ಬಾಲ್ಯದ ಗೆಳತಿ ಜತೆಗಿನ ದೀಪಿಕಾ ಪೋಟೋ ವೈರಲ್ !

ಮುಂಬೈ, ಡಿಸೆಂಬರ್ 09, 2019 (www.justkannada.in): ದೀಪಿಕಾ ಪಡುಕೋಣೆ ಇನ್ಸ್ಟಾಗ್ರಾಮ್‌ನಲ್ಲಿ ತಮ್ಮ ಚಿಕ್ಕಂದಿನ ಫೋಟೋ ಹಾಗೂ ಈಗಿನ ಸೆಲ್ಫಿ ಪೋಸ್ಟ್ ಮಾಡಿದ್ದಾರೆ.

ದೀಪಿಕಾ ಬಾಲ್ಯದ ಗೆಳತಿ ದಿವ್ಯಾ ನಾರಾಯಣ್ ಅವರ ಜೊತೆ ಇರುವ ಚಿತ್ರ ಹಾಕಿದ್ದು ಹಂಪ್ಟಿ ಡಂಪ್ಟಿ ಗೋಡೆಯ ಮೇಲೆ ಕುಳಿತಿದ್ದು, ಮೊಸರನ್ನ ತಿಂತಿದ್ರು ಎಂದು ಅಡಿಬರಹ ಹಾಕಿದ್ದಾರೆ.

ದೀಪಿಕಾ ಹಳದಿ ಸ್ವೆಟರ್ ಹಾಕಿದ್ದು ನೆಟ್ಟಿಗರು ಅವರ ಈ ಚಿತ್ರ ಮೆಚ್ಚಿದ್ದಾರೆ. ರಣ್‌ವೀರ್ ಸಿಂಗ್ ಹಾಗೂ ಆಲಿಯಾ ಭಟ್ ಸೇರಿ ಹಲವು ಸೆಲೆಬ್ರಿಟಿ ಕೂಡ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.