Sunday, October 11, 2026

Dasara Wishes

ಇಂದು ದಾವಣಗೆರೆಯಲ್ಲಿ ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸಭೆ DasraWishes_JK DasraWishes JK
Happy Dasara
Home Front Page ಮೈಸೂರು ಅರಮನೆಯಲ್ಲಿ ಖಾಸಗಿ ದರ್ಬಾರ್ ಶುರು : ಕಂಕಣಧಾರಣೆ ಉದ್ದೇಶ ವಿವರಿಸಿದ ರಾಜವಂಶಸ್ಥ ಯದುವೀರ್

ಮೈಸೂರು ಅರಮನೆಯಲ್ಲಿ ಖಾಸಗಿ ದರ್ಬಾರ್ ಶುರು : ಕಂಕಣಧಾರಣೆ ಉದ್ದೇಶ ವಿವರಿಸಿದ ರಾಜವಂಶಸ್ಥ ಯದುವೀರ್

ಮೈಸೂರು,ಅಕ್ಟೋಬರ್,11,2026 (www.justkannada.in): ವಿಶ್ವ ವಿಖ್ಯಾತ ಮೈಸೂರು ದಸರಾ ಸಂಭ್ರಮ ಇಂದಿನಿಂದ  ಆರಂಭವಾಗಿದ್ದು ಅರಮನೆಯಲ್ಲಿ ರಾಜವಂಶಸ್ಥ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ರಿಂದ  ಖಾಸಗಿ ದರ್ಬಾರ್ ಶುರುವಾಗಿದೆ.

ಬೆಳಿಗ್ಗೆ 6 ಗಂಟೆಯಿಂದ 7.12 ಗಂಟೆ ಸಮಯದಲ್ಲಿ ರತ್ನಾಖಚಿತ ಸಿಂಹಾಸನಕ್ಕೆ ಸಿಂಹ ಮುಖ ಜೋಡಣೆ ಕಾರ್ಯ ನಡೆಯಿತು. ಬೆಳಿಗ್ಗೆ 8:35 ರಿಂದ 9.05 ನಡುವೆ ಯದುವೀರ್ ಒಡೆಯರ್ ರಿಗೆ ಕಂಕಣ ಧಾರಣೆ ಮಾಡಲಾಯಿತು. 11.45 ರಿಂದ 12.05 ರ ಶುಭ ಲಗ್ನದಲ್ಲಿ ಸಿಂಹಾಸನಾರೋಹಣ  ಮಾಡಿದ ಯದುವೀರ್ ರಾಜಪೋಷಕಿನಲ್ಲಿ ಖಾಸಗಿ ದರ್ಬಾರ್ ಆರಂಭಿಸಿದರು.

ಬಳಿಕ ಎಲ್ಲಾ ದೇವಾಲಯಗಳಿಂದ ಬಂದ ತೀರ್ಥ ಪ್ರಸಾದ ಪಡೆದು, 1.40 ಗಂಟೆಯಿಂದ 2.05 ವರೆಗೆ ಚಾಮುಂಡಿ ತಾಯಿಯನ್ನು ಚಾಮುಂಡೇಶ್ವರಿ ತೊಟ್ಟಿಯಿಂದ ಕನಕ ತೊಟ್ಟಿಗೆ ತಂದು ನವರಾತ್ರಿ ಇಂದ ವಿಜಯದಶಮಿ ವರೆಗೆ ಪೂಜೆ ಸಲ್ಲಿಸಲಾಗುತ್ತದೆ .

ಪ್ರತಿನಿತ್ಯ ಪಟ್ಟದ ಕುದುರೆ ಪಟ್ಟದ ಹಸು, ಪಟ್ಟದ ಒಂಟೆ, ಪಟ್ಟದ ಆನೆ, ರಾಜಮನೆತನದ ಹೆಣ್ಣು ಆನೆಗಳಿಗೆ ಕೋಡಿ ಸೋಮೇಶ್ವರ ದೇವಾಲಯದಿಂದ ಕರೆ ತಂದು ಕಲ್ಯಾಣ ತೊಟ್ಟಿಯಲ್ಲಿ ಪೂಜೆ ಸಲ್ಲಿಸಲಾಗುತ್ತದೆ. ಪ್ರತಿದಿನ ರಾಜವಂಶಸ್ಥರಿಂದ ರತ್ನಖಚಿತ ಸಿಂಹಾಸನಕ್ಕೆ ಪೂಜೆ ಹಾಗೂ ಖಾಸಗಿ ದರ್ಬಾರ್ ನಡೆಯಲಿದೆ.

ಖಾಸಗಿ ದರ್ಬಾರ್ ಮುನ್ನ ಕಂಕಣಧಾರಣೆಯ ಉದ್ದೇಶ ವಿವರಣೆ ನೀಡಿದ ಯದುವೀರ್

ಕಂಕಣಧಾರಣೆಗೂ ಮುನ್ನ ರಾಜವಂಶಸ್ಥ ಯದುವೀರ್ ಒಡೆಯರ್  ಮಾತನಾಡಿದ್ದು,ಖಾಸಗಿ ದರ್ಬಾರ್ ಮುನ್ನ ಕಂಕಣಧಾರಣೆಯ ಉದ್ದೇಶ ಏನು ಎಂಬುದಕ್ಕೆ ವಿವರಣೆ ನೀಡಿದ್ದಾರೆ.

ರಕ್ಷಣೆಯ ದೃಷ್ಠಿಯಿಂದ , ಕಾರ್ಯಕ್ರಮ ಯಶಸ್ವಿಯಾಗಿ ಸಾಗಲು ಕಂಕಣ ಧಾರಣೆ ಮಾಡ್ತಾರೆ. ಎಲ್ಲಾ ಕಾರ್ಯಕ್ರಮಗಳು ಸುಗಮವಾಗಿ ಸಾಗಲು. ಯಾವುದೇ ತೊಡಕು ಉಂಟಾಗದ ರೀತಿ, ಕೆಡಕು ಆಗದಿರಲಿ ಅಂತ ಕಂಕಣ ಕಟ್ತಾರೆ. ಈ‌ ಬಾರಿ ಹತ್ತು ದಿನ ದಸರಾ ಇದೆ.  ಪ್ರತಿವರ್ಷ ನವರಾತ್ರಿ ನಡೆಯಬೇಕಿತ್ತು, ಈ ಬಾರಿ ಹತ್ತು ದಿನ ಬಂದಿದೆ. ಸೂರ್ಯೋದಯ, ಸೂರ್ಯಾಸ್ತ ದಿಂದ ತಿಥಿ ಬದಲಾಗುತ್ತದೆ. ಈವರೆಗಿನ 26 ರಾಜರ ಪೈಕಿ ನಾಲ್ವಡಿ  , ಶ್ರೀಕಂಠದತ್ತ ನರಸಿಂಹರಾಜ ಒಡೆಯರ್, ಚಾಮರಾಜ ಒಡೆಯರ್ ಸ್ಪೂರ್ತಿ . 2015 ರಿಂದ ಈವರಗಿನ ದಸರಾದಲ್ಲಿ ಸಾಕಷ್ಟು ವ್ಯತ್ಯಾಸವಾಗಿದೆ. ಆರಂಭದಲ್ಲಿ ಹೆಚ್ಚು ಕಲಿಯಬೇಕಿತ್ತುPrivate Durbar darbar

ಈಗ ಎಲ್ಲವೂ ಕೂಡ ಕರಗತವಾಗಿದೆ. ಎಲ್ಲದರ ಅರಿವು ಇರುವ ಕಾರಣ ರೂಢಿಯಾಗಿದೆ. ಧಾರ್ಮಿಕ ಆಚರಣೆ ನಡೆಯುವಾಗ ತಪ್ಪಾದರೆ ಅಮ್ಮ ತಿದ್ದುತ್ತಾರೆ. ಅವರು ಇರುವುದೇ ತಪ್ಪುಗಳನ್ನ ತಿದ್ದುವುದಕ್ಕೆ. ಆದರೆ ನಾನು ಈವರಗೆ ಯಾವುದೇ ತಪ್ಪೆಸಗಿಲ್ಲ. ನಮಗೆ ಆರಂಭದಲ್ಲಿ ಆತಂಕವಿತ್ತು, ಈಗ ದೂರವಿಲ್ಲ. ದಸರಾ ವೇಳೆ ನಾವು ಉಪವಾಸ ಇರುವುದಿಲ್ಲ. ಪೂಜೆ ಬಳಿಕ ಉಪಹಾರ, ತಿಂಡಿ, ಸಸ್ಯಹಾರ ಸೇವನೆ ಮಾಡ್ತೀವಿ ಎಂದರು.

ಹತ್ತು ದಿನಗಳ ಕಾಲ ಹೊರಗಡೆ ಊಟ ನಿಷಿದ್ಧ. ಆಯುಧಪೂಜೆ ದಿನ ಎಲ್ಲಾ ವಾಹನಗಳಿಗೂ ಪೂಜೆ ಸಲ್ಲಿಸುತ್ತೇವೆ. ನನಗೆ ಇಂತಹದ್ದೇ ವಾಹನ ಫೇವರಿಟ್ ಅಂತಿಲ್ಲ. ನವರಾತ್ರಿ ದಿನವೇ ಕಂಕಣ‌ ವಿಸರ್ಜನೆ ಬಳಿಕ. ವಿಜಯದಶಮಿ ದಿನ ಹಲವು ಕಾರ್ಯಕ್ರಮ ಇರುತ್ತದೆ. ಅರಮನೆಯಲ್ಲಿ ಚಾಮುಂಡಿ ಪುನಃ ಕನ್ನಡಿತೊಟ್ಟಿಗೆ ತೆರಳುವುದನ್ನ ನೋಡುವುದೇ ಮೊದಲ ಕಾರ್ಯ. ರಾಜಪೋಷಕು ಮೊದಲ ವರ್ಷ ಸಿದ್ಧಪಡಿಸಿದ್ದಾರೆ. ಅಂದಿನಿಂದ ಇಂದಿನವರಗೆ ಅದನ್ನೇ ಬಳಸುತ್ತಿದ್ದೇವೆ. ಅದೇ ಅಂಗಾರಕವನ್ನ ಇಂದಿಗೂ ನಾವು ಬಳಸುತ್ತಿದ್ದೇನೆ ಎಂದರು.Private Durbar darbar12

ನಮಗೆ ಅಂಬಾರಿ, ಸಿಂಹಾಸನ ಎರಡೂ ಮುಖ್ಯ ಪಾರಂಪರಿಕೆ, ನಂಬಿಕೆ ಉಳಿಸಿಕೊಂಡು ಅನುಸರಿಸಿಕೊಂಡು ಹೋಗುತ್ತಿದ್ದೇವೆ. ಅದರ ಶಕ್ತಿ, ಇತಿಹಾಸ ಎಲ್ಲವೂ ಕನ್ನಡಿಗರ ಪಾರಂಪರಿಕ ಸಂಕೇತ. ನಾವು ಹೇಳುವುದಕ್ಕಿಂತ ಮಾಡಬೇಕಾಗಿದೆ. ಮನೆಯಲ್ಲಿ ಹಿರಿಯರು ಕಿರಿಯರಿಗೆ ತಿಳಿಸಬೇಕಿದೆ. ನಾನು ಮನೆ ಬಿಟ್ಟು ಬೇರೆಯವರಿಗೆ ಏನೂ ಹೇಳಲ್ಲ. ಆದರೆ, ನನಗೂ ಇಬ್ಬರು ಮಕ್ಕಳು ಇದ್ದಾರೆ. ಅವರಿಗೆ ನಾವು ಏನು,? ಏನು ಆಚರಿಸಬೇಕು ಎಂಬುದರ ಕುರಿತು ತಿಳಿಸಬೇಕು. ಜೆ‌ನ್ ಜಿ ಗಳಿಗೆ ಹೇಳುವ ಬದಲು ನಾವು ತಪ್ಪುಗಳನ್ನ ಸರಿಪಡಿಸಿಕೊಂಡು ತಿದ್ದಬೇಕು. ನಾವು ತಿದ್ದಿ ತೀಡಿದರೆ ಅವರೂ ನಮ್ಮನ್ನ ಹಿಂಬಾಲಿಸ್ತಾರೆ ಎಂದು ತಿಳಿಸಿದರು.begins darbar1

ರಾತ್ರಿ ವೇಳೆ ಅರಮನೆ ಸುತ್ತ- ಮುತ್ತ ಮದ್ಯ ಸೇವನೆ, ಕೇಕ್ ಕಟ್, ಆನೆಗಳ ತಾಲೀಮು ವೇಳೆ ಕೀಟಲೆ ವಿಚಾರ ಕುರಿತು ಪ್ರತಿಕ್ರಿಯಿಸಿದ ಯದುವೀರ್, ಶಿಷ್ಠಾಚಾರ ರೂಪಿಸುವಲ್ಲಿ ಸರ್ಕಾರ ವಿಫಲವಾಗಿವೆ. ಆಡಳಿತ ನಡೆಸುವವರು ದಿಟ್ಟ ಕ್ರಮ ಕೈಗೊಳ್ಳಬೇಕು. ಪೊಲೀಸ್ ಇಲಾಖೆ, ಎಂಸಿಸಿ ಕಠಿಣ ಕ್ರಮ ಜರುಗಿಸಬೇಕು. ಸಮಾಜಕ್ಕೆ ಒಂದು ಭಯವಿರಬೇಕು. ತಪ್ಪು ಮಾಡಿದರೆ ಶಿಕ್ಷೆ ಆಗುತ್ತೆ ಅನ್ನೋದು ಬರಬೇಕು ಎಂದರು.Mysore Palace jk02_new jk02 new

ಮೈಸೂರಿನಲ್ಲಿ ಫ್ಲೆಕ್ಸ್ ರಾರಾಜಿಸುತ್ತಿರುವ ವಿಚಾರ, ಫ್ಲೆಕ್ಸ್ ಯಾರೇ ಹಾಕಿದರೂ ದಂಡ ವಿಧಿಸಿ. ನನ್ನ ಫೋಟೋ ಇದ್ದರೂ ನನಗೂ ದಂಡ ವಿಧಿಸಿ. ಆ ರೀತಿ ದಂಡ ವಿಧಿಸಿದರೆ ಎಲ್ಲವೂ ಸರಿ ಆಗುತ್ತದೆ ಎಂದರು.

 

English Summary
Title

Mysore Palace Private Durbar 2026 Begins: Yaduveer Wadiyar Ascends Golden Throne for Dasara

Short Description
The traditional Khasgi Durbar (Private Durbar) for the 2026 Mysuru Dasara celebrations has officially begun at the iconic Mysore Palace. In a centuries-old ritual, the titular king and MP Yaduveer Krishnadatta Chamaraja Wadiyar ascended the gem-studded Golden Throne (Ratna Simhasana) during an auspicious morning window today, October 11. This exclusive royal ceremony marks the formal start of the 10-day Sharannavaratri festival. While the private court remains restricted to royal family members and special dignitaries, the grand heritage event sets off the vibrant cultural festivities across Mysuru, culminating in the famous Jumboo Savari procession.
Keywords
Private Durbar, begins, Mysore Palace, Yaduveer