ಎಸ್ಸಿ, ಎಸ್ಟಿ ಮತ್ತು ಹಿಂದುಳಿದ ವರ್ಗಗಳ ಮೀಸಲಾತಿ ಕುರಿತು ಸುಪ್ರೀಂ ತೀರ್ಪು ಹಿನ್ನೆಲೆ: ರೀ ಪಿಟಿಷನ್ ಹಾಕುವಂತೆ ಕೇಂದ್ರಕ್ಕೆ ಮಾಜಿ ಸಂಸದ ಧೃವನಾರಾಯಣ್ ಒತ್ತಾಯ…

ಮೈಸೂರು,ಫೆ,13,2020(www.justkannada.in):  ಪರಿಶಿಷ್ಟ ಜಾತಿ, ಪಂಗಡ ಹಾಗೂ ಹಿಂದುಳಿದ ವರ್ಗಗಳ ಮೀಸಲಾತಿ  ಮೂಲಭೂತಹಕ್ಕಲ್ಲ ಎಂದು ಸುಪ್ರೀಂಕೋರ್ಟ್ ತೀರ್ಪು ನೀಡಿದ ‌ಹಿನ್ನಲೆ. ಈ ಬಗ್ಗೆ ಮತ್ತೆ ರಿಪಿಟಿಷನ್ ಹಾಕುವಂತೆ ಕೇಂದ್ರ ಸರ್ಕಾರಕ್ಕೆ ಮಾಜಿ ಸಂಸದ ಧೃವನಾರಾಯಣ್ ಒತ್ತಾಯಿಸಿದ್ದಾರೆ.

ಈ ಬಗ್ಗೆ ಮೈಸೂರಿನ ಕಾಂಗ್ರೆಸ್ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಮಾಜಿ ಸಂಸದ ಧೃವನಾರಾಯಣ್, ಈ ತೀರ್ಪು ಸಾಮಾಜಿಕ ನ್ಯಾಯಕ್ಕೆ ವಿರುದ್ದವಾದ ತೀರ್ಪು. ಈ ತೀರ್ಪು ಪರಿಶಿಷ್ಟ ಜಾತಿ,  ಪರಿಶಿಷ್ಟ ಪಂಗಡಕ್ಕೆ ಹಾಗೂ ಹಿಂದುಳಿದ ವರ್ಗಗಳಿಗೆ ವಿರುದ್ಧವಾಗಿ ಬಂದಿದೆ. ಇದಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ರೀ ಪಿಟಿಷನ್ ಹಾಕಬೇಕು. ನಾನು ಪ್ರಧಾನ ಮಂತ್ರಿಗಳನ್ನು ಕೇಳಿಕೊಳ್ಳುತ್ತೇನೆ ಎಂದು ಆಗ್ರಹಿಸಿದರು.

ಸುಪ್ರೀಂ ಕೋರ್ಟ್ ಮೇಲೆ ನಮಗೆ ಅಪಾರವಾದ ನಂಬಿಕೆ ಇದೆ‌. ಸರ್ಕಾರಿ ವಕೀಲರು ಸರಿಯಾಗಿ ವಾದ ಮಂಡಿಸದ ಕಾರಣ ಈಗಾಗಿದೆ. ಅದಕ್ಕಾಗಿ ನಾನು ಕೇಂದ್ರ ಸರ್ಕಾರವನ್ನ ಕೇಳಿಕೊಳ್ಳುತ್ತೇನೆ. ಮತ್ತೆ ರೀ ಪಿಟಿಷನ್ ಹಾಕಬೇಕು. 9 ಸದಸ್ಯ ನ್ಯಾಯ ಪೀಠದಲ್ಲಿ ರೀ ಪಿಟಿಷನ್ ಹಾಕಬೇಕುಮೋದಿಯವರು ಎಲ್ಲಾ ಪಕ್ಷದವರನ್ನ ಸಭೆ ಕರೆದು ಚರ್ಚೆ ಮಾಡಬೇಕು ಎಂದು ಒತ್ತಾಯಿಸಿದರು.

ಇದರ ಬಗ್ಗೆ ಮೀಸಲಾತಿ ಕ್ಷೇತ್ರದಿಂದ‌ ಗೆದ್ದು ಬಂದ ಬಿಜೆಪಿ  ನಾಯಕರು ಮಾತನಾಡಬೇಕಿತ್ತು. ಆದರೆ ಅವರು ಇರದ ಬಗ್ಗೆ ಮಾತನಾಡುತ್ತಿಲ್ಲ. ಆದರೆ ಕಾಂಗ್ರೆಸ್ ಪಕ್ಷ ಸುಮ್ಮನೆ ಇಲ್ಲ. ಈಗಾಗಲೇ ನಮ್ಮ ರಾಷ್ಟ್ರಿಯ ಹಾಗೂ ರಾಜ್ಯದ ನಾಯಕರು ಪ್ರತಿಭಟನೆ ಮಾಡಲು ತಿಳಿಸಿದ್ದಾರೆ‌. ಇದೇ ತಿಂಗಳು 15 ರಂದು ಇದರ ವಿರುದ್ಧವಾಗಿ ಪ್ರತಿಭಟನೆ ಮಾಡುತ್ತಿದ್ದೇವೆ. ಕೇಂದ್ರ ಸರ್ಕಾರ ರೀ ಪಿಟಿಷನ್ ಹಾಕುತ್ತಾರೆ ಎಂಬ ನಂಬಿಕೆ ಇದೆ. ಒಂದು ವೇಳೆ ರೀ ಪಿಟಿಷನ್ ಹಾಕದೆ ಇದ್ದರೆ ಉಗ್ರ ಹೋರಾಟ ಮಾಡಲಾಗುವುದು ಎಂದು ಮಾಜಿ ಸಂಸದ ಧೃವನಾರಾಯಣ್  ಎಚ್ಚರಿಕೆ ನೀಡಿದರು.

Key words: Supreme court-Judgment -SC, ST – Reservation-Former MP- Dhruvanarayan- urges- re-petition