Sunday, October 11, 2026

Dasara Wishes

ಇಂದು ದಾವಣಗೆರೆಯಲ್ಲಿ ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸಭೆ DasraWishes_JK DasraWishes JK
Happy Dasara
Home Front Page ಮೈಸೂರಿನಲ್ಲಿ ಗೊಂಬೆಗಳ ದಸರಾ ಪ್ರದರ್ಶನ: ಭಾರತೀಯ ಸಂಸ್ಕೃತಿ, ಆಧುನಿಕ ಜೀವನಶೈಲಿಯ ಅನಾವರಣ

ಮೈಸೂರಿನಲ್ಲಿ ಗೊಂಬೆಗಳ ದಸರಾ ಪ್ರದರ್ಶನ: ಭಾರತೀಯ ಸಂಸ್ಕೃತಿ, ಆಧುನಿಕ ಜೀವನಶೈಲಿಯ ಅನಾವರಣ

ಮೈಸೂರು,ಆಕ್ಟೋಬರ್,11,2026 (www.justkannada.in): ಮೈಸೂರಿನ ಮೂಕಾಂಬಿಕಾ ಸಮೃದ್ಧಿ ಬಡಾವಣೆಯ ‘ಬನಶಂಕರಿ ಬೊಂಬೆ ಮನೆ’ಯಲ್ಲಿ ಒಂಬತ್ತನೇ ವರ್ಷದ ದಸರಾ ಗೊಂಬೆ ಪ್ರದರ್ಶನ ಆಯೋಜಿಸಲಾಗಿದ್ದು, ಪಾರಂಪರಿಕ ಕಲೆ ಮತ್ತು ಸಮಕಾಲೀನ ಜೀವನಶೈಲಿಯ ಸಮ್ಮಿಲನ ವೀಕ್ಷಕರ ಗಮನ ಸೆಳೆಯುತ್ತಿದೆ.

ಪುರಾಣಗಳ ಪುಣ್ಯಪ್ರಸಂಗಗಳು, ಐತಿಹಾಸಿಕ ಮಹನೀಯರ ಜೀವನಗಾಥೆಗಳು, ದೇವಾನುದೇವತೆಗಳ ದಿವ್ಯರೂಪಗಳು ಹಾಗೂ ಭಾರತೀಯ ಸಂಸ್ಕೃತಿಯ ವೈಭವ—ಇವೆಲ್ಲವೂ 500ಕ್ಕೂ ಹೆಚ್ಚು ಗೊಂಬೆಗಳ ಮೂಲಕ ಅನಾವರಣಗೊಂಡಿರುವ ಅಪರೂಪದ ಸಾಂಸ್ಕೃತಿಕ ಲೋಕ ಮೈಸೂರಿನ ಶ್ರೀರಾಂಪುರದಲ್ಲಿ ತೆರೆದುಕೊಂಡಿದೆ.Doll Exhibition During Dasara Mysuru bombemane

ಪ್ರದರ್ಶನದಲ್ಲಿ ಬೇಡರ ಕಣ್ಣಪ್ಪನ ಭಕ್ತಿ, ಕನಕಧಾರ ಸ್ತೋತ್ರದ ಮಹಿಮೆ ಹಾಗೂ ಸಮುದ್ರ ಮಂಥನದ ಪೌರಾಣಿಕ ಪ್ರಸಂಗಗಳನ್ನು ಬಿಂಬಿಸುವ ಗೊಂಬೆಗಳು ಪ್ರಮುಖ ಆಕರ್ಷಣೆಯಾಗಿವೆ. ಅಯೋಧ್ಯೆಯ ಶ್ರೀರಾಮಮಂದಿರ ಮತ್ತು ಒಡಿಶಾದ ಪ್ರಸಿದ್ಧ ಕೋನಾರ್ಕ ಸೂರ್ಯ ದೇವಾಲಯದ ಮಾದರಿಗಳು ಭಾರತದ ಧಾರ್ಮಿಕ ಹಾಗೂ ವಾಸ್ತುಶಿಲ್ಪದ ಪರಂಪರೆಯನ್ನು ಪರಿಚಯಿಸುತ್ತವೆ. ಮಾತೃಪಿತೃ ಭಕ್ತಿಗೆ ಮಾದರಿಯಾದ ಶ್ರವಣಕುಮಾರ, ಛತ್ರಪತಿ ಶಿವಾಜಿ ಮಹಾರಾಜ್ ಹಾಗೂ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನ ಜೀವನಗಾಥೆಗಳನ್ನು ಪ್ರತಿಬಿಂಬಿಸುವ ಮಾದರಿಗಳು ದೇಶದ ಇತಿಹಾಸ, ತ್ಯಾಗ, ಧೈರ್ಯ ಮತ್ತು ದೇಶಭಕ್ತಿಯ ಮೌಲ್ಯಗಳನ್ನು ಸ್ಮರಿಸುವಂತಿವೆ.

ಮೈಸೂರಿನ ಸುತ್ತಮುತ್ತಲಿನ ಪ್ರಮುಖ ಪ್ರವಾಸಿ ತಾಣಗಳು, ಗ್ರಾಮೀಣ ಬದುಕು, ಸಾಂಪ್ರದಾಯಿಕ ಪಟ್ಟದ ಗೊಂಬೆಗಳು ಹಾಗೂ ಆಧುನಿಕ ಜೀವನಶೈಲಿಯನ್ನು ಬಿಂಬಿಸುವ ವಿನ್ಯಾಸಗಳನ್ನೂ ಪ್ರದರ್ಶನದಲ್ಲಿ ಅಳವಡಿಸಲಾಗಿದೆ. ಅರಣ್ಯ ಸಂರಕ್ಷಣೆಯ ಮಹತ್ವವನ್ನು ಸಾರುವ ಮಾದರಿಗಳು ಪರಿಸರ ಜಾಗೃತಿಯ ಸಂದೇಶವನ್ನು ನೀಡುತ್ತವೆ. ವಿವಿಧ ವಿಷಯಗಳನ್ನು ಆಧರಿಸಿ ಗೊಂಬೆಗಳನ್ನು ಅಚ್ಚುಕಟ್ಟಾಗಿ ಜೋಡಿಸಿರುವುದು ಪ್ರದರ್ಶನದ ವಿಶೇಷತೆಯಾಗಿದೆ. ಪೌರಾಣಿಕ ಹಾಗೂ ಐತಿಹಾಸಿಕ ಪ್ರಸಂಗಗಳನ್ನು ದೃಶ್ಯರೂಪದಲ್ಲಿ ಪರಿಚಯಿಸುವ ಈ ಪ್ರಯತ್ನವು ಮಕ್ಕಳಲ್ಲಿ ನಮ್ಮ ಸಂಸ್ಕೃತಿ ಮತ್ತು ಪರಂಪರೆಯ ಬಗ್ಗೆ ಕುತೂಹಲ ಮೂಡಿಸುವುದರ ಜೊತೆಗೆ ಹಿರಿಯರಿಗೂ ನೆನಪುಗಳನ್ನು ಮೆಲುಕು ಹಾಕುವ ಅವಕಾಶ ಒದಗಿಸುತ್ತದೆ.Doll Exhibition During Dasara Mysuru jk02_new jk02 new

ಪ್ರದರ್ಶನದ ಮತ್ತೊಂದು ವಿಶೇಷ ಆಕರ್ಷಣೆಯೆಂದರೆ ಬಾಲಪ್ರತಿಭೆ ಡಾ. ಪೃಥು ಪಿ. ಅದ್ವೈತ್ ಅವರು ಗೊಂಬೆಗಳ ಹಿನ್ನೆಲೆ, ಪೌರಾಣಿಕ ಕಥೆಗಳು, ಐತಿಹಾಸಿಕ ಮಹತ್ವ ಹಾಗೂ ಸಾಂಸ್ಕೃತಿಕ ವೈಶಿಷ್ಟ್ಯಗಳನ್ನು ಕನ್ನಡ, ಸಂಸ್ಕೃತ ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ವಿವರಿಸಲಿರುವುದು. ಇದರಿಂದ ಮಕ್ಕಳು ಸೇರಿದಂತೆ ವಿವಿಧ ವಯೋಮಾನದ ವೀಕ್ಷಕರಿಗೆ ಗೊಂಬೆಗಳ ಹಿಂದಿರುವ ಕಥೆ ಮತ್ತು ಸಂದೇಶವನ್ನು ಅರಿಯಲು ಅವಕಾಶ ದೊರೆಯಲಿದೆ.

Key words: Doll Exhibition, Dasara,  Mysuru

 

English Summary
Title

Doll Exhibition During Dasara in Mysuru: A Showcase of Indian Culture and Modern Lifestyle

Short Description
The ninth annual Dasara doll exhibition is being held at the ‘Banashankari Bombe Mane’ in Mysuru’s Mookambika Samruddhi Layout, where a blend of traditional art and contemporary lifestyle is capturing the attention of visitors. A unique cultural world has unfolded in Mysuru’s Srirampura, showcasing—through more than 500 dolls—auspicious episodes from mythology, the life stories of historical figures, the divine forms of deities, and the grandeur of Indian culture.