Sunday, October 11, 2026

Dasara Wishes

ಇಂದು ದಾವಣಗೆರೆಯಲ್ಲಿ ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸಭೆ DasraWishes_JK DasraWishes JK
Happy Dasara
Home Cinema ಸಲ್ಮಾನ್ ನನ್ನ ಅಣ್ಣನಿದ್ದಂತೆ ಎಂದ ಕಿಚ್ಚ ಸುದೀಪ

ಸಲ್ಮಾನ್ ನನ್ನ ಅಣ್ಣನಿದ್ದಂತೆ ಎಂದ ಕಿಚ್ಚ ಸುದೀಪ

ಬೆಂಗಳೂರು, ಡಿಸೆಂಬರ್ 09, 2019 (www.justkannada.in): ಬಿಗ್ ಬಾಸ್ ವೇದಿಕೆಯಲ್ಲಿ ಸಲ್ಮಾನ್ ಖಾನ್ ಕಂಡು ಪ್ರೇಕ್ಷಕರು ಎಷ್ಟು ಪುಳಕಿತರಾಗಿದ್ದಾರೋ ಕಿಚ್ಚ ಸುದೀಪ್ ಕೂಡಾ ತಮ್ಮ ಶೋನಲ್ಲಿ ಬಾಲಿವುಡ್ ಸೂಪರ್ ಸ್ಟಾರ್ ನನ್ನು ಕರೆತಂದಿದ್ದಕ್ಕೆ ಅಷ್ಟೇ ಖುಷಿಯಾಗಿದ್ದಾರೆ.

ದಬಾಂಗ್ 3 ಸಿನಿಮಾದಲ್ಲಿ ಇವರು ಜತೆಯಾಗಿ ನಟಿಸಿದ್ದಾರೆ. ಹೀಗಾಗಿ ಇಬ್ಬರ ನಡುವಿನ ಸ್ನೇಹ ಮತ್ತಷ್ಟು ಗಟ್ಟಿಯಾಗಿದೆ. ಇದೇ ಸ್ನೇಹದಿಂದ ಸುದೀಪ್ ಶೋನಲ್ಲಿ ಸಲ್ಮಾನ್ ಹಿಂದಿ ಬಿಗ್ ಬಾಸ್ ವೇದಿಕೆಯಿಂದ ಟಿವಿ ಪರದೆ ಮೂಲಕ ಕಾಣಿಸಿಕೊಂಡಿದ್ದರು.

ಇದರ ಬಗ್ಗೆ ತಮ್ಮ ಸಾಮಾಜಿಕ ಜಾಲತಾಣ ಪುಟದಲ್ಲಿ ಬರೆದುಕೊಂಡಿರುವ ಕಿಚ್ಚ ‘ಬಿಗ್ ಬಾಸ್ ವೇದಿಕೆಯಲ್ಲಿ ಸಲ್ಮಾನ್ ಖಾನ್ ರನ್ನು ಸಂಪರ್ಕಿಸಿದ್ದು ಎಂದಿಗೂ ಮರೆಯಲಾಗದ ಅನುಭವ. ಇದೇ ಮೊದಲ ಬಾರಿಗೆ ಇಂತಹದ್ದೊಂದು ಕ್ಷಣಕ್ಕೆ ಸಾಕ್ಷಿಯಾಗಿದ್ದು ವಿಶೇಷ. ಸಲ್ಮಾನ್ ಯಾವತ್ತೂ ನನಗೆ ಅಣ್ಣನಿದ್ದಂತೆ’ ಎಂದಿದ್ದಾರೆ.