Tuesday, September 22, 2026

BDA Apartments

ಪಕ್ಷದ ಅಭ್ಯರ್ಥಿಯಾಗ್ತಾರೆ ಅವರನ್ನ ಗೆಲ್ಲಿಸಿಕೊಂಡು ಬರುವುದಷ್ಟೇ ನಮ್ಮ ಕೆಲ...
Home Front Page ಪಕ್ಷದ ಅಭ್ಯರ್ಥಿಯಾಗ್ತಾರೆ ಅವರನ್ನ ಗೆಲ್ಲಿಸಿಕೊಂಡು ಬರುವುದಷ್ಟೇ ನಮ್ಮ ಕೆಲಸ : ಬಿಜೆಪಿ ನಗರಾಧ್ಯಕ್ಷ.

ಪಕ್ಷದ ಅಭ್ಯರ್ಥಿಯಾಗ್ತಾರೆ ಅವರನ್ನ ಗೆಲ್ಲಿಸಿಕೊಂಡು ಬರುವುದಷ್ಟೇ ನಮ್ಮ ಕೆಲಸ : ಬಿಜೆಪಿ ನಗರಾಧ್ಯಕ್ಷ.

mysore ̲ bjp ̲ prathap ̲ simha ̲ nagendra ̲ yaduveer

 

ಮೈಸೂರು, ಮಾ, ೧೨, ೨೦೨೪ :  ಜನತಾ ಪಾರ್ಟಿಯಿಂದ ತುರ್ತು ಸುದ್ದಿಗೋಷ್ಠಿ. ನಗರದ ಖಾಸಗಿ ಹೋಟೆಲ್ ನಲ್ಲಿ ಸುದ್ದಿಗೋಷ್ಠಿ. ಸಂಸದ ಪ್ರತಾಪ್ ಸಿಂಹ ಗೆ ಟಿಕೆಟ್ ಕೈ ತಪ್ಪುವ ವಿಚಾರ. ಮಾಧ್ಯಮಗಳಲ್ಲಿ ಸುದ್ದಿ ಪ್ರಸಾರ ಬೆನ್ನಲ್ಲೇ ಸುದ್ದಿಗೋಷ್ಠಿ.

ನಾವ್ಯಾರು ಕೂಡ ಟಿಕೆಟ್ ಕೊಡಲಿಕ್ಕೆ ಸಾಧ್ಯವಿಲ್ಲ. ಟಿಕೆಟ್ ನೀಡುವ ಶಕ್ತಿ ನಮ್ಮಲಿಲ್ಲ. ಕಾರ್ಯಕರ್ತರು ಯಾರು ಕೂಡ ಗೊಂದಲಕ್ಕೆ ಒಳಗಾಗಬಾರದು ಬಿಜೆಪಿ ನಗರಾಧ್ಯಕ್ಷ ಎಲ್ ನಾಗೇಂದ್ರ ಹೇಳಿಕೆ.

ಪ್ರತಾಪ್ ಸಿಂಹ ಮೊದಲ ಬಾರಿ ಚುನಾವಣೆಗೆ ಬಂದಾಗ ಉತ್ತಮ ಗೆಲುವು ಕೊಟ್ಟಿದ್ದೇವೆ. ಚುನಾವಣೆ ಬಳಿಕ ಉತ್ತಮ ಕೆಲಸ ಮಾಡಿದ್ದಾರೆ. ಪಕ್ಷ ಸಂಘಟನೆಗೂ ಹೆಚ್ಚಿನ ಆದ್ಯತೆ ನೀಡಿದ್ದಾರೆ. ಅದೇ ರೀತಿ ಮೈಸೂರು ಮಹಾರಾಜರ ಕೊಡುಗೆ ದೊಡ್ಡದು. ಅವರ ಬಗ್ಗೆ ಯಾರೇ ಆದರು ಕೂಡ ಲಘುವಾಗಿ ಮಾತನಾಡಬಾರದು. ಬಿಜೆಪಿ ನಗರಾಧ್ಯಕ್ಷ ಎಲ್ ನಾಗೇಂದ್ರ  ಎಚ್ಚರಿಕೆ.

ಪಕ್ಷದ ಅಭ್ಯರ್ಥಿಯಾಗ್ತಾರೆ ಅವರನ್ನ ಗೆಲ್ಲಿಸಿಕೊಂಡು ಬರುವುದಷ್ಟೇ ನಮ್ಮ ಕೆಲ...

ಅಭ್ಯರ್ಥಿ ಘೋಷಣೆ ಮಾಡುವ ಶಕ್ತಿ ನಮಗಿಲ್ಲ.ನಾವೆಲ್ಲರೂ ಪಕ್ಷದ ಸಿಪಾಯಿಗಳು. ಯಾರು ಪಕ್ಷದ ಅಭ್ಯರ್ಥಿಯಾಗ್ತಾರೆ ಅವರನ್ನ ಗೆಲ್ಲಿಸಿಕೊಂಡು ಬರುವುದಷ್ಟೇ ನಮ್ಮ ಕೆಲಸ. ಸುದ್ದಿಗೋಷ್ಠಿಯಲ್ಲಿ ಬಿಜೆಪಿ ನಗರಾಧ್ಯಕ್ಷ ಎಲ್ ನಾಗೇಂದ್ರ ಹೇಳಿಕೆ.

ಮೈಸೂರು ಕೊಡಗು ಲೋಕಸಭಾ ಕ್ಷೇತ್ರ ಟಿಕೆಟ್ ವಿಚಾರ. ಡಾ ಮಂಜುನಾಥ್, ಅಪ್ಪಚ್ಚು ರಂಜನ್, ಸೇರಿದಂತೆ ಹಲವು ಟಿಕೆಟ್ ಆಕಾಂಕ್ಷಿಗಳಿದ್ದರು. ನಾವು ಅದನ್ನ ಈಶ್ವರಪ್ಪನವರು ಬಂದಾಗ ಮಾಹಿತಿ ನೀಡಿದ್ವಿ. ಅಭ್ಯರ್ಥಿ ಯಾರಾಗಬೇಕೆಂದು ಅಂದು ಅಭಿಪ್ರಾಯ ಸಂಗ್ರಹ ಮಾಡಿದ್ದರು. ಪ್ರತಿಯೊಬ್ಬರೂ ತಮ್ಮ ತಮ್ಮ ಅಭಿಪ್ರಾಯ ಹೇಳಿದ್ದಾರೆ. ಅದನ್ನ ಹೈಕಮಾಂಡ್ ಗೆ ತಲುಪಿಸಿದ್ದಾರೆ. ಅದರ ಬಗ್ಗೆ ಮಾಹಿತಿ ನಮಗೆ ಇರಲ್ಲ.

ಬಿಜೆಪಿ ನಗರಾಧ್ಯಕ್ಷ prathap simha

ವಿಧಾನಸಭಾ ಚುನಾವಣೆಯಲ್ಲಿ ಸೋತವರು ಅವರ ನಡವಳಿಕೆಯಿಂದ ಸೋತಿರಬಹುದು ಎಂಬ ಪ್ರತಾಪ್ ಸಿಂಹ ಹೇಳಿಕೆ ವಿಚಾರ,  ನನ್ನ ನಡವಳಿಕೆ ಅನ್ನೋದು ಅವರ ಅಭಿಪ್ರಾಯ. ನನ್ನ ನಡವಳಿಕೆಯಿಂದ ಪಕ್ಷಕ್ಕೆ ಯಾವುದೇ ರೀತಿಯ ಮುಜುಗರ ಆಗಿಲ್ಲ. ನನ್ನ ನಡವಳಿಕೆ ಸರಿಯಿಲ್ಲ ಎನ್ನುವುದಾದರೆ ನನಗೆ ನಗರಾಧ್ಯಕ್ಷ ಸ್ಥಾನ ನೀಡುತ್ತಿದ್ರೆ.?

ಪ್ರತಾಪ್ ಸಿಂಹ ಗೆ  ಟಾಂಗ್ ನೀಡಿದ ಬಿಜೆಪಿ ನಗರಾಧ್ಯಕ್ಷ ಎಲ್ ನಾಗೇಂದ್ರ.

key words : mysore ̲ bjp ̲ prathap ̲ simha ̲ nagendra ̲ yaduveer