ಡಾ.ಸರೋಜಿನಿ ಮಹಿಷಿ ವರದಿ ಜಾರಿಗೆ ಒತ್ತಾಯಿಸಿ ಕರ್ನಾಟಕ ಬಂದ್: ಮೈಸೂರಿನಲ್ಲಿ ವಿನೂತನ ತೆಂಗಿನಕಾಯಿ ಚಿಪ್ಪು ಚಳುವಳಿ…

ಮೈಸೂರು,ಫೆ,13,2020(www.justkannada.in): ಕನ್ನಡಿಗರಿಗೆ ಉದ್ಯೋಗದಲ್ಲಿ ಮೀಸಲಾತಿ ನೀಡುವ ಸರೋಜಿನಿ ಮಹಿಷಿ ವರದಿ ಜಾರಿಗೆ ಆಗ್ರಹಿಸಿ ಮೈಸೂರು ಜಿಲ್ಲಾ ಕನ್ನಡ ಚಳವಳಿಗಾರರ ಸಂಘದ ವತಿಯಿಂದ ತೆಂಗಿನಕಾಯಿ ಚಿಪ್ಪು ಚಳುವಳಿ ಮಾಡಲಾಯಿತು.

ಸರೋಜಿನಿ ಮಹಿಷಿ ವರದಿ ಜಾರಿಗೆ ಆಗ್ರಹಿಸಿ ಇಂದು ಕನ್ನಡಪರ ಸಂಘಟನೆ ಸೇರಿ ವಿವಿಧ ಸಂಘಟನೆಗಳು ರಾಜ್ಯಬಂದ್ ಮಾಡಿದ್ದು ಬೆಂಗಳೂರು ಕೋಲಾರ, ಹುಬ್ಬಳ್ಳಿ, ಹಾಸನ ಸೇರಿ ಹಲವೆಡೆ ಪ್ರತಿಭಟನೆಗಳು ನಡೆಯುತ್ತಿವೆ. ಹಾಗೆಯೇ ಸಾಂಸ್ಕೃತಿಕ ನಗರಿ ಮೈಸೂರಿನಲ್ಲೂ ಸಹ ಧರಣಿ ನಡೆಸಲಾಗುತ್ತಿದೆ.

ಮೈಸೂರು ಜಿಲ್ಲಾ ಕನ್ನಡ ಚಳವಳಿಗಾರರ ಸಂಘದ ನೇತೃತ್ವದಲ್ಲಿ ಮೈಸೂರಿನ ಗಾಂಧಿವೃತ್ತದಲ್ಲಿ ತೆಂಗಿನಕಾಯಿ ಚಿಪ್ಪುಗಳನ್ನ ಪ್ರದರ್ಶಿಸಿ ಕಾರ್ಯಕರ್ತರ ವಿನೂತನವಾಗಿ ಪ್ರತಿಭಟನೆ ನಡೆಸಿದರು. ಈ ವೇಳೆ ಸರೋಜಿನಿ ಮಹಿಷಿ ವರದಿ ಜಾರಿಗೊಳಿಸುವಂತೆ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.  ಪ್ರತಿಭಟನೆಯಲ್ಲಿ ಹಿರಿಯ ಸಾಹಿತಿ ಡಾ.ಸಿ.ಪಿ.ಕೃಷ್ಣಕುಮಾರ್(ಸಿಪಿಕೆ) ಸೇರಿದಂತೆ ಹಲವರು ಭಾಗಿಯಾಗಿದ್ದರು.

ಪ್ರಥಮ ಪಿಯು ಪರೀಕ್ಷೆಗಿಲ್ಲ ಬಂದ್ ಏಫೆಕ್ಟ್…

ಕನ್ನಡಪರ ಸಂಘಟನೆಗಳು ಇಂದು ಕರೆ ನೀಡಿರುವ ಕರ್ನಾಟಕ ಬಂದ್ ಗೆ ಮೈಸೂರಿನಲ್ಲಿ ಪೂರ್ಣ ಬೆಂಬಲ ದೊರೆತಿಲ್ಲ. ಎಂದಿನಂತೆ ಸಾರಿಗೆ ಸಂಚಾರವಿದ್ದು ಶಾಲಾಕಾಲೇಜುಗಳು ಓಪನ್ ಆಗಿವೆ. ಕಳೆದ ಮೂರು ದಿನಗಳಿಂದ ನಡೆಯುತ್ತಿರುವ ಪ್ರಥಮ ಪಿಯುಸಿ ಪರೀಕ್ಷೆಗೂ ಯಾವುದೇ ಬಂದ್ ಎಫೆಕ್ಟ್ ತಟ್ಟಿಲ್ಲ. ಎಂದಿನಂತೆ ವಿದ್ಯಾರ್ಥಿಗಳು ಪರೀಕ್ಷೆ ಬರೆಯುತ್ತಿದ್ದಾರೆ. ಇಂದು

ಇಂದು ಇಂಗ್ಲಿಷ್ ವಿಷಯ ಪರೀಕ್ಷೆ ನಡೆಯುತ್ತಿದ್ದು ಶಿಕ್ಷಣ ಇಲಾಖೆ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗೆ ಯಾವುದೇ ತೊಂದರೆಯಾಗದಂತೆ ಮುಂಜಾಗ್ರತೆ ಕ್ರಮ ಕೈಗೊಂಡಿದೆ.

Key words: sarojini  mahishi-report-karnataka bandh-mysore-protest-tengina kayi chippu-chaluvali