ಎಸ್.ಟಿ ಸೋಮಶೇಖರ್, ಜೊತೆಯಲ್ಲಿದ್ದವರೆ ಮದ್ದು ಹಾಕಿದ್ದಾರೆ. ನಾನು ದೊಡ್ಡವರ ಹೆಸರು ಹೇಳಲ್ಲ. ನನ್ನ ಜೊತೆಯಲ್ಲೇ ಇದ್ದು ನನಗೆ ಮದ್ದು ಹಾಕುವ ಕೆಲಸ ಮಾಡಿದ್ದಾರೆ. ಅವರಿಗೆ ಚಾಮುಂಡೇಶ್ವರಿ ಆಯಸ್ಸು ಆರೋಗ್ಯ ಕೊಟ್ಟು ಕಾಪಾಡಲಿ ಎಂದು ಕುಟುಕಿದರು.

ಮೈಸೂರಿನಲ್ಲೇ ಹುಟ್ಟಿ ಮೈಸೂರಿನಲ್ಲೇ ರಾಜಕಾರಣ ಮಾಡಿ ಉಸ್ತುವಾರಿ ಸಚಿವರಾಗಿದ್ದವರು. ದಸರಾಗೆ ಸಂಪೂರ್ಣವಾಗಿ ತೊಡಗಿಸಿಕೊಂಡಿಲ್ಲ. ನಾನು 12 ದಿನವು ಮೈಸೂರಿನಲ್ಲೇ ಇದ್ದು ದಸರಾ ನಡೆಸಿದ್ದೇ‌ನೆ. ದಸರಾದ ಇತಿಹಾಸದಲ್ಲೆ ಯಾರು 12 ದಿನ‌ ಇದ್ದು ದಸರಾ ನಡೆಸಿಲ್ಲ. ಎಲ್ಲರೂ ದಸರಾ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ನಾನು ಬೇರೆಯವರ ಮಾತುಗಳಿಗೆ ತಲೆಕೆಡಸಿಕೊಳ್ಳುವುದಿಲ್ಲ ಎಂದು ಸಚಿವ ಎಸ್.ಟಿ.ಸೋಮಶೇಖರ್ ಹೇಳಿದರು.

Key words: Minister -ST Somashekhar, – indirect –tong- H. Vishwanath,