Monday, October 12, 2026

Dasara Wishes

ಯಾದಗಿರಿಗೆ ಕೇಂದ್ರ ಅಧ್ಯಯನ ತಂಡ ಭೇಟಿ: ನೆರೆಹಾನಿ ಪ್ರದೇಶಗಳ ಪರಿಶೀಲನೆ DasraWishes_...
Happy Dasara
Home Front Page ಹುಣಸೂರಿನಲ್ಲಿ ಹೆಚ್.ವಿಶ್ವನಾಥ್ ಗೆ ಮುಖಭಂಗ : ಕೈ ಅಭ್ಯರ್ಥಿ ಹೆಚ್.ಪಿ ಮಂಜುನಾಥ್ ಜಯಭೇರಿ…

ಹುಣಸೂರಿನಲ್ಲಿ ಹೆಚ್.ವಿಶ್ವನಾಥ್ ಗೆ ಮುಖಭಂಗ : ಕೈ ಅಭ್ಯರ್ಥಿ ಹೆಚ್.ಪಿ ಮಂಜುನಾಥ್ ಜಯಭೇರಿ…

ಮೈಸೂರು,ಡಿ,9,2019(www.justkannada.in):  15 ವಿಧಾನಸಭಾ ಕ್ಷೇತ್ರಗಳ ಪೈಕಿ ಬಾರಿ ಕುತೂಹಲಕ್ಕೆ ಕಾರಣವಾಗಿದ್ದ ಹುಣಸೂರು ಉಪಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಹೆಚ್.ವಿಶ್ವನಾಥ್ ಗೆ ಭಾರಿ ಮುಖಭಂಗವಾಗಿದ್ದು ಈ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಹೆಚ್.ಪಿ ಮಂಜುನಾಥ್ ಭರ್ಜರಿ ಜಯ ಗಳಿಸಿದ್ದಾರೆ.

ಕೈ ಅಭ್ಯರ್ಥಿ ಹೆಚ್.ಪಿ ಮಂಜುನಾಥ್ ಗೆಲುವಿನ ಬಗ್ಗೆ ಚುನಾವಣಾ ಆಯೋಗದ ಅಧಿಕೃತ ಘೋಷಣೆಯೊಂದೆ ಬಾಕಿ ಇದೆ. ಹುಣಸೂರು ವಿಧಾನಸಭಾ ಕ್ಷೇತ್ರದಲ್ಲಿ 14ನೇ ಸುತ್ತಿನ ಮತಗಳ ಎಣಿಕೆ ಮುಕ್ತಾಯದ ವೇಳೆಗೆ ಕಾಂಗ್ರೆಸ್  ಅಭ್ಯರ್ಥಿ  ಹೆಚ್.ಪಿ ಮಂಜುನಾಥ್ 64,834 ಮತಗಳು,  ಬಿಜೆಪಿಯ  ಹೆಚ್. ವಿಶ್ವನಾಥ್ 39,687 ಮತಗಳನ್ನ ಪಡೆದಿದ್ದಾರೆ ಹಾಗೆಯೇ ಜೆಡಿಎಸ್ ನ ದೇವರಹಳ್ಳಿ ಸೋಮಶೇಖರ್ 24,303 ಮತಗಳನ್ನ ಗಳಿಸಿದ್ದಾರೆ.  ಕಾಂಗ್ರೆಸ್  ಅಭ್ಯರ್ಥಿ ಹೆಚ್.ಪಿ ಮಂಜುನಾಥ್  25,147 ಮತಗಳ ಮುನ್ನಡೆ ಸಾಧಿಸುವ ಮೂಲಕ ಜಯ ಗಳಿಸಿದ್ದಾರೆ.

Key words: hunsur- by election-bjp candidate- h.vishwanath –congress candidate-hp manjunath- won