Thursday, August 6, 2026

BDA Apartments

Home Front Page ಸಿದ್ದರಾಮಯ್ಯನವರೇ ಮಂತ್ರಿ ಮಾಡ್ತೀನಿ ಅಂದಿದ್ರು: ಕೊಟ್ಟ ಮಾತು ತಪ್ಪಿದ್ದಕ್ಕೆ ಬೇಸರ ಆಯ್ತು-ಶಾಸಕ ಬಿ.ಆರ್ ಪಾಟೀಲ್

ಸಿದ್ದರಾಮಯ್ಯನವರೇ ಮಂತ್ರಿ ಮಾಡ್ತೀನಿ ಅಂದಿದ್ರು: ಕೊಟ್ಟ ಮಾತು ತಪ್ಪಿದ್ದಕ್ಕೆ ಬೇಸರ ಆಯ್ತು-ಶಾಸಕ ಬಿ.ಆರ್ ಪಾಟೀಲ್

ಕಲಬುರಗಿ,ಆಗಸ್ಟ್,6,2026 (www.justkannada.in): ಸಿದ್ದರಾಮಯ್ಯನವರೇ ನನ್ನನ್ನ ಕರೆದು ಮಂತ್ರಿ ಮಾಡುತ್ತೇನೆ ಎಂದಿದ್ದರು. ಆದರೆ ಕೊಟ್ಟ ಮಾತು ತಪ್ಪಿದ್ದಕ್ಕೆ ಬೇಸರ ಆಗಿದೆ ಎಂದು ಶಾಸಕ ಬಿ.ಆರ್ ಪಾಟೀಲ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಶಾಸಕ ಬಿಆರ್ ಪಾಟೀಲ್,  ನನಗೆ ಸಚಿವ ಸ್ಥಾನ ನೀಡಲು ನಮ್ಮ ಜಿಲ್ಲೆಯಿಂದಲೇ ಅಡ್ಡಿಯಂತೆ.  ಅಡ್ಡಿ ಇರುವುದರ ಬಗ್ಗೆ ಸಿದ್ದರಾಮಯ್ಯ ಅವರೇ ಹೇಳಿದ್ದಾರೆ ಸಿದ್ದರಾಮಯ್ಯ ನೆಪ ಹೇಳಿದ್ರೋ ಸತ್ಯ ಹೇಳ್ತಿದ್ದಾರೋ ಗೊತ್ತಿಲ್ಲ.  ನಾನು ಯಾವತ್ತೂ ಮಂತ್ರಿ ಮಾಡಿ ಅಂತಾ ಎಲ್ಲಿಯೂ ಹೋಗಿಲ್ಲ.   ಸಿದ್ದರಾಮಯ್ಯ ಚುನಾವಣೆ ವೇಳೆ ನನ್ನ ಗೆಳೆಯನ ಆಯ್ಕೆ ಮಾಡಿ ನಾನು ಸಚಿವನನ್ನಾಗಿ ಮಾಡಿ ಕಳುಹಿಸುತ್ತೇನೆ ಅಂತಾ ಹೇಳಿದ್ದರು.

ಸಿದ್ದರಾಮಯ್ಯ 3 ಬಾರಿ ಕರೆದು ಮಂತ್ರಿ ಮಾಡುವುದಾಗಿ ಹೇಳಿದ್ದರು. ಮಂತ್ರಿ ಮಾಡಿ ಎಂದು ನಾನೇನು ಅರ್ಜಿ ಹಾಕಿಲ್ಲ. ಅವರೇ ಕರೆದಿದ್ದರು. ಕೊಟ್ಟ ಮಾತು ತಪ್ಪಿದ್ದಕ್ಕೆ ಬೇಸರ ಆಯಿತು. 140 ಶಾಸಕರು ಇದ್ದಾರೆ ಕರೆದು ಮಾತನಾಡುವ ಸಂದರ್ಭವಿಲ್ಲ  ಎಂದು ಶಾಸಕ ಬಿಆರ್ ಪಾಟೀಲ್ ಬೇಸರ ವ್ಯಕ್ತಪಡಿಸಿದರು.

Key words: Siddaramaiah, minister Post, MLA, BR Patil