Saturday, November 7, 2026

Dasara Wishes

Just Kannada DasraWishes_JK DasraWishes JK
Happy Dasara
Home Crime ಚಾಮುಂಡಿ ಬೆಟ್ಟದಲ್ಲಿ ಮದ್ಯ ಸೇವಿಸಿ ಹುಚ್ಚಾಟ: ಯುವಕರಿಗೆ ಬಿಸಿ ಮುಟ್ಟಿಸಿದ ಪೊಲೀಸರು

ಚಾಮುಂಡಿ ಬೆಟ್ಟದಲ್ಲಿ ಮದ್ಯ ಸೇವಿಸಿ ಹುಚ್ಚಾಟ: ಯುವಕರಿಗೆ ಬಿಸಿ ಮುಟ್ಟಿಸಿದ ಪೊಲೀಸರು

ಮೈಸೂರು, ಸೆಪ್ಟಂಬರ್‌,21,2026 (www.justkannada.in) ಮೈಸೂರಿನ :ಚಾಮುಂಡಿ ಬೆಟ್ಟದ ವ್ಯೂ ಪಾಯಿಂಟ್ ಬಳಿ ಸಾರ್ವಜನಿಕವಾಗಿ ಮದ್ಯ ಮತ್ತು ಸಿಗರೇಟ್ ಸೇವಿಸಿ ಹುಚ್ಚಾಟ ಮೆರೆದಿದ್ದ 7-8 ಯುವಕರಿಗೆ ಮೈಸೂರು ನಗರ ಪೊಲೀಸರು ಬಿಸಿ ಮುಟ್ಟಿಸಿದ್ದಾರೆ.

ಚಾಮುಂಡಿ ಬೆಟ್ಟದ ವ್ಯೂ ಪಾಯಿಂಟ್ ಬಳಿ ಸುಮಾರು 7 ರಿಂದ 8 ಜನ ಹುಡುಗರು ಗುಂಪಾಗಿ ಕುಳಿತು ಮದ್ಯಪಾನ ಮಾಡಿ ಸಾರ್ವಜನಿಕರಿಗೆ ಉಪದ್ರವ ನೀಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು.

“Illegal activities at Chamundi hills during morning hours, These guys are consuming alcohol and cigarettes” ಎಂದು ಸಾಮಾಜಿಕ ಜಾಲತಾಣ X ನಲ್ಲಿ ವಿಡಿಯೋ ಪೋಸ್ಟ್ ಆಗಿದ್ದು, ಸುಮಾರು 9 ಸಾವಿರಕ್ಕೂ ಹೆಚ್ಚು ಜನರು ವೀಕ್ಷಿಸಿದ್ದರು.

ವಿಡಿಯೋ ವೈರಲ್ ಆಗುತ್ತಿದ್ದಂತೆ ಎಚ್ಚೆತ್ತ ಕೃಷ್ಣರಾಜ ಪೊಲೀಸ್ ಠಾಣೆ ಪೊಲೀಸರು ಕೂಡಲೇ ಕಾರ್ಯಾಚರಣೆ ನಡೆಸಿ ವಿಡಿಯೋದಲ್ಲಿದ್ದ ಯುವಕರನ್ನು ಪತ್ತೆ ಮಾಡಿದ್ದಾರೆ.

ಆರೋಪಿಗಳು ಕುಶಾಲನಗರದವರು ಎಂದು ಹೇಳಿಕೊಂಡಿದ್ದು, ಅವರೆಲ್ಲರನ್ನು ವಶಕ್ಕೆ ಪಡೆದು ಠಾಣೆಗೆ ಕರೆತಂದು ಸೂಕ್ತ ಕಾನೂನು ಕ್ರಮ ಜರುಗಿಸಿ ಎಚ್ಚರಿಕೆ ನೀಡಿ ಕಳುಹಿಸಲಾಗಿದೆ ಎಂದು ಮೈಸೂರು ನಗರ ಪೊಲೀಸರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.Chamundi Hill police crackdown jk02_new jk02 new

ಈ ಸಂಬಂಧ ಕೃಷ್ಣರಾಜ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

English Summary
Title

Drunken antics at Chamundi Hill: Police crack down on youths

Short Description
The Mysuru City Police have launched a strict crackdown on public nuisance, illegal alcohol consumption, and smoking at Chamundi Hill in response to widespread complaints of unruly behavior. Authorities are conducting thorough vehicle checks, issuing heavy spot fines, and enforcing a night entry ban between 10:00 PM and 6:00 AM to preserve the sanctity of the tourist destination.
Keywords
Chamundi Hill police crackdown, Mysuru tourist safety news