Monday, September 21, 2026

BDA Apartments

Home Front Page ದೆಹಲಿ ಭೇಟಿಯಲ್ಲಿ ಏನು ವಿಶೇಷತೆ ಇಲ್ಲ: ಔತಣಕೂಟದಲ್ಲಿ ಪಾಲ್ಗೊಳ್ಳಲು ಬಂದಿದ್ದೇನೆ- ಸಿಎಂ ಬಿಎಸ್ ಯಡಿಯೂರಪ್ಪ…

ದೆಹಲಿ ಭೇಟಿಯಲ್ಲಿ ಏನು ವಿಶೇಷತೆ ಇಲ್ಲ: ಔತಣಕೂಟದಲ್ಲಿ ಪಾಲ್ಗೊಳ್ಳಲು ಬಂದಿದ್ದೇನೆ- ಸಿಎಂ ಬಿಎಸ್ ಯಡಿಯೂರಪ್ಪ…

ನವದೆಹಲಿ,ಫೆ,25,2020(www.justkannada.in):  ಅಮೇರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭಾರತ ಪ್ರವಾಸ ಹಿನ್ನೆಲೆ ಔತಣಕೂಟಕ್ಕೆ ರಾಷ್ಟ್ರಪತಿ ಆಹ್ವಾನ ನೀಡಿದ್ದಾರೆ. ಹೀಗಾಗಿ ದೆಹಲಿಗೆ ಬಂದಿದ್ಧೇನೆ ಎಂದು ಸಿಎಂ ಬಿಎಸ್ ಯಡಿಯೂರಪ್ಪ ತಿಳಿಸಿದರು.

ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭಾರತ ಪ್ರವಾಸ ಹಿನ್ನೆಲೆಯಲ್ಲಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಇಂದು ಸಂಜೆ ಔತಣಕೂಟ ಆಯೋಜಿಸಿದ್ದಾರೆ, ರಾಷ್ಟ್ರಪತಿ ಆಹ್ವಾನದ ಮೇರೆಗೆ ಸಿಎಂ ಯಡಿಯೂರಪ್ಪ ದೆಹಲಿಗೆ  ತೆರಳಿದ್ದಾರೆ. ಈ ಬಗ್ಗೆ ಮಾತನಾಡಿರುವ ಸಿಎಂ ಬಿಎಸ್ ಯಡಿಯೂರಪ್ಪ, ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅಹ್ವಾನ ಮೇರೆಗೆ ಔತಣಕೂಟಕ್ಕೆ ಆಗಮಿಸಿದ್ದೇನೆ. ಬಜೆಟ್ ತಯಾರಿ ನಡೆುವೆಯೂ ದೆಹಲಿಗೆ ಧಾವಿಸಿದ್ದೇನೆ. ದೆಹಲಿ ಈ ಭೇಟಿಯಲ್ಲಿ ಏನು ವಿಶೇಷತೆ ಇಲ್ಲ. ನಾಳೆ ಬೆಳಗ್ಗೆ ಬೆಂಗಳೂರಿಗೆ ವಾಪಾಸ್ಸಾಗುವೆ  ಎಂದರು.

 

ಇದೇ ವೇಳೆ ಸರ್ಕಾರ ಟೇಕ್ ಆಫ್ ಆಗಿಲ್ಲ ಎಂಬ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಹೇಳಿಕೆ ಕುರಿತು ಪ್ರತಿಕ್ರಿಯಿಸಿದ ಸಿಎಂ, ಮಾಜಿ ಸಿಎಂಗಳಾದ ಸಿದ್ದರಾಮಯ್ಯ ಹಾಗೂ ಕುಮಾರಸ್ವಾಮಿ ಅವರ ಹೇಳಿಕೆಗೆ ಪ್ರತಿಕ್ರಿಯಿಸುವುದಿಲ್ಲ ಎಂದು ತಿಳಿಸಿದರು.

Key words: come – banquet – invitation –President-visit – Delhi-CM BS Yeddyurappa.