Saturday, August 1, 2026

BDA Apartments

Home Front Page ಅಪಘಾತದ ಕಾರಿಗೂ ನಮಗೂ ಸಂಬಂಧವಿಲ್ಲ: ಪ್ರಕರಣ ತನಿಖಾ ಹಂತದಲ್ಲಿರುವುದರಿಂದ ಪ್ರತಿಕ್ರಿಯಿಸಲ್ಲ–ಸಚಿವ ಆರ್.ಅಶೋಕ್ ಹೇಳಿಕೆ…

ಅಪಘಾತದ ಕಾರಿಗೂ ನಮಗೂ ಸಂಬಂಧವಿಲ್ಲ: ಪ್ರಕರಣ ತನಿಖಾ ಹಂತದಲ್ಲಿರುವುದರಿಂದ ಪ್ರತಿಕ್ರಿಯಿಸಲ್ಲ–ಸಚಿವ ಆರ್.ಅಶೋಕ್ ಹೇಳಿಕೆ…

ಬೆಂಗಳೂರು,ಫೆ,13,2020(www.justkannada.in): ಬಳ್ಳಾರಿ ಜಿಲ್ಲೆ ಹೊಸಪೇಟೆ ತಾಲ್ಲೂಕಿನ ಮರಿಯಮ್ಮನಹಳ್ಳಿ ಬಳಿ ಕಾರು ಅಪಘಾತ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾರಿನಲ್ಲಿ ಸಚಿವ ಅರ್.ಅಶೋಕ್ ಪುತ್ರ ಇದ್ದರೆಂದು ಹಲವು ಸುದ್ದಿಮಾಧ್ಯಮಗಳಲ್ಲಿ ವರದಿಯಾಗಿರುವ ಹಿನ್ನೆಲೆ ಈ ಕುರಿತು ಆರ್.ಅಶೋಕ್ ಪ್ರತಿಕ್ರಿಯಿಸಿದ್ದಾರೆ.

ಈ ಬಗ್ಗೆ ಮಾತನಾಡಿರುವ ಸಚಿವ ಆರ್.ಅಶೋಕ್, ಹಂಪಿಯಿಂದ ಬರುವ ವೇಳೆ ಕಾರು ಅಪಘಾತವಾಗಿದೆ. ದುರಾದೃಷ್ಟವಶಾತ್  ಇಬ್ಬರು ಸಾವನ್ನಪ್ಪಿದ್ದಾರೆ. ಇದು ನೋವಿನ ಸಂಗತಿ. ಅಪಘಾತದಲ್ಲಿ ನಮ್ಮ ಹೆಸರು ಕೇಳಿ ಬರುತ್ತಿದೆ. ಆದರೆ ಅಪಘಾತದ ಕಾರಿಗೂ ನಮಗೂ ಸಂಬಂಧವಿಲ್ಲ. ನಾನು ಸಚಿವರಾಗಿರುವುದಕ್ಕೂ ಇದಕ್ಕೂ ಸಂಬಂಧ ಇಲ್ಲ. ಕಾನೂನು ಎಲ್ಲರಿಗೂ ಒಂದೇ. ಪ್ರಕರಣ ತಿರುಚುವ ಕೆಲಸ ಮಾಡುವುದು ಸರಿಯಲ್ಲ ಎಂದಿದ್ದಾರೆ.

ಹಾಗೆಯೇ  ಕೆಂಗೇರಿ ನ್ಯಾಷನಲ್ ಪಬ್ಲಿಕ್ ಸ್ಕೂಲ್ ಗೆ ಹೆಸರಿನಲ್ಲಿ ನೋಂದಣಿಯಾಗಿರುವ ಕಾರು ಅಪಘಾತಕ್ಕೀಡಾಗಿದೆ ಎಂಬ ಸುದ್ದಿ ಹಿನ್ನೆಲೆ  ಆ ಶಿಕ್ಷಣೆ ಸಂಸ್ಥೆಗೂ ನಮಗೂ ಯಾವುದೇ ಸಂಬಂಧ ಇಲ್ಲ.  ಎಂದು ಸಚಿವ ಆರ್.ಅಶೋಕ್ ತಿಳಿಸಿದ್ದಾರೆ.

ಹಾಗೆಯೇ ಮುಂದುವರೆದು ಅಪಘಾತದ ಬಗ್ಗೆ ಅಲ್ಲಿನವರೇ ದೂರು ನೀಡಿದ್ದಾರೆ. ಪ್ರಕರಣದಲ್ಲಿ ಎಷ್ಟೇ ದೊಡ್ಡವರಿರಲಿ ಸಣ್ಣವರಿರಲಿ ಸೂಕ್ತ ಕ್ರಮ ಕೈಗೊಳ್ಳಲಾಗುತ್ತದೆ. ಪ್ರಕರಣ ತನಿಖಾ ಹಂತದಲ್ಲಿರುವುದರಿಂದ ಪ್ರತಿಕ್ರಿಯಿಸಲ್ಲ ಎಂದು ಸಚಿವ ಆರ್.ಅಶೋಕ್ ತಿಳಿಸಿದ್ದಾರೆ.

Key words: ballari-car-accident-investigation –minister- R.Ashok-reaction