Monday, September 21, 2026

BDA Apartments

Ganesha Festival Attack Mysuru BDA JK_Adv BDA Adv
Home Crime ಮೈಸೂರಲ್ಲಿ ಗಣೇಶನ ವಿಚಾರಕ್ಕೆ ಗಲಾಟೆ: ಮಚ್ಚಿನಿಂದ ವ್ಯಕ್ತಿ ಮೇಲೆ ಹಲ್ಲೆ

ಮೈಸೂರಲ್ಲಿ ಗಣೇಶನ ವಿಚಾರಕ್ಕೆ ಗಲಾಟೆ: ಮಚ್ಚಿನಿಂದ ವ್ಯಕ್ತಿ ಮೇಲೆ ಹಲ್ಲೆ

ಮೈಸೂರು,ಸೆಪ್ಟಂಬರ್‌,21,2026 (www.justkannada.in) ಗಣೇಶೋತ್ಸವಕ್ಕೆ ಸಂಬಂಧಿಸಿದ ವಿಚಾರವಾಗಿ ಎರಡು ಗುಂಪುಗಳ ನಡುವೆ ಉಂಟಾದ ಜಗಳ ಹಲ್ಲೆ ಹಾಗೂ ಗಲಭೆಗೆ ತಿರುಗಿರುವ ಘಟನೆ ಮೈಸೂರಿನ ಕುವೆಂಪುನಗರ ಪೊಲೀಸ್ ಠಾಣಾ ವ್ಯಾಪ್ತಿಯ ದೇವಯ್ಯನಹುಂಡಿಯಲ್ಲಿ ನಡೆದಿದೆ.

ಭಾನುವಾರ ರಾತ್ರಿ ದೇವಯ್ಯನಹುಂಡಿಯಲ್ಲಿ ಗಣೇಶನ ವಿಚಾರವಾಗಿ ಎರಡು ಗುಂಪುಗಳ ನಡುವೆ ಮಾತಿನ ಚಕಮಕಿ ನಡೆದು, ಬಳಿಕ ಜಗಳ ಉಂಟಾಗಿದೆ. ಸ್ಥಳೀಯರು ಮಧ್ಯಪ್ರವೇಶಿಸಿ ಎರಡೂ ಗುಂಪಿನವರನ್ನು ಸಮಾಧಾನಪಡಿಸಿ ಪರಿಸ್ಥಿತಿಯನ್ನು ತಿಳಿಗೊಳಿಸಿದ್ದರು.

ಆದರೆ, ಸೋಮವಾರ ಬೆಳಗ್ಗೆ ಮತ್ತೆ ಗಲಾಟೆ ನಡೆದಿದೆ ಎನ್ನಲಾಗಿದೆ. ಒಂದು ಗುಂಪಿನವರು ಮತ್ತೆ ಕೆಲ ಯುವಕರನ್ನು ಕರೆಸಿಕೊಂಡು ಮತ್ತೊಂದು ಗುಂಪಿನ ವ್ಯಕ್ತಿಗಳ ಮೇಲೆ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ. ಈ ವೇಳೆ ವ್ಯಕ್ತಿಯೊಬ್ಬರ ಮೇಲೆ ಮಚ್ಚಿನಿಂದ ಹಲ್ಲೆ ನಡೆದಿದ್ದು, ಅವರು ಗಾಯಗೊಂಡಿದ್ದಾರೆ.Ganesha Festival Attack Mysuru assult

ಘಟನೆ ಬಗ್ಗೆ ಮಾಹಿತಿ ತಿಳಿಯುತ್ತಿದ್ದಂತೆ ಕುವೆಂಪುನಗರ ಠಾಣೆಯ ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಸ್ಥಿತಿಯನ್ನು ನಿಯಂತ್ರಿಸಿದರು. ಗಾಯಾಳುವನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.ಮೈಸೂರಲ್ಲಿ ಗಣೇಶನ ವಿಚಾರಕ್ಕೆ ಗಲಾಟೆ ganesha ganesha 2

ಗಲಭೆಗೆ ಸಂಬಂಧಿಸಿದಂತೆ ಪೊಲೀಸರು ಓರ್ವನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಘಟನೆ ಹಿನ್ನೆಲೆಯಲ್ಲಿ ದೇವಯ್ಯನಹುಂಡಿಯಲ್ಲಿ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿದ್ದು, ಸದ್ಯ ಪರಿಸ್ಥಿತಿ ಶಾಂತವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.ಮಚ್ಚಿನಿಂದ ವ್ಯಕ್ತಿ ಮೇಲೆ ಹಲ್ಲೆ jk02_new jk02 new

ಘಟನೆಗೆ ಸಂಬಂಧಿಸಿದಂತೆ ಹೆಚ್ಚಿನ ಮಾಹಿತಿ ಹಾಗೂ ಹಲ್ಲೆಯ ನಿಖರ ಕಾರಣ ಪೊಲೀಸ್ ತನಿಖೆಯಿಂದ ತಿಳಿದುಬರಬೇಕಿದೆ.

Key words: Ganesha ,issue, Mysuru,  Man, Attack , weapons

English Summary
Title

Ganesha Festival : Attack in Mysuru

Short Description
An incident where a dispute between two groups regarding the Ganesha festival escalated into an assault and a riot has occurred at Devayyanahundi, within the limits of the Kuvempunagar police station in Mysuru.