Sunday, August 23, 2026

BDA Apartments

Home Front Page ಇವತ್ತಿಗೂ ನಮಗೆ ಪ್ರತಾಪ್ ಸಿಂಹ ಲೀಡರ್ : ಮಾಜಿ ಸಚಿವ ಎಸ್. ಎ. ರಾಮದಾಸ್‌

ಇವತ್ತಿಗೂ ನಮಗೆ ಪ್ರತಾಪ್ ಸಿಂಹ ಲೀಡರ್ : ಮಾಜಿ ಸಚಿವ ಎಸ್. ಎ. ರಾಮದಾಸ್‌

bjp  ̲  mysore  ̲  Ramdas  ̲ prathap  ̲ simha ̲ oppose

ಮೈಸೂರು, ಮಾ.೧೨, ೨೦೨೪ : ಕಳೆದ ವಿಧಾನಸಭಾ ಚುನಾವಣೆ ವೇಳೆ ನನಗೂ  ಟಿಕೆಟ್ ಮಿಸ್ ಆಯ್ತು. ಆಗ ನಾನು ಪಕ್ಷದಲ್ಲೇ ಉಳಿದುಕೊಂಡು ಕೆಲಸ ಮಾಡಿದೆ. ಬಿಜೆಪಿ ಹಿರಿಯ ಮುಖಂಡ ಎಸ್.‌ ಎ. ರಾಮದಾಸ್‌ ಹೇಳಿಕೆ.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ರಾಮದಾಸ್‌ ಹೇಳಿದಿಷ್ಟು..

ಕೇಂದ್ರದಲ್ಲಿ ಇದುವರೆಗೂ ಅಭ್ಯರ್ಥಿ ಯಾರೆಂಬುದು ಅಂತಿಮವಾಗಿಲ್ಲ. ಪಕ್ಷಕ್ಕೆ ಮುಜುಗರ ಆಗಬಾರದು ಎಂಬ ಕಾರಣಕ್ಕೆ ಸುದ್ದಿಗೋಷ್ಠಿ ಕರೆದಿದ್ದೇವೆ. ಮೈಸೂರು ಅರಸರ ಕೊಡುಗೆಗಳ ಬಗ್ಗೆ ಅಪಾರ ಗೌರವವಿದೆ.

ಯದುವೀರ್ ಒಡೆಯರ್ ರವರು ಜನರ ಜೊತೆ ಬೆರಿತಾರ ಇಲ್ಲವಾ ಎಂಬುದನ್ನ ರಾಷ್ಟ್ರೀಯ ನಾಯಕರು ನಿರ್ಧರಿಸುತ್ತಾರೆ. ಪ್ರತಾಪ್‌ ಸಿಂಹಗೆ ಪರೋಕ್ಷವಾಗಿ ಕಿವಿ ಹಿಂಡಿದ ರಾಮದಾಸ್.

ರಾಮದಾಸ್ ರವರು ಪಕ್ಷಕ್ಕಾಗಿ ಕೆಲಸ ಮಾಡಿದ್ದರು ಎಂದು ಪ್ರತಾಪ್ ಸಿಂಹರವರೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇವತ್ತಿಗೂ ನಮಗೆ ಪ್ರತಾಪ್ ಸಿಂಹ ಲೀಡರ್. ಅವರಿಗೆ ಗೌರವ ಕೊಟ್ಟೆ ಕೊಡುತ್ತೇವೆ. ಅವರಿಗೆ ಟಿಕೆಟ್ ಕೊಟ್ಟರು ಕೆಲಸ ಮಾಡುತ್ತೇವೆ. ರಾಮದಾಸ್‌ ಸ್ಪಷ್ಟನೆ.

ನಾನು ಇನ್ನೊಬ್ಬರಿಗೆ ಪಾಠ ಮಾಡುವಷ್ಟು ದೊಡ್ಡವನಲ್ಲ. ನಾನು ಸೋತ ಬಳಿಕವು ಪಕ್ಷದ ಕೆಲಸ ಕಾರ್ಯಗಳನ್ನ ಮಾಡಿದ್ದೇನೆ. ಸುದ್ದಿಗೋಷ್ಠಿಯಲ್ಲಿ ಮಾಜಿ ಸಚಿವ ಎಸ್ ಎ ರಾಮದಾಸ್ ಹೇಳಿಕೆ.

Key words : bjp  ̲  mysore  ̲  Ramdas  ̲ prathap  ̲ simha ̲ oppose