Friday, August 7, 2026

BDA Apartments

Home Crime ಕಪಿಲಾ ನದಿ ಸೇತುವೆ ಮೇಲೆ ಕಂಬಕ್ಕೆ ಬೈಕ್ ಡಿಕ್ಕಿ: ಬೈಕ್ ಸವಾರ ಸ್ಥಳದಲ್ಲೇ ಸಾವು…

ಕಪಿಲಾ ನದಿ ಸೇತುವೆ ಮೇಲೆ ಕಂಬಕ್ಕೆ ಬೈಕ್ ಡಿಕ್ಕಿ: ಬೈಕ್ ಸವಾರ ಸ್ಥಳದಲ್ಲೇ ಸಾವು…

ಮೈಸೂರು,ಫೆ,26,2020(www.justkannada.in): ಕಪಿಲಾ ನದಿ ಸೇತುವೆ ಮೇಲೆ  ಬೈಕ್ ಕಂಬಕ್ಕೆ ಡಿಕ್ಕಿಯಾಗಿ ಬೈಕ್ ಸವಾರ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ತಡರಾತ್ರಿ ನಡೆದಿದೆ.

ತಿ.ನರಸೀಪುರ ಪಟ್ಟಣದ ನಿವಾಸಿ ನಂದಕುಮಾರ್ (38)ಮೃತ ಪಟ್ಟ ಬೈಕ್ ಸವಾರ. ತಡರಾತ್ರಿ ಕಪಿಲಾ ನದಿ ಸೇತುವೆ ಬದಿಯ ಕಂಬಕ್ಕೆ ಬೈಕ್  ಡಿಕ್ಕಿ ಹೊಡೆದು ಬೈಕ್ ಸವಾರ ನಂದಕುಮಾರ್ ತೀವ್ರ ರಕ್ತ ಶ್ರಾವದಿಂದ ಕೊನೆಯುಸಿರೆಳೆದಿದ್ದಾರೆ.

ಈ ಕುರಿತು ತಿ.ನರಸೀಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Key words: Bike -collision – Kapila River –Bridge- bike rider -death